WhatsApp: ವಾಟ್ಸ್ಆ್ಯಪ್ನಲ್ಲಿ ಫೋಟೋ, ವಿಡಿಯೋ ನೋಡಿದ ಬಳಿಕ ಅಟೋಮೆಟಿಕ್ ಡಿಲೀಟ್ ಆಗೋ ಟ್ರಿಕ್ ಗೊತ್ತಾ?
WhatsApp Tips and Tricks: ವಾಟ್ಸ್ಆ್ಯಪ್ನಲ್ಲಿ ಯಾವುದೇ ಥರ್ಡ್ ಪಾರ್ಟಿ ಆ್ಯಪ್ಗಳನ್ನು ಬಳಸದೆ ನೀವು ಒಬ್ಬರಿಗೆ ಫೋಟೋ ಅಥವಾ ವಿಡಿಯೋವೊಂದನ್ನು ಕಳುಹಿಸಿದಾಗ, ಅದನ್ನು ಅವರು ಓಪನ್ ಮಾಡಿ ನೋಡಿದ ತಕ್ಷಣ ಡಿಲೀಟ್ ಆಗಿ ಬಿಡುವ ಆಯ್ಕೆ ಇದೆ.
ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ (Facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಲೇ ಇದೆ. ಇದಕ್ಕೆ ತಕ್ಕಂತೆ ಅನೇಕ ಟ್ರಿಕ್ಗಳು ಕೂಡ ಹುಟ್ಟಿಕೊಳ್ಳುತ್ತಾ ಇರುತ್ತವೆ. ಈಗಾಗಲೇ ವಾಟ್ಸ್ಆ್ಯಪ್ನಲ್ಲಿ ಡಿಲೀಟ್ ಆದ ಮೆಸೇಜ್ಗಳನ್ನು ಓದಲು, ಡಿಪಿ ಯಾರು ನೋಡಿದ್ದಾರೆಂದು ತಿಳಿಯಲು ಹೀಗೆ ಹೆಚ್ಚಿನ ಆಯ್ಕೆಗಳನ್ನು ತಿಳಿಯಲು ಬೇರೆ ಬೇರೆ ಥರ್ಡ್ ಪಾರ್ಟಿ ಆ್ಯಪ್ಗಳಿವೆ (Third Party App). ಅಂತೆಯೆ ನೀವು ಒಬ್ಬರಿಗೆ ಫೋಟೋ ಅಥವಾ ವಿಡಿಯೋವೊಂದನ್ನು ಕಳುಹಿಸಿದಾಗ, ಅದನ್ನು ಅವರು ಓಪನ್ ಮಾಡಿ ನೋಡಿದ ತಕ್ಷಣ ಡಿಲೀಟ್ ಆಗಿ ಬಿಡುವ ಆಯ್ಕೆ ಕೂಡ ವಾಟ್ಸ್ಆ್ಯಪ್ನಲ್ಲಿದೆ. ಇದಕ್ಕೆ ನೀವು ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡಬೇಕಿಲ್ಲ. ಬದಲಾಗಿ ಈ ಆಯ್ಕೆ ಸ್ವತಃ ವಾಟ್ಸ್ಆ್ಯಪ್ನಲ್ಲೇ ಇದೆ.
ಹೌದು, ವಾಟ್ಸ್ಆ್ಯಪ್ನಲ್ಲಿ View Once Feature ಎಂಬ ಸೌಲಭ್ಯ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಎರಡೂ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ. ವಾಟ್ಸ್ಆ್ಯಪ್ ಪರಿಚಯಿಸಿರುವ ಈ ಹೊಸ ಸಿಂಗಲ್ ವೀವಿಂಗ್ ಆಯ್ಕೆಯನ್ನು ಈಗಾಗಲೇ ಅನೇಕರು ಮೆಚ್ಚಿಕೊಂಡಿದ್ದಾರೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಚಾಟ್ ಬಾಕ್ಸ್ ಓಪನ್ ಮಾಡಿ ಫೋಟೋ ಅಥವಾ ವಿಡಿಯೋ ಕಳುಹಿಸ ಬೇಕೆಂದಿದ್ದರೆ, ಐಕಾನ್ ಮೇಲೆ ಕ್ಲಿಕ್ ಮಾಡುತ್ತೀರಿ. ಆಗ ಫೋಟೊ ಅಥವಾ ವಿಡಿಯೋ ಸೆಲಕ್ಟ್ ಮಾಡಿ ಸೆಂಡ್ ಬಟನ್ ಪ್ರೆಸ್ ಮಾಡುವ ಪಕ್ಕದಲ್ಲೇ ವೀವ್ ಒನ್ಸ್ ಮೋಡ್ ಆಯ್ಕೆ ಇರುತ್ತದೆ. ಅದನ್ನು ಪ್ರೆಸ್ ಮಾಡಿ ಕಳುಹಿಸಿದರೆ, ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ.
