Itel A27: ಕೇವಲ 6 ಸಾವಿರ ರೂ.ಗೆ 4,000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್​ಫೋನ್

Itel A27 Specifications: Itel A27 ಫೋನ್​ನ ಹಿಂಬದಿಯಲ್ಲಿ 5 ಮೆಗಾಪಿಕ್ಸೆಲ್ AI ಕ್ಯಾಮೆರಾ ನೀಡಲಾಗಿದ್ದು, ಹಾಗೆಯೇ ಸೆಲ್ಫಿಗಾಗಿ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂಭಾಗದಲ್ಲಿದೆ.

Itel A27: ಕೇವಲ 6 ಸಾವಿರ ರೂ.ಗೆ 4,000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್​ಫೋನ್
Itel A27
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 16, 2022 | 8:25 PM

ನೀವು ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್​ಫೋನ್​ ಖರೀದಿಸಲು ಬಯಸಿದ್ದರೆ, ಐಟೆಲ್ (Itel) ಕಂಪೆನಿಯು ಹೊಸ ಮೊಬೈಲ್​ ಫೋನ್​ ಅನ್ನು ಬಿಡುಗಡೆ ಮಾಡಿದೆ. Itel A27 ಹೆಸರಿನ ಈ ಸ್ಮಾರ್ಟ್​ಫೋನ್​ನಲ್ಲಿ 5.45 ಇಂಚಿನ IPS ಡಿಸ್​ಪ್ಲೇ ಮತ್ತು 4G ನೆಟ್​ವರ್ಕ್​ ಕನೆಕ್ಟಿವಿಟಿ ಕೂಡ ಇರುವುದು ವಿಶೇಷ. ಅಲ್ಲದೆ ಈ ಹೊಸ ಫೋನ್ ಆಂಡ್ರಾಯ್ಡ್ 11 (ಗೋ ಎಡಿಷನ್) ಮತ್ತು ಫೇಸ್ ಅನ್‌ಲಾಕ್ ಸಪೋರ್ಟ್, ಫಿಂಗರ್‌ಪ್ರಿಂಟ್ ಆಯ್ಕೆಯನ್ನೂ ಕೂಡ ಹೊಂದಿದೆ. ಐಟೆಲ್ ಎ27 ಸ್ಮಾರ್ಟ್​ಫೋನ್ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಪ್ರೊಸೆಸರ್: Itel A27 ಕ್ವಾಡ್-ಕೋರ್ 1.4GHz ಪ್ರೊಸೆಸರ್ ಹೊಂದಿದ್ದು, Android 11 (Go Edition)ನಲ್ಲಿ ಕಾರ್ಯ ನಿರ್ವಹಿಸಲಿದೆ.

ಡಿಸ್​ಪ್ಲೇ: Itel A27 ಸ್ಮಾರ್ಟ್​ಫೋನ್​ನಲ್ಲಿ 5.45-ಇಂಚಿನ FW + IPS ಡಿಸ್​ಪ್ಲೇ ನೀಡಲಾಗಿದೆ.

ಸ್ಟೊರೇಜ್: ಈ ಸ್ಮಾರ್ಟ್​ಫೋನ್​ನಲ್ಲಿ 2GB RAM ಹೊಂದಿದ್ದು, ಹಾಗೆಯೇ 32GB ಆಂತರಿಕ ಸಂಗ್ರಹಣೆ ಸ್ಥಳಾವಕಾಶ ಇದರಲ್ಲಿದೆ. ಅಲ್ಲದೆ ಇದನ್ನು ಮೈಕ್ರೊ SD ಮೂಲಕ 128GB ವರೆಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ: Itel A27 ಫೋನ್​ನ ಹಿಂಬದಿಯಲ್ಲಿ 5 ಮೆಗಾಪಿಕ್ಸೆಲ್ AI ಕ್ಯಾಮೆರಾ ನೀಡಲಾಗಿದ್ದು, ಹಾಗೆಯೇ ಸೆಲ್ಫಿಗಾಗಿ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂಭಾಗದಲ್ಲಿದೆ.

ಬ್ಯಾಟರಿ: ಈ ಸ್ಮಾರ್ಟ್​ಫೋನ್​ನಲ್ಲಿ 4,000mAh ಬ್ಯಾಟರಿಯನ್ನು ನೀಡಲಾಗಿದ್ದು, ಇದು ದೀರ್ಘ ಸಮಯದವರೆಗೆ ಚಾರ್ಜ್​ ಅನ್ನು ಉಳಿಸಲಿದೆ.

ಇತರೆ ವೈಶಿಷ್ಟ್ಯ: Itel A27 ಸ್ಮಾರ್ಟ್​ಫೋನ್​ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಇದ್ದು, ಜೊತೆಗೆ ಫೇಸ್ ಅನ್‌ಲಾಕ್ ಸಪೋರ್ಟ್ ಕೂಡ ಮಾಡುತ್ತದೆ. ಹಾಗೆಯೇ ಇದು 4ಜಿ ನೆಟ್​ವರ್ಕ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ.

ಬೆಲೆ: itel A27 ಸ್ಮಾರ್ಟ್​ಫೋನ್ ಅನ್ನು ಕೇವಲ 5,999 ರೂ. ಗಳಲ್ಲಿ ಪರಿಚಯಿಸಲಾಗಿದ್ದು, ಕ್ರಿಸ್ಟಲ್ ಬ್ಲೂ, ಡೀಲ್ ಗ್ರೇ ಮತ್ತು ಸಿಲ್ವರ್ ಪರ್ಪಲ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(Itel A27 With 5.45-Inch Display, 4,000mAh Battery Launched in India: Price, Specifications)

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್