Amazon EPL: ಐಪಿಎಲ್​ಗಿಂತ ಮೊದಲೇ ಅಮೆಜಾನ್‌ನಲ್ಲಿ ಇಪಿಎಲ್ ಪ್ರಾರಂಭ: ಸ್ಮಾರ್ಟ್‌ಫೋನ್ಸ್ ಶೇ. 40 ರಷ್ಟು ಅಗ್ಗ

| Updated By: Vinay Bhat

Updated on: Mar 21, 2025 | 9:46 AM

Electronics Premier League: ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ (EPL) ಮಾರಾಟವು ಶುರುವಾಗಿದೆ. ಇಂದು ಮಾರ್ಚ್ 21 ರಿಂದ 26 ರವರೆಗೆ ಈ ಸೇಲ್ ನಡೆಯಲಿದ್ದು, ಇದರಲ್ಲಿ ನೀವು ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯುತ್ತೀರಿ. ನೀವು ಹೊಸ ಮೊಬೈಲ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಮಾರಾಟವು ನಿಮಗೆ ಉತ್ತಮವಾಗಿದೆ.

Amazon EPL: ಐಪಿಎಲ್​ಗಿಂತ ಮೊದಲೇ ಅಮೆಜಾನ್‌ನಲ್ಲಿ ಇಪಿಎಲ್ ಪ್ರಾರಂಭ: ಸ್ಮಾರ್ಟ್‌ಫೋನ್ಸ್ ಶೇ. 40 ರಷ್ಟು ಅಗ್ಗ
Electronics Premier League Amazon
Follow us on

ಬೆಂಗಳೂರು (ಮಾ. 21): ಐಪಿಎಲ್‌ನ 18 ನೇ ಸೀಸನ್ ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಾಳೆ (ಮಾರ್ಚ್ 22 ರಂದು) ಪ್ರಾರಂಭವಾಗುತ್ತಿದೆ. ಇದಕ್ಕೂ ಮೊದಲು, ಇಪಿಎಲ್ ಅಂದರೆ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಇಂದು ಮಾರ್ಚ್ 21 ರಂದು ಪ್ರಸಿದ್ಧ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಪ್ರಾರಂಭವಾಗಿದೆ. ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್, ಒನ್‌ಪ್ಲಸ್, ಶಿಯೋಮಿ, ಐಕ್ಯೂ, ರಿಯಲ್‌ ಮಿ ಮುಂತಾದ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಮತ್ತು ಆಕ್ಸೆಸರಿಗಳ ಮೇಲೆ ಶೇ. 40 ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ಮಾರಾಟವು ಅಮೆಜಾನ್‌ನಲ್ಲಿ ಮಾರ್ಚ್ 21 ರಿಂದ ಮಾರ್ಚ್ 26 ರವರೆಗೆ ನಡೆಯಲಿದೆ. ಹಾಗಾದರೆ, ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಲಭ್ಯವಿರುವ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ…

ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G

ಸ್ಯಾಮ್‌ಸಂಗ್‌ನ ಈ ಬಜೆಟ್ 5G ಸ್ಮಾರ್ಟ್‌ಫೋನ್ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಮಾರಾಟದಲ್ಲಿ 13,999 ರೂ. ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಈ ಸ್ಯಾಮ್‌ಸಂಗ್ ಫೋನ್‌ನ ಮೂಲ ಬೆಲೆ 14,999 ರೂ. ಆಗಿದೆ. ಇದರ ಖರೀದಿಯ ಮೇಲೆ 1,000 ರೂ. ಗಳ ಬ್ಯಾಂಕ್ ರಿಯಾಯಿತಿ ಲಭ್ಯವಿರುತ್ತದೆ. ಫೋನ್‌ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಈ ಫೋನ್ FHD + ಸೂಪರ್ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ, ಇದು 120Hz ಹೆಚ್ಚಿನ ರಿಫ್ರೆಶ್ ದರ ಮತ್ತು ಎಕ್ಸಿನೊಸ್ 1380 ಪ್ರೊಸೆಸರ್ ಹೊಂದಿದೆ.

