ಇತರರ ವಿಚಾರಕ್ಕೆ ತಲೆ ಕೆಡಿಸಿಕೊಳ್ಳದ- ಜವಾಬ್ದಾರಿ ಮೈ ಮೇಲೆ ಎಳೆದುಕೊಳ್ಳದ 5 ರಾಶಿಯವರಿವರು
ಇಲ್ಲಿ 5 ರಾಶಿಗಳವರ ಬಗ್ಗೆ ನೀಡಲಾಗಿದೆ. ಇವರು ಇತರರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತದೆ ಜ್ಯೋತಿಷ್ಯ. ಇದಕ್ಕೆ ಅತಿ ಮುಖ್ಯ ಕಾರಣ, ಇವರು ಬಹಳ ಪ್ರಾಕ್ಟಿಕಲ್ ಆಗಿರುತ್ತಾರೆ. ಎಮೋಷನಲ್ ಜನ ಅಲ್ಲ. ಯಾವುವು 5 ರಾಶಿಗಳು ಎಂಬುದನ್ನು ತಿಳಿಯಲು ಮುಂದೆ ಓದಿ.
These 5 Zodiac Signs Considered As Unlucky Know The Reason Why
1 / 6
These 5 Zodiac Sign Born People Do Not Bother About Others
2 / 6
ಕನ್ಯಾ: ಹನ್ನೆರಡಯ ರಾಶಿಗಳ ಪೈಕಿಯೇ ವಿಪರೀತ ಪ್ರಾಕ್ಟಿಕಲ್ ಅಂತಿದ್ದರೆ ಅದು ಕನ್ಯಾ ರಾಶಿಯವರು. ತಮ್ಮ ಕಷ್ಟದ ಬಗ್ಗೆಯೂ ಇತರರಿಗೆ ಹೇಳಲ್ಲ, ಇತರರು ಬಂದು ಹೇಳಿದರೆ ಆ ಬಗ್ಗೆ ತಲೆಯೂ ಕೆಡಿಸಿಕೊಳ್ಳಲ್ಲ. ಬದುಕನ್ನು ಸರಿಯಾಗಿ ಪ್ಲಾನ್ ಮಾಡದ ವ್ಯಕ್ತಿಗಳೆಂದರೆ ಇವರಿಗೆ ಪರಮ ಅಸಹ್ಯ. ಅಂಥವರನ್ನು ದೂರವೇ ಇಟ್ಟುಬಿಡುತ್ತಾರೆ. ತಮ್ಮ ತಪ್ಪುಗಳನ್ನೂ ನಿರ್ದಾಕ್ಷಿಣ್ಯವಾಗಿ ಹೇಳಿಕೊಳ್ಳುವ ಇವರು, ಯಾರಿಂದಲೂ ರಿಯಾಯಿತಿ ಬಯಸಲ್ಲ.
3 / 6
ಕುಂಭ: ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿ ಇವರು ಇರಲ್ಲ. ಇನ್ನು ಸಂದರ್ಭ- ಸೂಕ್ಷ್ಮತೆ ಎಲ್ಲವನ್ನೂ ನೋಡಿಕೊಂಡು, ಕುಂಭ ರಾಶಿಯವರು ಬದಲಾಗುತ್ತಾ ಹೋಗುತ್ತಾರೆ. ನಿರ್ದಾಕ್ಷಿಣ್ಯ ಹಾಗೂ ನಿಷ್ಠುರ ಇವೆರಡಕ್ಕೂ ಕೈ-ಕಾಲು ಬಂದು ನಡೆದುಕೊಂಡು ಹೋಗುತ್ತಿದ್ದರೆ ಹೇಗಿರಬಹುದು ಹೇಳಿ, ಅದೇ ಕುಂಭ ರಾಶಿಯ ಜನ. ಆದರೆ ಇವರ ಹತ್ತಿರ ಒಂದು ರಿಯಾಯಿತಿ ಇದೆ. ಇವರ ಸಲಹೆ- ಉಪದೇಶ ಕೇಳಿ, ಅಕಸ್ಮಾತ್ ಕಷ್ಟಕ್ಕೆ ಸಿಲುಕಿಕೊಂಡರೆ ನೆರವಿಗೆ ಬರುತ್ತಾರೆ.
4 / 6
ತುಲಾ: ತನ್ನ ಮೈ ಮೇಲೆ ಬರುವ ಸಂಗತಿಗಳು, ಜವಾಬ್ದಾರಿಗಳನ್ನು ಗುರುತಿಸುವುದರಲ್ಲಿ ಇವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ. ಎಲ್ಲೋ ತಾಗಿದ ಬಾಣ ಇನ್ನು ನಾಲ್ಕಾರು ದಿನದಲ್ಲಿ ಯಾವ ಭಾಗಕ್ಕೆ ತಲುಪಬಹುದು ಎಂದು ಅಂದಾಜು ಮಾಡುವಷ್ಟು ನಿಪುಣರು ಇವರು. ಯಾವ ಏಟಿಗೂ ಸಿಗಲ್ಲ. ತಮಗೆ ಸಾವಿರ ರೂಪಾಯಿಯ ಲಾಭ ಆಗಬಹುದು ಎಂದಾಗಷ್ಟೇ ಜೇಬಿನಿಂದ ಹತ್ತು ರೂಪಾಯಿ ಆಚೆ ತೆಗೆಯಲು ಮನಸ್ಸು ಮಾಡುತ್ತಾರೆ.
5 / 6
ಮೀನ: ತಮ್ಮ ಕೆಲಸಗಳನ್ನೂ ಬೇರೆಯವರಿಗೆ ಅಂಟಿ ಹಾಕಿ, ತಾವು ನಿಶ್ಚಿಂತರಾಗಿ ಓಡಾಡಿಕೊಂಡು ಇರುವಂಥ ಜನ ಇವರು. ಮತ್ತು ಯಾರಿಂದ ಯಾವ ಕೆಲಸ ಆಗುತ್ತದೆ ಎಂದು ಸರಿಯಾಗಿ ಗುರುತಿಸುತ್ತಾರೆ. ಅವರು ಆ ಕೆಲಸ ಮಾಡುವುದಕ್ಕೆ ಏನೆಲ್ಲ ಪೂಸಿ ಹೊಡೆಯಬೇಕೋ ಅಷ್ಟನ್ನು ಮಾಡಿ, ತಾವು ನಿಶ್ಚಿಂತರಾಗಿ ಇರುತ್ತಾರೆ.