UAN Aadhaar Link: ಯುಎಎನ್ ಜೊತೆ ಆಧಾರ್‌ ಲಿಂಕ್‌ ಮಾಡಲು ನವೆಂಬರ್ 30 ಕಡೇ ದಿನ: ಲಿಂಕ್‌ ಮಾಡುವುದು ಹೇಗೆ?

ಯುಎಎನ್​ - ಆಧಾರ್: ನಿಮ್ಮ UAN ಅನ್ನು ಆಧಾರ್ ಸಂಖ್ಯೆಯೊಂದಿಗೆ ನೀವು ಲಿಂಕ್ ಮಾಡದಿದ್ದರೆ, ನಿಮ್ಮ ಉದ್ಯೋಗದಾತರಿಂದ ನೀಮ್ಮ ಖಾತೆಗೆ ಬರುವ ಪಿಎಫ್ ಮೊತ್ತ ಬಂದ್ ಆಗುತ್ತದೆ. ಹೀಗಾಗಿ ನವೆಂಬರ್ 30ರ ಒಳಗೆ ಅಂದರೆ ಇಂದೇ ಯುಎಎನ್‌ ಮತ್ತು ಆಧಾರ್‌ ಜತೆ ಲಿಂಕ್‌ ಮಾಡಿರಿ.

UAN Aadhaar Link: ಯುಎಎನ್ ಜೊತೆ ಆಧಾರ್‌ ಲಿಂಕ್‌ ಮಾಡಲು ನವೆಂಬರ್ 30 ಕಡೇ ದಿನ: ಲಿಂಕ್‌ ಮಾಡುವುದು ಹೇಗೆ?
UAN-Aadhar Link
Follow us
TV9 Web
| Updated By: Vinay Bhat

Updated on: Nov 29, 2021 | 10:27 AM

ಇಪಿಎಫ್‌ಒ (EPFO) ನೀಡುವ ಯುಎಎನ್‌ (ಸಾರ್ವತ್ರಿಕ ಖಾತೆ ಸಂಖ್ಯೆ) ಮತ್ತು ಆಧಾರ್‌ ಜತೆ ಲಿಂಕ್‌ (UAN-Aadhar Link) ಕಲ್ಪಿಸಲು 2021ರ ನವೆಂಬರ್ 30 ಕೊನೇ ದಿನವಾಗಿದೆ. ಲಿಂಕ್‌ ಕಲ್ಪಿಸುವುದು ಕಡ್ಡಾಯವಾಗಿದ್ದು, ತಪ್ಪಿದರೆ ಮುಂಬರುವ ದಿನಗಳಲ್ಲಿ ನಿಮ್ಮ ಕಂಪನಿಯು ಅಥವಾ ಉದ್ಯೋಗದಾತರು ಮಾಸಿಕ ನೀಡುವ ಇಪಿಎಫ್‌ ಪಾಲಿನ ಮೊತ್ತವು ಇಪಿಎಫ್‌ ಖಾತೆಗೆ (PF Account) ಜಮೆಯಾಗುವುದಿಲ್ಲ. ಈ ಹಿಂದೆ ಆಧಾರ್ ಹಾಗೂ ಯುಎಎನ್ ಲಿಂಕ್ ಮಾಡಲು ಆಗಸ್ಟ್ 31, 2021 ಅಂತಿಮ ಗಡುವಾಗಿ ನೀಡಲಾಗಿತ್ತು. ಇತ್ತೀಚೆಗೆ ಇಪಿಎಫ್‌ಒ ಈ ದಿನಾಂಕವನ್ನು ನವೆಂಬರ್ 15 ಕ್ಕೆ ಮುಂದೂಡಿತ್ತು. ನಿವೃತ್ತಿ ಏಜೆನ್ಸಿಗಳು ತಮ್ಮ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ECR) ಸಲ್ಲಿಕೆ ಮಾನದಂಡಗಳನ್ನು ಸಹ ನವೀಕರಿಸಿವೆ. EPFO ಪ್ರಕಾರ, ಉದ್ಯೋಗದಾತರು PF UAN ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಿದ ಉದ್ಯೋಗಿಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು.