ಇದನ್ನೂ ಓದಿ
ಈ ಲ್ಯಾಪ್‌ಟಾಪ್‌ಗೆ ಚಾರ್ಜ್ ಮಾಡೋದೇ ಬೇಡ: ವಿದ್ಯುತ್ ಇಲ್ಲದೆ ಬಳಸಬಹುದು
ಭಾರತಕ್ಕೆ ಬಂತು ಗೂಗಲ್​ನ ಹೊಸ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?
ಮನೆಯಲ್ಲಿರುವ ಫ್ಯಾನ್ ಎಸಿಯಂತೆ ಗಾಳಿ ನೀಡುತ್ತೆ: ಜಸ್ಟ್ ಹೀಗೆ ಮಾಡಿ
ನಿಮ್ಮ ಯೂಟ್ಯೂಬ್ ವಿಡಿಯೋವನ್ನು ಬೇರೆ ಭಾಷೆಗೆ ಡಬ್ ಮಾಡೋದು ಹೇಗೆ ಗೊತ್ತೇ?

ಐಕ್ಯೂ ನಿಯೋ 10ಆರ್

ಈ ಐಕ್ಯೂ ಫೋನ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಫೋನ್ ಖರೀದಿಗೆ 2,000 ರೂ. ಗಳವರೆಗೆ ಬ್ಯಾಂಕ್ ರಿಯಾಯಿತಿ ನೀಡಲಾಗುತ್ತಿದೆ. ಅಮೆಜಾನ್‌ನಲ್ಲಿ ನಡೆಯುತ್ತಿರುವ ಮಾರಾಟದಲ್ಲಿ ನೀವು ಈ ಫೋನ್ ಅನ್ನು ಕಡಿಮೆ ಬೆಲೆ ಖರೀದಿಸಬಹುದು. ಇದರ ಆರಂಭಿಕ ಬೆಲೆ ರೂ. 24,999 ಆಗಿದೆ. ಈ ಫೋನ್ ಅನ್ನು 26,999 ರೂ. ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿತ್ತು.

Solar Laptop: ಈ ಲ್ಯಾಪ್‌ಟಾಪ್‌ಗೆ ಚಾರ್ಜ್ ಮಾಡೋದೇ ಬೇಡ: ವಿದ್ಯುತ್ ಇಲ್ಲದೆ ಬಳಸಬಹುದು, ಹೇಗೆ ನೋಡಿ

ಶಿಯೋಮಿ ರೆಡ್ಮಿ A4 5G

ಈ ಸೇಲ್ ನಲ್ಲಿ ನೀವು ಶಿಯೋಮಿ ರೆಡ್ಮಿ A4 5G ಫೋನ್ ಅನ್ನು ಕೇವಲ 8,299 ರೂ. ಗೆ ಖರೀದಿಸಬಹುದು. ರೆಡ್ಮಿಯ ಅತ್ಯಂತ ಅಗ್ಗದ ಈ 5G ಸ್ಮಾರ್ಟ್‌ಫೋನ್ 120Hz ಹೆಚ್ಚಿನ ರಿಫ್ರೆಶ್ ದರದೊಂದಿಗೆ ಡಿಸ್ಪ್ಲೇ ಹೊಂದಿದೆ. ಇದಲ್ಲದೆ, ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4s Gen 2 ಪ್ರೊಸೆಸರ್ ಅನ್ನು ಒದಗಿಸಲಾಗಿದೆ.

ಒನ್‌ಪ್ಲಸ್ ನಾರ್ಡ್ CE4

ಈ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ ಬೆಲೆಗಿಂತ 4,000 ರೂ. ಕಡಿಮೆ ಬೆಲೆಗೆ ಲಭ್ಯವಿದೆ. ಈ ಒನ್‌ಪ್ಲಸ್ ಫೋನ್ ಅನ್ನು 24,999 ರೂ. ಗಳಿಗೆ ಪಟ್ಟಿ ಮಾಡಲಾಗಿದೆ. ಅಮೆಜಾನ್‌ನಲ್ಲಿ ನಡೆಯುತ್ತಿರುವ ಮಾರಾಟದಲ್ಲಿ ನೀವು ಈ ಫೋನ್ ಅನ್ನು 20,999 ರೂ. ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಿಬಹುದು.

ರಿಯಲ್‌ಮಿ 13 ಪ್ರೊ

ಈ ರಿಯಲ್‌ಮಿ ಫೋನ್ 20,390 ರೂ. ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದನ್ನು 28,999 ರೂ. ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಈ ರಿಯಲ್‌ಮಿ ಸ್ಮಾರ್ಟ್‌ಫೋನ್ 120Hz ಡಿಸ್ಪ್ಲೇ ಮತ್ತು ಶಕ್ತಿಯುತ ವೈಶಿಷ್ಟ್ಯಗಳನ್ನು ಹೊಂದಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:46 am, Fri, 21 March 25