ನೀವು ನಿಮ್ಮ ಕಂಪ್ಯೂಟರ್ನಲ್ಲಿ ಇಂಟರ್ನೆಟ್ ಮೂಲಕ ಗೂಗಲ್ ಕ್ರೋಮ್ (Google Chrome) ಬ್ರೌಸರ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅಪ್ಡೇಟ್ ಮಾಡಿ. ಗೂಗಲ್ ಕ್ರೋಮ್ನ ಹೊಸ ಆವೃತ್ತಿ 92.0.4515.131 ಗೆ (Chrome 92 Update) ಅಪ್ಡೇಟ್ ಮಾಡಿ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಎಚ್ಚರಿಕೆ ನೀಡಿದೆ.
ಸಿಇಆರ್ಟಿ ಹೇಳಿರುವ ಪ್ರಕಾರ, “ಗೂಗಲ್ ಕ್ರೋಮ್ ಬ್ರೌಸರ್ ಬಳಸುತ್ತಿರುವವರು ತಕ್ಷಣವೆ ಹೊಸ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಿ. ಇದರಲ್ಲಿ ದರ್ಬಲವಾದ ಕೆಲವು ಅಂಶಗಳು ಕಾಣಿಸಿಕೊಂಡಿವೆ. ಇದರಿಂದ ಹ್ಯಾಕರ್ಗಳು ನಿಮ್ಮ ಮಾಹಿತಿಯನ್ನು ಸುಲಭವಾಗಿ ಪಡೆಯುತ್ತಾರೆ” ಎಂದು ಹೇಳಿದೆ.
ಗೂಗಲ್ ಕ್ರೋಮ್ನ ಬುಕ್ ಮಾರ್ಕ್ನಲ್ಲಿ ಓವರ್ ಫ್ಲೋ ಆಗಿ ಈ ರೀತಿ ಆಗಿರುವ ಸಾಧ್ಯತೆ ಇದೆಯಂತೆ. ಕೆಲವೊಂದು ಡಾಕ್ಯುಮೆಂಟ್ಗಳನ್ನು ನೀವು ಓಪನ್ ಮಾಡಿದರೆ ಆ ಮೂಲಕ ಹ್ಯಾಕರ್ಗಳು ನಿಮ್ಮ ಕಂಪ್ಯೂಟರ್ ಒಳಗೆ ಪ್ರವೇಶ ಪಡೆದು ನಿಮ್ ಖಾಸಗಿ ಮಾಹಿತಿಯನ್ನು ಕದಿಯಬಹುದು ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ಮಾಹಿತಿ ನೀಡಿದೆ.
ಇತ್ತೀಚೆಗಷ್ಟೆ ಸಿಇಆರ್ಟಿ ಐಫೋನ್ ಮತ್ತು ಐಪ್ಯಾಡ್ ಗ್ರಾಹಕರಿಗೂ ಎಚ್ಚರಿಕೆಯನ್ನ ನೀಡಿತ್ತು. ಆ್ಯಪಲ್ ಐಫೋನ್ ಉಪಯೋಗಿಸುತ್ತಿರುವವರು ಐಒಎಸ್ 14.71 ಗೆ ಮತ್ತು ಐಪ್ಯಾಡ್ ಒಎಸ್ 14.71 ಗೆ ಅಪ್ಡೇಟ್ ಮಾಡುವಂತೆ ಸೂಚಿಸಿತ್ತು.
OnePlus 5G: ಒನ್ಪ್ಲಸ್ ಸೂಪರ್ ಸೇಲ್: ಅತೀ ಕಡಿಮೆ ಬೆಲೆಗೆ 12GB RAMನ 5G ಸ್ಮಾರ್ಟ್ಫೋನ್
Amazon: ಇಂದೇ ಕೊನೆ ದಿನ: ಅಮೆಜಾನ್ನಲ್ಲಿ ಈ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿ
(Chrome 92 Update Update Your Google Chrome 92 browser immediately to avoid getting hacked CERT-In)