ನಿಮ್ಮ UAN ಅನ್ನು ಆಧಾರ್ ಸಂಖ್ಯೆಯೊಂದಿಗೆ ನೀವು ಲಿಂಕ್ ಮಾಡದಿದ್ದರೆ, ನಿಮ್ಮ ಉದ್ಯೋಗದಾತರಿಂದ ನೀಮ್ಮ ಖಾತೆಗೆ ಬರುವ ಪಿಎಫ್ ಮೊತ್ತ ಬಂದ್ ಆಗುತ್ತದೆ. ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯನ್ನು ಲಿಂಕ್ ಮಾಡದ ಹೊರತು ಮತ್ತು ಉದ್ಯೋಗದಾತರು ಮತ್ತು ಅಧಿಕಾರಿಗಳಿಂದ ಡೇಟಾವನ್ನು ಅನುಮೋದಿಸದ ಹೊರತು ರವಾನೆಯಲ್ಲಿ ವಿಳಂಬವನ್ನು ಎದುರಿಸುತ್ತಾರೆ. ಅಲ್ಲದೆ, ಅವರು ತಮ್ಮ ಖಾತೆಯಿಂದ ಪಿಎಫ್ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.

“EPFO ನ ಅಡೆತಡೆಯಿಲ್ಲದ ಸೇವೆಗಳನ್ನು ಪಡೆಯಲು ಮತ್ತು ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಎಲ್ಲಾ ಕೊಡುಗೆದಾರರಿಗೆ ಸಂಬಂಧಿಸಿದಂತೆ ಆಧಾರ್ ಸೀಡಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಉದ್ಯೋಗದಾತರನ್ನು ಕೇಳಲಾಗುತ್ತದೆ. EPFO ಉದ್ಯೋಗದಾತರಿಗೆ ಉದ್ಯೋಗಿಗಳ ಖಾತೆಗಳ ಆಧಾರ್ ಅನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನೀಡಿದೆ. ಉದ್ಯೋಗಿಯ EPF ಖಾತೆಯು ಆಧಾರ್ ಅನ್ನು ಪರಿಶೀಲಿಸದಿದ್ದಲ್ಲಿ, ಉದ್ಯೋಗದಾತರ ಕೊಡುಗೆಯನ್ನು ಉದ್ಯೋಗಿಗಳ ಖಾತೆಗೆ ಜಮಾ ಮಾಡಲಾಗುವುದಿಲ್ಲ ಎಂದು ಅರ್ಥೈಸಬಹುದು” ಎಂದು Avitr Legal ನ ಪಾಲುದಾರ ರೌನಕ್ ಸಿಂಗ್ ತಿಳಿಸಿದ್ದಾರೆ.

ಸಾಮಾಜಿಕ ಭದ್ರತೆ ಕಾಯಿದೆ 2020ರ 142ನೇ ನಿಯಮಾವಳಿಯ ಪ್ರಕಾರ, ಹಾಲಿ ಇಪಿಎಫ್‌ ಸದಸ್ಯರು ಆಧಾರ್‌ ಮೂಲಕ ತಮ್ಮ ಗುರುತನ್ನು ದೃಢಪಡಿಸಬೇಕಾಗುತ್ತದೆ. ನಂತರವಷ್ಟೇ ಪಿಂಚಣಿ, ಗ್ರಾಚ್ಯುಯಿಟಿ ಮತ್ತು ಇತರ ಸೌಲಭ್ಯಗಳನ್ನು ಇಪಿಎಫ್‌ನಿಂದ ತೆಗೆದುಕೊಳ್ಳಬಹುದು. ಸರಳವಾಗಿ ಹೇಳುವುದಿದ್ದರೆ, ಇನ್ನು ಮುಂದೆ ಇಪಿಎಫ್‌ ಯೋಜನೆಗೆ ಸೇರಲು ಮತ್ತು ಅದರಿಂದ ಹಣ ಹಿಂಪಡೆಯಲು ಆಧಾರ್‌ ಕಡ್ಡಾಯ. ಉದ್ಯೋಗದಾತರಿಗೂ ಯುಎಎನ್‌-ಆಧಾರ್‌ ಲಿಂಕ್‌ ಕಲ್ಪಿಸದಿದ್ದರೆ ಹಣ ಜಮೆ ಮಾಡಲು ಸಾಧ್ಯವಾಗುವುದಿಲ್ಲ.

