AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Big Billion Days Sale: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್​ಗೆ ದಿನಗಣನೆ: ಯಾವುದಕ್ಕೆ ಎಷ್ಟು ರಿಯಾಯಿತಿ?

ಫ್ಲಿಪ್‌ಕಾರ್ಟ್ (Flipkart) ನಲ್ಲಿ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart annual Big Billion Days sale 2022) ಸೆಪ್ಟೆಂಬರ್‌ 23 ರಂದು ಲೈವ್ ಆಗಲಿದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಬಳಕೆದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್‌ ಪ್ರಾರಂಭವಾಗಲಿದೆ.

Flipkart Big Billion Days Sale: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್​ಗೆ ದಿನಗಣನೆ: ಯಾವುದಕ್ಕೆ ಎಷ್ಟು ರಿಯಾಯಿತಿ?
Flipkart
TV9 Web
| Updated By: Vinay Bhat|

Updated on:Sep 19, 2022 | 2:34 PM

Share

ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ (Flipkart) ನಲ್ಲಿ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart annual Big Billion Days sale 2022) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಕೂಡ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುವುದಾಗಿ ತಿಳಿಸಿರುವ ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇಸ್​ನಲ್ಲಿ ಸ್ಮಾರ್ಟ್‌ಫೋನ್‌ಗಳು (Smartphones), ಎಲೆಕ್ಟ್ರಾನಿಕ್ಸ್, ವಸ್ತುಗಳು, ಫ್ಯಾಶನ್ ಮತ್ತು ಗೃಹ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ದೊರೆಯಲಿದೆ. ಈ ಸೇಲ್‌ ಸೆಪ್ಟೆಂಬರ್‌ 23 ರಂದು ಲೈವ್ ಆಗಲಿದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಬಳಕೆದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್‌ ಪ್ರಾರಂಭವಾಗಲಿದೆ. ಸೇಲ್‌ ಸಂದರ್ಭದಲ್ಲಿ ಖರೀದಿದಾರರು ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಭರ್ಜರಿ ರಿಯಾಯಿತಿಯನ್ನು ಪಡೆಯಬಹುದು.

ಈ ಬಾರಿಯ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಖರೀದಿದಾರರು ಐಫೋನ್‌ 13 ಮತ್ತು ಐಫೋನ್‌ 12 ಮೇಲೆ ಆಕರ್ಷಕ ಡಿಸ್ಕೌಂಟ್‌ ನಿರೀಕ್ಷಿಸಬಹುದು. ಇದಲ್ಲದೆ ಬ್ಯಾಂಕ್‌ ಆಫರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಅಥವಾ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ಗಳ ಮೇಲೆ 10% ಡಿಸ್ಕೌಂಟ್‌ ಪಡೆಯುವ ಸಾಧ್ಯತೆಯಿದೆ. ಇನ್ನು ಬ್ಯಾಂಕ್‌ ಆಫರ್‌ಗಳ ಜೊತೆಗೆ ನೋ ಕಾಸ್ಟ್‌ ಇಎಂಐ ಮತ್ತು ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಆಫರ್‌ ಕೂಡ ಪಡೆದುಕೊಳ್ಳಬಹುದಾಗಿದೆ.

ಇತ್ತ ಪ್ಲಿಪ್​ಕಾರ್ಟ್ ಮಾರಾಟದ ಜೊತೆಗೆ ಅತ್ತ ಅಮೆಜಾನ್ ಕೂಡ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಶಾಪಿಂಗ್ ಉತ್ಸವವನ್ನು ಆಯೋಜಿಸುವ ಸಾಧ್ಯತೆಯಿದೆ. ಹೀಗಾಗಿ ಎರಡು ಪ್ರಸಿದ್ಧ ಇ ಕಾಮರ್ಸ್ ನಡುವೆ ಪೈಪೋಟಿ ಏರ್ಪಡುವುದು ಖಚಿತ. ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ ಎಲೆಕ್ಟ್ರಾನಿಕ್ಸ್, ಪರಿಕರಗಳು, ಟಿವಿಗಳು ಮತ್ತು ಉಪಕರಣಗಳ ಮೇಲೆ ಖರೀದಿದಾರರು 80% ವರೆಗೆ ರಿಯಾಯಿತಿ ಪಡೆಯಬಹುದು ಹೇಳಲಾಗುತ್ತಿದೆ. ಜೊತೆಗೆ ಕಿಚನ್ ಅಥವಾ ಅಡುಗೆ ಸಾಮಾಗ್ರಿಗಳ ಮೇಲೆ ಪ್ಲಿಪ್​ಕಾರ್ಟ್ ಶೇ 85ರಷ್ಟು ರಿಯಾಯಿತಿ ನೀಡಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ
Image
eSIM ಎಂದರೇನು? ಏರ್​ಟೆಲ್, ಜಿಯೋದಿಂದ ಹೊಸ ಮತ್ತು ಹಳೆಯ ಐಫೋನ್​ಗಳಲ್ಲಿ ಇ-ಸಿಮ್ ಸಕ್ರಿಯಗೊಳಿಸುವುದು ಹೇಗೆ?
Image
ಸೆ.21ರಿಂದ ಬ್ಲೂ ಟಿಕ್ ಚಂದಾದಾರರಿಗಾಗಿ ಎಡಿಟ್ ಟ್ವೀಟ್ ವೈಶಿಷ್ಟ್ಯ ಹೊರತರಲಿರುವ ಟ್ವಿಟರ್
Image
Googling Tricks: ಗೂಗಲ್ ಬಳಸುವ ಮುನ್ನ ಯಾವ ರೀತಿ ಸರ್ಚ್​ ಮಾಡಬೇಕು ಎಂಬುವುದನ್ನು ತಿಳಿಯಿರಿ
Image
WhatsApp: ಆಂಡ್ರಾಯ್ಡ್ ಮತ್ತು ಐಒಎಸ್​​ನಲ್ಲಿ ವಾಟ್ಸ್​ಆ್ಯಪ್ ಅನ್ನು ಸುಲಭವಾಗಿ ಲಾಕ್ ಮಾಡಬಹುದು: ಹೇಗೆ?

