Flipkart: ಇಂದು ಬಿಗ್ ಬಿಲಿಯನ್ ಡೇಸ್ ಕೊನೆ ದಿನ: 20,000 ರೂ. ಒಳಗೆ ಲಭ್ಯವಿರುವ ಫೋನ್ ನೋಡಿ

ಅಮೆಜಾನ್‌ ಹಬ್ಬದ ಕಾರ್ಯಕ್ರಮ ದಿ ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ 2022 (Amazon Great Indian Festival Sale) ಹಾಗೂ ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart Big Billion Days sale) ಸೆಪ್ಟೆಂಬರ್ 30 ಇಂದು ಕೊನೆಗೊಳ್ಳಲಿದೆ.

Flipkart: ಇಂದು ಬಿಗ್ ಬಿಲಿಯನ್ ಡೇಸ್ ಕೊನೆ ದಿನ: 20,000 ರೂ. ಒಳಗೆ ಲಭ್ಯವಿರುವ ಫೋನ್ ನೋಡಿ
Smartphones
Edited By:

Updated on: Sep 30, 2022 | 2:21 PM

ಎರಡು ಪ್ರಸಿದ್ಧ ಇ ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ನಲ್ಲಿ ವರ್ಷದ ಅತಿ ಡೊಡ್ಡ ಮೇಳ ಕೊನೆಯ ದಿನಕ್ಕೆ ಬಂದು ನಿಂತಿದೆ. ಅಮೆಜಾನ್‌ ಹಬ್ಬದ ಕಾರ್ಯಕ್ರಮ ದಿ ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ 2022 (Amazon Great Indian Festival Sale) ಹಾಗೂ ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart Big Billion Days sale) ಸೆಪ್ಟೆಂಬರ್ 30 ಇಂದು ಕೊನೆಗೊಳ್ಳಲಿದೆ. ಅಂತಿಮ ದಿನದಂದು ಎರಡೂ ಮೇಳಗಳಲ್ಲಿ ಆಕರ್ಷಕ ರಿಯಾಯಿತಿ ದರಕ್ಕೆ ಪ್ರಾಡಕ್ಟ್​ಗಳು ಸೇಲ್ ಆಗುತ್ತಿದೆ. ಮುಖ್ಯವಾಗಿ ಸ್ಮಾರ್ಟ್​ಫೋನ್​ಗಳಿಗೆ (Smartphone) ಬೇಡಿಕೆ ಹೆಚ್ಚಿದೆ. ಸದ್ಯ ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ 20,000 ರೂ. ಒಳಗೆ ಖರೀದಿಸಬಹುದಾದಂತ ಆಕರ್ಷಕ ಫೋನ್​ಗಳನ್ನು ನೋಡುವುದಾದರೆ

Xiaomi 11i ಹೈಪರ್‌ಚಾರ್ಜ್ ಸ್ಮಾರ್ಟ್​​ಫೋನ್​ನ 6GB RAM + 128GB ಸ್ಟೋರೇಜ್ ಮಾದರಿಗೆ 24,999 ರೂ. ಗಳ ನಿಗದಿ ಮಾಡಲಾಗಿತ್ತು. ಆದರೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ನೀವು ಇದನ್ನು 19,999 ರೂಪಾಯಿಗಳಿಗೆ ಖರೀದಿಸಬಹುದು. ICICI ಬ್ಯಾಂಕ್ ಮತ್ತು Axis ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ. 10 ರಷ್ಟು ರಿಯಾಯಿತಿಯೂ ಇದೆ.

Realme 9 Pro+ ಫೋನನ್ನು ನೀವು ಕೇವಲ 22,999 ರೂ. ಗಳ ರಿಯಾಯಿತಿ ಬೆಲೆಯಲ್ಲಿ ಪಡೆದುಕೊಳ್ಳಬಹುದು. ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ರೂ 3,000 ಮತ್ತು ಶೇ. 10 ರಷ್ಟು ರಿಯಾಯಿತಿ ನೀಡಲಾಗಿದೆ. ಇದು 6GB + 128GB ಮಾದರಿಯನ್ನು ಹೊಂದಿದೆ.

