ವಾಲ್ಮಾರ್ಟ್ (Walmart) ಒಡೆತನದ ಆನ್ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ ಕಾರ್ಟ್ (Flipkat) ಹಳೆಯ ಸ್ಮಾರ್ಟ್ಪೋನ್ಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತಿದೆ. ಫ್ಲಿಪ್ ಕಾರ್ಟ್ ಸಂಸ್ಥೆ ಎಲೆಕ್ಟ್ರಾನಿಕ್ ರೀ ಕಾಮರ್ಸ್ ಯಂತ್ರ ಎನ್ನುವ ಸಂಸ್ಥೆಯನ್ನು ಶೀಘ್ರದಲ್ಲಿಯೇ ಸ್ವಾಧೀನಪಡಿಸಿಕೊಳ್ಳಲಿದ್ದು ಅದರಲ್ಲಿ ಹಳೆಯ ಸ್ಮಾರ್ಟ್ ಫೋನ್ಗಳನ್ನು (Old Smartphone) ಬಳಕೆದಾರರು ಮಾರಾಟ ಮಾಡಬಹುದಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ 1500ಕ್ಕೂ ಹೆಚ್ಚು ಪಿನ್ಕೋಡ್ಗಳಲ್ಲಿ ಹಳೆಯ ಫೊನ್ಗಳನ್ನು ಮಾರಾಟ ಮಾಡಲು ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತು ಫ್ಲಿಪ್ ಕಾರ್ಟ್ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಫ್ಲಿಪ್ ಕಾರ್ಟ್ ಆ್ಯಪ್ನಲ್ಲಿ ಕೆಳಗಿನ ಬಾರ್ನಲ್ಲಿ ಈ ಆಯ್ಕೆ ಇರಲಿದೆ. ಸದ್ಯಕ್ಕೆ ಸ್ಮಾರ್ಟ್ಫೋನ್ಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಮಾರಾಟ ಮಾಡುವ ಆಯ್ಕೆಯನ್ನು ಇತರ ಕ್ಯಾಟಗರಿಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದೆ. ಎಲ್ಲಾ ರೀತಿಯ ಸ್ಮಾರ್ಟ್ ಫೋನ್ಗಳನ್ನು ಇಲ್ಲಿ ಮಾರಾಟ ಮಾಡಬಹುದಾಗಿದೆ. ಅದು ಫ್ಲಿಪ್ಕಾರ್ಟ್ನಲ್ಲಿಯೇ ಖರೀದಿ ಮಾಡಿದ್ದರೂ ಆಗಬಹುದು, ಹೊರಗಡೆ ಖರೀದಿ ಮಾಡಿದ್ದರೂ ತೊಂದರೆಯಿಲ್ಲ ಎಂದಿದೆ.
ಇನ್ನು ಈ ರೀತಿ ಸ್ಮಾರ್ಟ್ ಫೋನ್ ಮಾರಾಟ ಮಾಡಿದಾಗ ಬಳಕೆದಾರರು ಇ ವೋಚರ್ ಪಡೆದುಕೊಳ್ಳುತ್ತಾರೆ. ಸ್ಮಾರ್ಟ್ ಫೋನ್ ಮಾರಾಟದ ವೇಳೆ ಮಾರಟಗಾರರ ಬೆಲೆಯನ್ನು ತಿಳಿಯಲು ಕೆಲವು ಪ್ರಶ್ನೆಗಳನ್ನು ಕೇಳಲಾಗುವುದು. ಅದರ ಉತ್ತರ ಪಡೆದ ನಂತರ 48 ಗಂಟೆಯೊಳಗೆ ಅದನ್ನು ಪಡೆದುಕೊಳ್ಳುತ್ತದೆ. ನಂತರ ಅದನ್ನು ಪರಿಶೀಲನೆ ನಡೆಸಿ ಮಾರಾಟ ಮಾಡಲಿದೆ. ಜತೆಗೆ ಇ ವೋಚರ್ಅನ್ನು ನೀಡಲಾಗುವುದು ಎಂದು ಹೇಳಲಾಗಿದೆ.
ಎಲೆಕ್ಟ್ರಾನಿಕ್ಸ್ ರೀ ಕಾಮರ್ಸ್ ಕಂಪನಿಯಾದ ಯಂತ್ರವನ್ನು ಫ್ಲಿಪ್ಕಾರ್ಟ್ ಸ್ವಾಧೀನಪಡಿಸಿಕೊಂಡ ಬಳಿ ಈ ಆಯ್ಕೆ ಆಂಡ್ರಾಯಿಡ್ ಫೋನ್ಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಆ ಬಳಿಕ ಖರೀದಿ ಮತ್ತು ಮಾರಾಟ ಎಲ್ಲವೂ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿಯೇ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ:
Poco M4 Pro 5G: ಭಾರತದಲ್ಲಿ ರಿಲೀಸ್ ಆದ ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್ ಹೇಗಿದೆ?: ಖರೀದಿಸಬಹುದೆ?
Published On - 12:26 pm, Wed, 16 February 22