ಯುಎಎನ್‌-ಆಧಾರ್‌ ಲಿಂಕ್‌ ಮಾಡುವುದು ಹೇಗೆ?:

  • ಇಪಿಎಫ್‌ಒ ಸದಸ್ಯರ ಸೇವಾ ವೆಬ್‌ಪೋರ್ಟಲ್‌ ಮೂಲಕ, ಉಮಾಂಗ್‌ ಆ್ಯಪ್‌, ಇಪಿಎಫ್‌ಒ ಪೋರ್ಟಲ್‌ನಲ್ಲಿಇ-ಕೆವೈಸಿ ಮೂಲಕ ಯುಎಎನ್‌-ಆಧಾರ್‌ ಲಿಂಕ್‌ ಕಲ್ಪಿಸಬಹುದು.
  • ಇಪಿಎಫ್‌ಒ ಸದಸ್ಯರ ಸೇವಾ ವೆಬ್‌ಪೋರ್ಟಲ್‌ನ ಲಿಂಕ್‌ನಲ್ಲಿ ಲಾಗಿನ್‌ ಆಗಿ. (https://unifiedportal-mem.epfindia.gov.in/memberinterface/)
  • ಕೆವೈಸಿ ಆಯ್ಕೆ ಒತ್ತಿ
  • ಕೆವೈಸಿಗೆ ಸೇರಿಸಲು ಆಧಾರ್‌ ಆಯ್ಕೆ ಒತ್ತಿ
  • ಆಧಾರ್‌ ಸಂಖ್ಯೆಯನ್ನು ನಮೂದಿಸಿ
  • ‘ಸೇವ್‌’ ಬಟನ್‌ ಒತ್ತಿ. ಸೇವ್‌ ಆದ ನಂತರ ‘ಪೆಂಡಿಂಗ್‌ ಕೆವೈಸಿ’ಯಲ್ಲಿ ಇರುತ್ತದೆ. ನಿಮ್ಮ ಉದ್ಯೋಗದಾತರು ಯುಎಎನ್‌-ಆಧಾರ್‌ ಲಿಂಕ್‌ಗೆ ಅನುಮೋದನೆ ನೀಡಬೇಕಾಗುತ್ತದೆ. ನಿಮ್ಮ ಉದ್ಯೋಗದಾತರು ಅಪ್ರೂವ್‌ ಮಾಡಿದ ನಂತರ ಇಪಿಎಫ್‌ಒ ಮೂಲಕ ಲಿಂಕಿಂಗ್‌ ಪ್ರಕ್ರಿಯೆ ಪೂರ್ಣವಾಗುತ್ತದೆ.

ಯುಎಎನ್‌-ಆಧಾರ್‌ ಲಿಂಕ್‌ ಪರಿಶೀಲನೆ ಹೇಗೆ?:

  • ಇಪಿಎಫ್‌ಒದ ವೆಬ್‌ಸೈಟ್‌ ಲಿಂಕ್‌ ಅನ್ನು ಕ್ಲಿಕ್ಕಿಸಿ: https://unifiedportal-
  •  ಯುಎಎನ್‌ ಮತ್ತು ಪಾಸ್‌ ವರ್ಡ್‌ ಒತ್ತಿ ಲಾಗಿನ್‌ ಆಗಿ.
  • ಲಾಗಿನ್‌ ಆದ ನಂತರ ‘ಮ್ಯಾನೇಜ್‌’ ಟ್ಯಾಬ್‌ ಅಡಿಯಲ್ಲಿರುವ ‘ಕೆವೈಸಿ’ ಆಯ್ಕೆಯನ್ನು ಒತ್ತಿ. ಸ್ಕ್ರೀನ್‌ನಲ್ಲಿ ವೆರಿಫೈಡ್‌ ಡಾಕ್ಯುಮೆಂಟ್‌ ಟ್ಯಾಬ್‌ನಲ್ಲಿ ಆಧಾರ್‌ ಸಂಖ್ಯೆ ಕಾಣಿಸುತ್ತಿದ್ದರೆ ಯುಎಎನ್‌-ಆಧಾರ್‌ ಲಿಂಕ್‌ ಆಗಿದೆ ಎಂದರ್ಥ. ವೆರಿಫೈಡ್‌ ಡಾಕ್ಯುಮೆಂಟ್ಸ್‌ ಟ್ಯಾಬ್‌ ಅಡಿಯಲ್ಲಿ ಆಧಾರ್‌ ಸಂಖ್ಯೆ ಕಾಣಿಸದಿದ್ದರೆ ನೀವು ಯುಎಎನ್‌ ಮತ್ತು ಆಧಾರ್‌ ಲಿಂಕ್‌ ಮಾಡಬೇಕಾಗುತ್ತದೆ.

(Last date to link Aadhaar UAN is November 30 Here is how to check if your UAN is linked to Aadhaar)

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