ಈ View Once Feature ತನ್ನದೇ ಆದ ಕೆಲ ಅನುಕೂಲತೆಗಳೊಂದಿಗೆ ಕೆಲ ಅನಾನುಕೂಲಗಳನ್ನು ಸಹ ಹೊಂದಿದೆ. ಚಾಟ್ ಒಂದನ್ನು ಓಪನ್ ಮಾಡಿದ ತಕ್ಷಣ ಅದು ಚಾಟ್ ಬಾಕ್ಸ್ ನಿಂದ ಮಾಯವಾಗುವುದು ಹೊಸ ಫೀಚರ್ನ ಅತ್ಯಂತ ಕುತೂಹಲಕಾರಿ ವಿಷಯವಾಗಿದೆ. ಈ ಚಾಟ್ ಅಥವಾ ಇದರಲ್ಲಿನ ಫೋಟೊ, ವಿಡಿಯೋ ಫೋನಿನಲ್ಲಿ ಎಲ್ಲಿಯೂ ಸೇವ್ ಆಗಿರುವುದಿಲ್ಲ ಹಾಗೂ ಇದನ್ನು ನೀವು ಮತ್ತೊಬ್ಬರಿಗೆ ಫಾರ್ವರ್ಡ್ ಕೂಡ ಮಾಡಲಾಗುವುದಿಲ್ಲ ಎಂಬುದು ಬೇಸರದ ಸಂಗತಿ.
ಇನ್ನು ವಾಟ್ಸ್ಆ್ಯಪ್ನಲ್ಲಿ ಮುಂದೆ ಸಾಲು ಸಾಲು ಅಪ್ಡೇಟ್ಗಳು ಬರಲು ತಯಾರಾಗಿದೆ. ಶೀಘ್ರದಲ್ಲೇ ಫೇಸ್ಬುಕ್ನಲ್ಲಿರುವಂತೆಯೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಅನ್ನು ಪರಿಚಯಿಸಲಿದೆ. ಇದರ ಜೊತೆಗೆ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ವಾಟ್ಸ್ಆ್ಯಪ್ ವೆಬ್ ಬಳಸುವ ಆಯ್ಕೆ ಸದ್ಯದಲ್ಲೇ ಬರಲಿದೆಯಂತೆ. ಅಂತೆಯೆ ಲಾಸ್ಟ್ ಸೀನ್, ಪ್ರೊಫೈಲ್ ಫೋಟೋ ಗಳಲ್ಲಿ ಹೊಸ ಆಯ್ಕೆ ಬರಲಿದೆ. ಈ ಹೊಸ ಫೀಚರ್ ವಾಟ್ಸ್ಆ್ಯಪ್ನಲ್ಲಿ ಬಳಕೆದಾರರು ತಮ್ಮ ಲಾಸ್ಟ್ ಸೀನ್, ಸ್ಟೇಟಸ್, ಪ್ರೊಫೈಲ್ ಫೋಟೋ ವಿವರಣೆಯನ್ನು ಯಾರು ನೋಡಬಹುದು ಎಂಬುದನ್ನು ನಿಯಂತ್ರಿಸಲು ಅನುಮತಿಸುತ್ತದೆ.
(WhatsApp updates tricks to delete photo and video automatically here is the details)