ಕೋವಿಡ್ (COVID) ಸಮಸ್ಯೆ ಆರಂಭಗೊಂಡ ನಂತರದಲ್ಲಿ ಜಗತ್ತಿನಲ್ಲಿ ಡಿಜಿಟಲ್ ಮಾಧ್ಯಮಗಳು ಹೆಚ್ಚು ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕಿಂಗ್ ಚಟುವಟಿಕೆ ಸೇರಿದಂತೆ ಹಲವಾರು ಕೆಲಸಗಳು ಅಪ್ಲಿಕೇಶನ್ ಗಳ ಮುಖಾಂತರವೇ ನಡೆಯುತ್ತಿದೆ. ಗ್ಯಾಸ್ ಬಿಲ್ (Gas Bill) ಕಟ್ಟಲು, ಮೊಬೈಲ್ ರೀಚಾರ್ಜ್ (Mobile Reacharg), ಡಿಟಿಎಚ್ ರೀಚಾರ್ಜ್ ಎಲ್ಲದಕ್ಕೂ ಪ್ರತ್ಯೇಕವಾದ ಆ್ಯಪ್ ಗಳಿವೆ. ಅದೇ ರೀತಿ ಮನೆಯ ವಿದ್ಯುತ್ ಬಿಲ್ (Electricity Bill) ಕಟ್ಟಲು ಕೂಡಾ ಹಲವು ಆ್ಯಪ್ ಗಳು ಲಭ್ಯವಿದೆ. ಅನೇಕರಿಗೆ ಆನ್ಲೈನ್ ಮೂಲಕ ಬಿಲ್ ಪಾವತಿ (Online Bill Payment) ಮಾಡಬಹುದು ಎಂಬ ವಿಚಾರ ಗೊತ್ತಿಲ್ಲ. ಗ್ಯಾಸ್, ಟಿವಿ ಹೀಗೆ ಯಾವುದೇ ಬಿಲ್ಗಳನ್ನ ಅಧಿಕೃತ ಆ್ಯಪ್ಗಳ ಮೂಲಕ ಆನ್ಲೈನ್ನಲ್ಲಿ ಪಾವತಿ ಮಾಡಬಹುದಾಗಿದೆ. ಇದರಂತೆ ವಿದ್ಯುತ್ ಬಿಲ್ ಕೂಡ ಪಾವತಿಸಬಹುದಾಗಿದೆ. ಅದು ಸುಲಭವಾಗಿ ಮತ್ತು ಕೆಲವೇ ನಿಮಿಷಗಳಲ್ಲಿ.
ಫೋನ್ ಪೇ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:
ಗೂಗಲ್ ಪೇ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:
ಇನ್ನು ಕರೆಂಟ್ ಬಿಲ್ಗಳನ್ನು ಸುಲಭವಾಗಿ ಪಾವತಿ ಮಾಡಲು ಮೊಬಿಕ್ವಿಕ್ ಬೆಸ್ಟ್ ಆ್ಯಪ್ ಆಗಿದೆ. ಮೊಬಿಕ್ವಿಕ್ ಖಾತೆಯಲ್ಲಿ ಹಣ ಕ್ರೆಡಿಟ್ ಮಾಡುವ ಮೂಲಕ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ. ಆ್ಯಪ್ ತೆರೆದು ಸ್ಕ್ರಾಲ್ ಮಾಡಿದಂತೆ ವಿದ್ಯುತ್ ಪಾವತಿ ಆಯ್ಕೆ ಕಾಣಿಸುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಗ್ರಾಹಕ ಸಂಖ್ಯೆಯನ್ನು ನಮೂದಿಸಿದ ಬೇಕು. ಆಗ ಸ್ಕ್ರೀನ್ ಮೇಲೆ ಎಲೆಕ್ಟ್ರಿಕ್ ಮೊತ್ತ ತೋರಿಸುತ್ತದೆ. ನಂತರ ಪೇಮೆಂಟ್ ವಿಭಾಗಕ್ಕೆ ತೆರಳಿ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ.
ಅಂತೆಯೆ ಪೇಟಿಯಂ ಆ್ಯಪ್‌ನಲ್ಲಿ ವಿದ್ಯುತ್ ಬಿಲ್, ಮೊಬೈಲ್ ರೀಚಾರ್ಜ್, ಟಿವಿ ರೀಚಾರ್ಜ್, ಗ್ಯಾಸ್ ಬಿಲ್ ಹೀಗೆ ಆಯ್ಕೆಗಳಿರುತ್ತವೆ. ಆ್ಯಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್ನಲ್ಲಿ ದೊರಕುವ ಪೇಟಿಯಂ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಲಾಗಿನ್ ಆದ ನಂತರ ಸ್ಟೇ ಎಟ್ ಹೋಂ ಎಸೆಸ್ಸೆಂಶಿಯಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಎಲೆಕ್ಟ್ರಿಸಿಟಿ ಆಯ್ಕೆ ಕಾಣಸಿಗುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಹಣ ಪಾವತಿಸಬಹುದು.
Nokia XR20: 48MP ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್: ನೋಕಿಯಾದಿಂದ XR20 ಸ್ಮಾರ್ಟ್ಫೋನ್ ರಿಲೀಸ್
(Electricity bill Online Here is the Tips to pay electricity bill using Google Pay PhonePe Paytm)