ಇದನ್ನೂ ಓದಿ
Ban: ಭಾರತದಲ್ಲಿ 67 ಅಶ್ಲೀಲ ವೆಬ್​​ಸೈಟ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರದಿಂದ ನೋಟಿಸ್
Vivo Y73t: ಬರೋಬ್ಬರಿ 6,000mAh ಬ್ಯಾಟರಿ: ವಿವೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ
JIO: ಪ್ರತಿದಿನ 2GB ಡೇಟಾ: ಜಿಯೋ ನೀಡುತ್ತಿದೆ ಆಕರ್ಷಕ ಬೆಲೆಗೆ ಭರ್ಜರಿ ಪ್ಲಾನ್
Moto G72: ಫೋಟೋಗ್ರಫಿಗೆ ಮೋಟೋ ಸಿದ್ಧಪಡಿಸಿದೆ ಆಕರ್ಷಕ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?

ಇನ್ನು 4GB + 128GB ಮಾದರಿಯೊಂದಿಗೆ ಸ್ಯಾಮ್​ಸಂಗ್ ಗ್ಯಾಲಕ್ಸಿ F23 ಫೋನ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ 10,999 ರೂ. ಗೆ ಲಭ್ಯವಿದೆ. Moto G52 ಸಹ ರಿಯಾಯಿತಿಯನ್ನು ಪಡೆದುಕೊಂಡಿದ್ದು 12,999 ರೂ. ಆರಂಭಿಕ ಬೆಲೆಯೊಂದಿಗೆ ಮಾರಾಟವಾಗುತ್ತಿದೆ. ICICI ಬ್ಯಾಂಕ್ ಅಥವಾ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವವರು 11,699 ರೂ. ಗೆ ಖರೀದಿಸಬಹುದು.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಅನ್ನು 17,999 ರೂ. ಗಳ ಆರಂಭಿಕ ಬೆಲೆಯೊಂದಿಗೆ ಕಾಣಿಸಿಕೊಂಡಿದೆ. ಆದರೆ, ICICI/Axis ಬ್ಯಾಂಕ್ ಕಾರ್ಡ್‌ಗಳ ಮೂಲಕ ಇದನ್ನು 14,999 ರೂ. ಗೆ ನಿಮ್ಮದಾಗಿಸಬಹುದು.

ಇನ್ನು ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ ಅಚ್ಚರಿ ಎಂಬಂತೆ ಇತ್ತೀಚೆಗಷ್ಟೆ ಬಿಡುಗಡೆ ಆದ ಗೂಗಲ್ ಪಿಕ್ಸೆಲ್ 6a ಹಾಗೂ ನಥಿಂಗ್ ಫೋನ್ 1 ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್​ ಘೋಷಿಸಲಾಗಿದೆ. ಕೇವಲ 30,000 ರೂ. ಒಳಗೆ ಈ ಸ್ಮಾರ್ಟ್​ಫೋನ್ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಈ ಬಾರಿಯ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಖರೀದಿದಾರರು ಐಫೋನ್‌ 13 ಮತ್ತು ಐಫೋನ್‌ 12 ಮೇಲೆ ಆಕರ್ಷಕ ಡಿಸ್ಕೌಂಟ್‌ ನಿರೀಕ್ಷಿಸಬಹುದು. ಇದಲ್ಲದೆ ಬ್ಯಾಂಕ್‌ ಆಫರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಅಥವಾ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ಗಳ ಮೇಲೆ 10% ಡಿಸ್ಕೌಂಟ್‌ ಪಡೆಯುವ ಸಾಧ್ಯತೆಯಿದೆ. ಇನ್ನು ಬ್ಯಾಂಕ್‌ ಆಫರ್‌ಗಳ ಜೊತೆಗೆ ನೋ ಕಾಸ್ಟ್‌ ಇಎಂಐ ಮತ್ತು ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಆಫರ್‌ ಕೂಡ ಪಡೆದುಕೊಳ್ಳಬಹುದಾಗಿದೆ.

Published On - 2:21 pm, Fri, 30 September 22