ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಆಕರ್ಷಕ ಆಫರ್ಗಳನ್ನ ಪರಿಚಯಿಸುತ್ತಿದ್ದರೆ, ಇತ್ತ ವೊಡಾಫೋನ್-ಐಡಿಯಾ (Vodafone-Idea) ಮತ್ತು ಭಾರ್ತಿ ಏರ್‌ಟೆಲ್ (Airtel) ಕೂಡ ನಂಬರ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಹೀಗಿರುವಾಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಟೆಲಿಕಾಂ ಬಂಪರ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅತ್ಯುತ್ತಮ ವ್ಯಾಲಿಡಿಟಿ, ವಾಯಿಸ್ ಕರೆ (Unlimited Voice Call) ಹಾಗೂ ಡೇಟಾ ಪ್ರಯೋಜನಗಳನ್ನು ಒಳಗೊಂಡಿದೆ. ಈ 187 ರೂ. ವಿನ ಪ್ರಿಪೇಯ್ಡ್ ಯೋಜನೆಯಲ್ಲಿ (Prepaid Plan) 2GB ದೈನಂದಿನ ಡೇಟಾ ಮತ್ತು ದಿನಕ್ಕೆ 100 SMS ಒದಗಿಸುತ್ತದೆ. ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ರಿಂಗ್ ಟ್ಯೂನ್ ಸೌಲಭ್ಯವನ್ನು ಸಹ ಒಳಗೊಂಡಿದೆ.
ಇದುಬಿಟ್ಟರೆ 97 ರೂ. ವಿನ ಪ್ರಿಪೇಯ್ಡ್ ಪ್ಲಾನ್‌ಗಳು 100 ರೂ. ಗಿಂತ ಕಡಿಮೆ ಬೆಲೆಯ ಕಾಂಬೊ ಪ್ರಯೋಜನಗಳನ್ನು ನೀಡುತ್ತವೆ. ಇದು ಕ್ರಮವಾಗಿ 18 ದಿನಗಳು ಮತ್ತು 22 ದಿನಗಳ ಮಾನ್ಯತೆಯನ್ನು ಹೊಂದಿದೆ. ಏರ್‌ಟೆಲ್, ಜಿಯೋ ಮತ್ತು ವಿಐ ಪ್ರಿಪೇಯ್ಡ್ ಪ್ಲಾನ್‌ಗಳನ್ನು 200 ರೂ. ವಿನ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಈ ಯೋಜನೆಗಳು ಕಾಂಬೊ ಪ್ರಿಪೇಯ್ಡ್ ಯೋಜನೆಗಳಿಗೆ ಪ್ರವೇಶವನ್ನು ನೀಡುತ್ತವೆ. ಇವುಗಳ ಪ್ರಯೋಜನಗಳು ಬಿಎಸ್ಎನ್ಎಲ್ಗಿಂತಗಿಂತ ಭಿನ್ನವಾಗಿವೆ.
ಇನ್ನು 499 ರೂ. ಪ್ಲಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಿದ್ದು, ಒಟ್ಟು ಪೂರ್ಣ ಅವಧಿಗೆ 180GB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಡೈಲಿ 100 ಎಸ್‌ಎಮ್‌ಎಸ್ ಸಹ ಸಿಗುತ್ತದೆ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್ ಟ್ಯೂನ್ ಮತ್ತು Zing ಪ್ರಯೋಜನ ಲಭ್ಯ.
ಬಿಎಸ್‌ಎನ್‌ಎಲ್ 599 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾವಿದೆ.
Flipkart: ಸ್ಮಾರ್ಟ್ಫೋನ್ ಖರೀದಿಸಿ, ಉಪಯೋಗಿಸಿ: ಇಷ್ಟವಾಗದಿದ್ದರೆ ರಿಟರ್ನ್ ಮಾಡಿ, ಹಣ ವಾಪಸ್: ಹೀಗೊಂದು ಆಫರ್
WhatsApp: ವಾಟ್ಸ್ಆ್ಯಪ್ ಲಾಸ್ಟ್ ಸೀನ್ ಆಯ್ಕೆಯಲ್ಲಿ ಅಚ್ಚರಿಯ ಹೊಸ ಫೀಚರ್: ಬೆರಗಾದ ಬಳಕೆದಾರರು
(BSNL offers a prepaid plan at Rs 187 that gives unlimited voice calls 2GB daily data)