Poco M4 Pro 5G: ಭಾರತದಲ್ಲಿ ರಿಲೀಸ್ ಆದ ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್‌ ಹೇಗಿದೆ?: ಖರೀದಿಸಬಹುದೆ?

ಹೆಚ್ಚಾಗಿ 20,000 ರೂ. ಆಸುಪಾಸಿನಲ್ಲಿ ಹೊಸ ಸ್ಮಾರ್ಟ್​ಫೋನ್​ಗಳನ್ನು ಅನಾವರಣ ಮಾಡಿ ಸೈ ಎನಿಸಿಕೊಂಡಿರುವ ಪೋಕೋ ಇದೀಗ ಭಾರತದಲ್ಲಿ ತನ್ನ ಹೊಸ ಪೋಕೋ ಎಮ್​4 ಪ್ರೊ 5G (Poco M4 Pro 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

Poco M4 Pro 5G: ಭಾರತದಲ್ಲಿ ರಿಲೀಸ್ ಆದ ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್‌ ಹೇಗಿದೆ?: ಖರೀದಿಸಬಹುದೆ?
Poco M4 Pro
Follow us
| Updated By: Vinay Bhat

Updated on: Feb 16, 2022 | 6:25 AM

ಭಾರತದಲ್ಲಿ ವಾರಕ್ಕೆ ಕಡಿಮೆ ಎಂದರು ಮೂರರಿಂದ ನಾಲ್ಕು ಫೋನ್​​ಗಳು ಬಿಡುಗಡೆ ಆಗುತ್ತವೆ. ರಿಯಲ್ ಮಿ, ಒಪ್ಪೋ, ವಿವೋ, ಶವೋಮಿ (Xiaomi) ಕಂಪನಿ ಪ್ರತಿ ತಿಂಗಳು ದೇಶದಲ್ಲಿ ಒಂದಲ್ಲಾ ಒಂದು ಹೊಸ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತವೆ. ಇನ್ನುಳಿದ ಕೆಲವು ಕಂಪನಿಗಳು ಅಪರೂಪಕ್ಕೆ ಆಕರ್ಷಕ ಮೊಬೈಲ್​ಗಳನ್ನು ರಿಲೀಸ್ ಮಾಡಿ ಸದ್ದು ಮಾಡುತ್ತವೆ. ಇದೇ ಸಾಲಿನಲ್ಲಿ ಪೋಕೋ ಸಂಸ್ಥೆ ಕೂಡ ಒಂದು. ಹೆಚ್ಚಾಗಿ 20,000 ರೂ. ಆಸುಪಾಸಿನಲ್ಲಿ ಹೊಸ ಸ್ಮಾರ್ಟ್​ಫೋನ್​ಗಳನ್ನು (Smartphone) ಅನಾವರಣ ಮಾಡಿ ಸೈ ಎನಿಸಿಕೊಂಡಿರುವ ಪೋಕೋ ಇದೀಗ ಭಾರತದಲ್ಲಿ ತನ್ನ ಹೊಸ ಪೋಕೋ ಎಮ್​4 ಪ್ರೊ 5G (Poco M4 Pro 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಅಲ್ಲದೆ ವೇಗದ ಚಾರ್ಜಿಂಗ್, ಬಲಿಷ್ಠ ಬ್ಯಾಟರಿ ಜೊತೆಗೆ ಆಕರ್ಷಕ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಹಾಗಾದ್ರೆ ಈ ಫೋನಿನ ವಿಶೇಷ ಏನು?, ಇದನ್ನು ಖರೀದಿಸಬಹುದೇ ಎಂಬುದನ್ನು ನೋಡೋಣ.

ಏನು ವಿಶೇಷತೆ?:

ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ ಡಾಟ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು DCI-P3 ವೈಡ್ ಕಲರ್ ಗ್ಯಾಮಟ್ ಅನ್ನು ಸಹ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 11 ಅನ್ನು ಆಧರಿಸಿದ MIUI 12.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಮುಂದಿನ ಕೆಲವು ವಾರಗಳಲ್ಲಿ MIUI 13 ಅನ್ನು ಸ್ವೀಕರಿಸುವ ಭರವಸೆ ಇದೆ. ಜೊತೆಗೆ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು f/2.45 ಲೆನ್ಸ್‌ ಅನ್ನು ಪಡೆದಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಪ್ರೊ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5.1, GPS/ A-GPS, ಇನ್ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಒಳಗೊಂಡಿದೆ.

ಬೆಲೆ ಎಷ್ಟು?:

ಭಾರತದಲ್ಲಿ ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್‌ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಸಿಗಲಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕಾಗಿ 14,999 ರೂ. ನಿಗದಿ ಮಾಡಲಾಗಿದೆ. 6GB RAM ಮತ್ತು 128GB ಕಾನ್ಫಿಗರೇಶನ್ ಬೆಲೆ 16,999 ರೂ. ಹಾಗೆಯೆ 8GB RAM ಮತ್ತು 128GB ರೂಪಾಂತರದ ಬೆಲೆ 18,999 ರೂ. ಇದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಇದು ಫೆಬ್ರವರಿ 22 ರಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಸಿಗಲಿದೆ.

ಖರೀದಿಸಬಹುದೇ?:

ಮೇಲ್ನೋಟಕ್ಕೆ ಇದೊಂದು ಉತ್ತಮ ಫೋನ್ ಆಗಿದೆ. ನೀವು ದೊಡ್ಡ ಮಟ್ಟದ ಗೇಮಿಂಗ್​ ಪ್ರಿಯರಾಗಿದ್ದರೆ ಇದನ್ನು ಖರೀದಿಸುವುದು ಸೂಕ್ತವಲ್ಲ. ಬಜೆಟ್ ಬೆಲೆಗೆ ಒಳ್ಳೆಯ ಫೋನನ್ನು ಖರೀದಿಸುವ ಪ್ಲಾನ್​ನಲ್ಲಿ ನೀವಿದ್ದರೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

Asus ROG Phone 5s: ಭಾರತದಲ್ಲಿ ಏಸಸ್​ನಿಂದ ಹೊಸ ಪವರ್​ಫುಲ್ ​ಫೋನ್ ಬಿಡುಗಡೆ: ಹುಚ್ಚೆದ್ದು ಕುಣಿದ ಗೇಮಿಂಗ್ ಪ್ರಿಯರು

Nokia G21: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಬಜೆಟ್ ಬೆಲೆಯ ನೋಕಿಯಾದ ಹೊಸ ಸ್ಮಾರ್ಟ್​ಫೋನ್: ಏನು ವಿಶೇಷತೆ?

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