OnePlus 5G: ಒನ್​ಪ್ಲಸ್ ಸೂಪರ್ ಸೇಲ್: ಅತೀ ಕಡಿಮೆ ಬೆಲೆಗೆ 12GB RAMನ 5G ಸ್ಮಾರ್ಟ್​ಫೋನ್

OnePlus Nord CE 5G: ಈ ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ನೀಡಲಾಗಿದ್ದು, ಮೊದಲ ಕ್ಯಾಮೆರಾ 64 ಮೆಗಾಪಿಕ್ಸೆಲ್ ಆಗಿದ್ದರೆ, 2ನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ.

TV9 Web
| Updated By: ಝಾಹಿರ್ ಯೂಸುಫ್

Updated on:Aug 09, 2021 | 8:26 PM

ಜನಪ್ರಿಯ ಸ್ಮಾರ್ಟ್​ಫೋನ್ ಕಂಪೆನಿ ಒನ್‌ಪ್ಲಸ್ (OnePlus) ತನ್ನ ಮೊಬೈಲ್​ಗಳ ಮೇಲೆ ಭಾರೀ ಡಿಸ್ಕೌಂಟ್ ನೀಡುತ್ತಿದೆ. ಸೆಲೆಬ್ರೇಟ್ ಒನ್-ನೆಸ್ ವಿತ್ ಒನ್‌ಪ್ಲಸ್ (One-ness) ಮಾರಾಟದ ಅಡಿಯಲ್ಲಿ ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಈ ಸೆಲ್‌ನಲ್ಲಿ, ಗ್ರಾಹಕರು ಕಂಪನಿಯ ಹಳೆಯ ಫೋನ್‌ಗಳನ್ನು ನೀಡಿ ಹೊಸ ಫೋನ್‌ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

1 / 6
ಈ ವಿಶೇಷ ಆಫರ್ ಅಡಿಯಲ್ಲಿ OnePlus Nord CE 5G ಸ್ಮಾರ್ಟ್​ಫೋನ್​ನ್ನು ಸಹ ಕಂಪೆನಿ ನೀಡುತ್ತಿದೆ. OnePlus Nord CE 5G ಯ ​​ಆರಂಭಿಕ ಬೆಲೆ 22,999 ರೂ. ಮಾತ್ರ.  OnePlus.in ಮಾಹಿತಿಯ ಪ್ರಕಾರ, ಗ್ರಾಹಕರು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿದರೆ, ಅದರ ಮೇಲೆ ರೂ 1,000 ರಿಯಾಯಿತಿ ಕೂಡ ಸಿಗುತ್ತದೆ. ಈ 5G ಫೋನ್​ನ ವಿಶೇಷತೆಗಳನ್ನು ನೋಡುವುದಾದರೆ...

2 / 6
OnePlus Nord CE 5G ಸ್ಮಾರ್ಟ್​ಫೋನ್​ 6 GB RAM ಮತ್ತು 128 GB ಸ್ಟೋರೇಜ್ ಹೊಂದಿದೆ. ಇದಲ್ಲದೆ 8 ಜಿಬಿ RAM ಮತ್ತು 128 ಜಿಬಿ ಸ್ಟೊರೇಜ್​ನಲ್ಲೂ ಈ ಮೊಬೈಲ್ ಲಭ್ಯವಿದೆ. ಇದರ ಬೆಲೆ 24,999 ರೂ.  ಹಾಗೆಯೇ 12 ಜಿಬಿ RAM ಮತ್ತು 256 ಜಿಬಿ ಸ್ಟೊರೇಜ್​ನಲ್ಲಿ ಲಭ್ಯವಿರುವ ಒನ್​ಪ್ಲಸ್ OnePlus Nord CE 5G ಬೆಲೆ 27,999 ರೂ.

3 / 6
ಇನ್ನು ಈ ಫೋನ್ ಡಿಸ್​ಪ್ಲೇ ಬಗ್ಗೆ ನೋಡುವುದಾದರೆ, ಇದರಲ್ಲಿ 6.43-ಇಂಚಿನ FHD + AMOLED ಡಿಸ್​ಪ್ಲೇ ನೀಡಲಾಗಿದ್ದು, ಇದು 2400 × 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765 ಜಿ ಪ್ರೊಸೆಸರ್‌ ಇದರಲ್ಲಿದೆ. ಗ್ರಾಫಿಕ್ಸ್‌ಗಾಗಿ, ಅಡ್ರಿನೊ 619 ಜಿಪಿಯು ನೀಡಲಾಗಿದ್ದು, ಆಕ್ಸಿಡೈನ್ಓಎಸ್ 11 ಆಧಾರಿತ ಆಂಡ್ರಾಯ್ಡ್ 11 ನಲ್ಲಿ ಈ ಸ್ಮಾರ್ಟ್​ಫೋನ್ ಕಾರ್ಯನಿರ್ವಹಿಸುತ್ತದೆ.

4 / 6
ಈ ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ನೀಡಲಾಗಿದ್ದು, ಮೊದಲ ಕ್ಯಾಮೆರಾ 64 ಮೆಗಾಪಿಕ್ಸೆಲ್ ಆಗಿದ್ದರೆ, 2ನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಮೂರನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಹೊಂದಿರಲಿದೆ. ಇನ್ನು ಫೋನ್​ನಲ್ಲಿ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಸೋನಿ IMX471 ಫ್ರಂಟ್ ಕ್ಯಾಮೆರಾ ನೀಡಲಾಗಿದೆ.

5 / 6
OnePlus Nord CE 5G ಫೋನಿನಲ್ಲಿ 4500mAh ಬ್ಯಾಟರಿಯನ್ನು ನೀಡಲಾಗಿದ್ದು, ಇದು ವಾರ್ಪ್ ಚಾರ್ಜ್ 30ಟಿ ಪ್ಲಸ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಹಾಗೆಯೇ 5G, 4G LTE, Wi-Fi 802.11ac, Bluetooth 5.1, GPS / A-GPS / NavIC, NFC, USB Type-C ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ನಂತಹ ಫೀಚರ್​ಗಳನ್ನು ಈ ಫೋನ್ ಸಪೋರ್ಟ್ ಮಾಡುತ್ತದೆ.

6 / 6

Published On - 8:22 pm, Mon, 9 August 21

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