AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಫ್ಲಿಪ್​​ಕಾರ್ಟ್​​ನಲ್ಲಿಯೂ ಹಳೆಯ ಫೋನ್​ಗಳನ್ನು ಮಾರಾಟ ಮಾಡಬಹುದು

ವಾಲ್​ಮಾರ್ಟ್​ ಒಡೆತನದ  ಆನ್ಲೈನ್​ ಶಾಪಿಂಗ್​ ಸಂಸ್ಥೆ ಫ್ಲಿಪ್​ ಕಾರ್ಟ್​ ಹಳೆಯ ಸ್ಮಾರ್ಟ್​ಪೋನ್​ಗಳನ್ನು ಮಾರಾಟಮಾಡಲು ಅವಕಾಶ ನೀಡುತ್ತಿದೆ. ಶೀಘ್ರದಲ್ಲಿಯೇ ಬಳಕೆದಾರರಿಗೆ ಈ ಆಯ್ಕೆಯನ್ನು ಪರಿಚಯಿಸುತ್ತಿದೆ.

ಇನ್ಮುಂದೆ ಫ್ಲಿಪ್​​ಕಾರ್ಟ್​​ನಲ್ಲಿಯೂ ಹಳೆಯ ಫೋನ್​ಗಳನ್ನು ಮಾರಾಟ ಮಾಡಬಹುದು
TV9 Web
| Edited By: |

Updated on:Feb 16, 2022 | 12:33 PM

Share

ವಾಲ್​ಮಾರ್ಟ್ (Walmart)​ ಒಡೆತನದ  ಆನ್ಲೈನ್​ ಶಾಪಿಂಗ್​ ಸಂಸ್ಥೆ ಫ್ಲಿಪ್​ ಕಾರ್ಟ್ (Flipkat)​ ಹಳೆಯ ಸ್ಮಾರ್ಟ್​ಪೋನ್​ಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತಿದೆ. ಫ್ಲಿಪ್​ ಕಾರ್ಟ್​​ ಸಂಸ್ಥೆ ಎಲೆಕ್ಟ್ರಾನಿಕ್​ ರೀ ಕಾಮರ್ಸ್​ ಯಂತ್ರ ಎನ್ನುವ ಸಂಸ್ಥೆಯನ್ನು ಶೀಘ್ರದಲ್ಲಿಯೇ ಸ್ವಾಧೀನಪಡಿಸಿಕೊಳ್ಳಲಿದ್ದು ಅದರಲ್ಲಿ ಹಳೆಯ ಸ್ಮಾರ್ಟ್ ಫೋನ್​ಗಳನ್ನು (Old Smartphone) ಬಳಕೆದಾರರು ಮಾರಾಟ ಮಾಡಬಹುದಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ  1500ಕ್ಕೂ ಹೆಚ್ಚು ಪಿನ್​ಕೋಡ್​ಗಳಲ್ಲಿ ಹಳೆಯ ಫೊನ್​ಗಳನ್ನು ಮಾರಾಟ ಮಾಡಲು ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಕುರಿತು ಫ್ಲಿಪ್​​ ಕಾರ್ಟ್​ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಫ್ಲಿಪ್​ ಕಾರ್ಟ್​ ಆ್ಯಪ್​ನಲ್ಲಿ ಕೆಳಗಿನ ಬಾರ್​ನಲ್ಲಿ ಈ ಆಯ್ಕೆ ಇರಲಿದೆ. ಸದ್ಯಕ್ಕೆ ಸ್ಮಾರ್ಟ್​ಫೋನ್​ಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಮಾರಾಟ ಮಾಡುವ ಆಯ್ಕೆಯನ್ನು ಇತರ ಕ್ಯಾಟಗರಿಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದೆ. ಎಲ್ಲಾ ರೀತಿಯ ಸ್ಮಾರ್ಟ್ ಫೋನ್​ಗಳನ್ನು ಇಲ್ಲಿ ಮಾರಾಟ ಮಾಡಬಹುದಾಗಿದೆ. ಅದು ಫ್ಲಿಪ್​ಕಾರ್ಟ್​ನಲ್ಲಿಯೇ ಖರೀದಿ ಮಾಡಿದ್ದರೂ ಆಗಬಹುದು, ಹೊರಗಡೆ ಖರೀದಿ ಮಾಡಿದ್ದರೂ ತೊಂದರೆಯಿಲ್ಲ ಎಂದಿದೆ.

ಇನ್ನು ಈ ರೀತಿ ಸ್ಮಾರ್ಟ್​ ಫೋನ್​​ ಮಾರಾಟ ಮಾಡಿದಾಗ ಬಳಕೆದಾರರು ಇ ವೋಚರ್​ ಪಡೆದುಕೊಳ್ಳುತ್ತಾರೆ. ಸ್ಮಾರ್ಟ್​ ಫೋನ್​​ ಮಾರಾಟದ ವೇಳೆ ಮಾರಟಗಾರರ ಬೆಲೆಯನ್ನು ತಿಳಿಯಲು ಕೆಲವು ಪ್ರಶ್ನೆಗಳನ್ನು ಕೇಳಲಾಗುವುದು. ಅದರ ಉತ್ತರ ಪಡೆದ ನಂತರ  48 ಗಂಟೆಯೊಳಗೆ ಅದನ್ನು ಪಡೆದುಕೊಳ್ಳುತ್ತದೆ. ನಂತರ ಅದನ್ನು ಪರಿಶೀಲನೆ ನಡೆಸಿ ಮಾರಾಟ ಮಾಡಲಿದೆ. ಜತೆಗೆ ಇ ವೋಚರ್​ಅನ್ನು ನೀಡಲಾಗುವುದು ಎಂದು ಹೇಳಲಾಗಿದೆ.

ಎಲೆಕ್ಟ್ರಾನಿಕ್ಸ್​ ರೀ ಕಾಮರ್ಸ್​ ಕಂಪನಿಯಾದ ಯಂತ್ರವನ್ನು ಫ್ಲಿಪ್​ಕಾರ್ಟ್​ ಸ್ವಾಧೀನಪಡಿಸಿಕೊಂಡ ಬಳಿ ಈ ಆಯ್ಕೆ ಆಂಡ್ರಾಯಿಡ್​ ಫೋನ್​ಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಆ ಬಳಿಕ ಖರೀದಿ ಮತ್ತು ಮಾರಾಟ ಎಲ್ಲವೂ ಆನ್ಲೈನ್​​ ಪ್ಲಾಟ್​ಫಾರ್ಮ್​ನಲ್ಲಿಯೇ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ:

Poco M4 Pro 5G: ಭಾರತದಲ್ಲಿ ರಿಲೀಸ್ ಆದ ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್‌ ಹೇಗಿದೆ?: ಖರೀದಿಸಬಹುದೆ?

Published On - 12:26 pm, Wed, 16 February 22

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