ChatGPT: ಅಪರಾಧ ಪ್ರಕರಣದಲ್ಲಿ ಅಭಿಪ್ರಾಯ ಕೇಳಲು ಚಾಟ್​ಜಿಪಿಟಿ ಬಳಸಿದ ಹೈಕೋರ್ಟ್

|

Updated on: Mar 29, 2023 | 1:01 PM

ಅಪರಾಧ ಪ್ರಕರಣವೊಂದರಲ್ಲಿ ಜಾಮೀನು ಕೋರಿದ್ದ ಅಪರಾಧಿಯ ಕುರಿತು ಅಭಿಪ್ರಾಯ ಕೇಳಲು ಹೈಕೋರ್ಟ್​ ನ್ಯಾಯಾಧೀಶರು ಚಾಟ್​ಜಿಪಿಟಿ ಬಳಸಿದ್ದಾರೆ. ಭಾರತದಲ್ಲಿ ಕ್ರಿಮಿನಲ್ ಪ್ರಕರಣವೊಂದರಲ್ಲಿ ಚಾಟ್​​ಜಿಪಿಟಿ ಬಳಸಿರುವುದು ಇದೇ ಮೊದಲು.

ChatGPT: ಅಪರಾಧ ಪ್ರಕರಣದಲ್ಲಿ ಅಭಿಪ್ರಾಯ ಕೇಳಲು ಚಾಟ್​ಜಿಪಿಟಿ ಬಳಸಿದ ಹೈಕೋರ್ಟ್
ಚಾಟ್​ಜಿಪಿಟಿ
Follow us on

ಕ್ರಿಮಿನಲ್ ಪ್ರಕರಣವೊಂದರಲ್ಲಿ ಅಪರಾಧಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭ ನ್ಯಾಯಾಧೀಶ ಅನೂಪ್ ಚಿತ್ಕಾರ ಅವರು ನೇತೃತ್ವ ವಹಿಸಿದ್ದ ಪೀಠ, ಅಪರಾಧಿಯ ಕೋರಿಕೆ ಕುರಿತು ಚಾಟ್​ಜಿಪಿಟಿ(ChatGPT) ಅಭಿಪ್ರಾಯ ಕೇಳಿದ್ದಾರೆ.

2020ರ ಜೂನ್​ನಲ್ಲಿ ನಡೆದಿದ್ದ ದಂಗೆ, ಕೊಲೆ, ಗಲಭೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ವ್ಯಕ್ತಿ, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅಪರಾಧಿಯ ಅರ್ಜಿ ಕುರಿತು ವಿಚಾರಣೆ ನಡೆಸುವಾಗ, ಚಾಟ್​​ಜಿಪಿಟಿ ಬಳಸಲಾಗಿದೆ. ಅಪರಾಧಿಯ ಕೃತ್ಯ, ವಿಧಿಸಲಾದ ಶಿಕ್ಷೆಯ ಪ್ರಮಾಣವನ್ನು ನಮೂದಿಸಿ, ಜಾಮೀನು ಅರ್ಜಿ ಕುರಿತು ಚಾಟ್​ಜಿಪಿಟಿ ಅಭಿಪ್ರಾಯ ಕೇಳಲಾಗಿದೆ. ನ್ಯಾಯಾಲಯದ ಮಿತಿಯಲ್ಲಿ ಮತ್ತು ಶಿಕ್ಷೆಯ ಪ್ರಮಾಣದ ಕುರಿತು ಚಾಟ್​ಜಿಪಿಟಿ ಅಭಿಪ್ರಾಯ ನೀಡಿದೆ.

ಕೊಲೆ, ಹಿಂಸೆ, ಗಲಭೆಯಂತಹ ಕೃತ್ಯದಲ್ಲಿ ಪಾಲ್ಗೊಂಡಿರುವುದರಿಂದ ನ್ಯಾಯಾಲಯ, ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು ಮತ್ತು ನ್ಯಾಯಾಧೀಶರು ಕ್ರಮ ಕೈಗೊಳ್ಳಬೇಕು ಎಂದು ಚಾಟ್​ಜಿಪಿಟಿ ಹೇಳಿದೆ.

ಅಭಿಪ್ರಾಯ ಕೇಳಲು ಮಾತ್ರ ಚಾಟ್ ಜಿಪಿಟಿ ಬಳಸಲಾಗಿದೆ. ಉಳಿದಂತೆ ನ್ಯಾಯಾಲಯವು, ಕಾನೂನಿನ ಅನ್ವಯ ಕ್ರಮ ಕೈಗೊಳ್ಳುತ್ತದೆ ಎಂದು ಪೀಠ ಹೇಳಿದೆ. ಬಳಿಕ, ಈ ಪ್ರಕರಣದಲ್ಲಿ ಅಪರಾಧಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Wed, 29 March 23