ಫ್ಲಿಪ್‌ಕಾರ್ಟ್ ಜೊತೆ ಬಹುತೇಕ ಎಲ್ಲಾ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಒಪ್ಪಂದ ಮಾಡಿಕೊಂಡಿದ್ದು, ಈ ಮಾರಾಟದ ಸಮಯದಲ್ಲಿ ಬ್ಯಾಂಕ್ ಕೊಡುಗೆಗಳ ಜೊತೆಯಲ್ಲಿ ಎಲ್ಲಾ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ. 10 ಪರ್ಸೆಂಟ್​ಗಿಂತ ಹೆಚ್ಚು ಡಿಸ್ಕೌಂಟ್ಸ್ ಸಿಗಲಿದೆ ಎಂದು ಹೇಳಲಾಗಿದೆ. ಬೋಟ್ ಸೌಂಡ್‌ಬಾರ್‌ಗಳು ಮತ್ತು ಹೆಡ್‌ಫೋನ್‌ಗಳ ಮೇಲೆ 80% ರಿಯಾಯಿತಿ ನೀಡುತ್ತದೆ. ಬೊಟ್ ನಿಂದ ಹೊಸ ಹೆಡ್‌ಫೋನ್ ಅಥವಾ ಆಡಿಯೋ ಆಕ್ಸಸರಿಸಗಳನ್ನ ಪಡೆಯಲು ಇದು ಅತ್ಯುತ್ತಮ ಸಮಯವಾಗಿದೆ.

ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ರಿಯಲ್‌ಮಿ C33 ಫೋನ್ ಅತ್ಯುತ್ತಮ ಆಫರ್ ಪಡೆದಿದ್ದು, 6,999 ರೂ.ಗಳಿಂದ ಖರೀದಿಗೆ ಲಭ್ಯ. ಅಂತೆಯೆ ರಿಯಲ್‌ಮಿ C35 ಫೋನ್ 9,999 ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ರಿಯಲ್‌ಮಿ 9 (6GB+128GB) ಆಫರ್‌ಗಳನ್ನು ಒಳಗೊಂಡಂತೆ 12,999 ರೂ.ಗಳಿಗೆ ದೊರೆಯಲಿದೆ. ರಿಯಲ್‌ಮಿ C30 ಫೋನ್ 5,799 ರೂ.ಗಳಲ್ಲಿ ಆಕರ್ಷಕ ಪ್ರೈಸ್‌ ಟ್ಯಾಗ್‌ನಲ್ಲಿ ಲಭ್ಯವಾಗಲಿದೆ. ರಿಯಲ್‌ಮಿ 9i ಫೋನ್ 10,999ರೂ.ಗಳ ಪ್ರಾರಂಭ ಬೆಲೆಯಲ್ಲಿ ಸಿಗಲಿದೆ.

ಇನ್ನು ಇಂಟೆಲ್ಚಾಲಿತ ಲ್ಯಾಪ್‌ಟಾಪ್‌ಗಳ ಮೇಲೆ ಆಕರ್ಷಕ ರಿಯಾಯಿತಿ ಇರಲಿದೆಯಂತೆ. ಇದರ ಜೊತೆಗೆ ಹಲವು ಬ್ರಾಂಡ್‌ಗಳು, ಕಿಚನ್‌ ಪ್ರಾಡಕ್ಟ್‌ಗಳು, ಗೃಹೋಪಯೋಗಿ ವಸ್ತುಗಳು, ರೆಫ್ರಿಜರೇಟರ್‌ಗಳು ಮತ್ತು ಹೆಚ್ಚಿನವುಗಳಿಂದ ಸ್ಮಾರ್ಟ್ ಟಿವಿಗಳ ಮೇಲೂ ಸಮಾರು 80% ರಿಯಾಯಿತಿ ನೀಡಬಹುದು.

Published On - 2:34 pm, Mon, 19 September 22