ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಭರ್ಜರಿ ಮೇಳಗಳು ಆರಂಭವಾಗಿದೆ. ಅತ್ತ ಅಮೇಜಾನ್ನಲ್ಲಿ (Amazon) ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ ನಡೆಯುತ್ತಿದ್ದರೆ ಇತ್ತ ಫ್ಲಿಪ್ಕಾರ್ಟ್ನಲ್ಲಿ ಇಂದಿನಿಂದ ಬಿಗ್ ಸೇವಿಂಗ್ ಡೇಸ್ (Flipkart Big Saving Days sale) ಸೇಲ್ಗೆ ಪ್ರಾರಂಭಗೊಂಡಿದೆ. ಇದೇ ಮಾರ್ಚ್ 12 ರಂದು ಈ ಬಹುನಿರೀಕ್ಷಿತ ಸೇಲ್ ಲೈವ್ ಆಗಿದ್ದು, ಮಾರ್ಚ್ 17 ರವರೆಗೆ ನಡೆಯಲಿದೆ. ಮಾರಾಟದ ಸಮಯದಲ್ಲಿ, ಖರೀದಿದಾರರಿಗೆ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಬಿಗ್ ಆಫರ್‌ಗಳನ್ನು ನೀಡಲಾಗಿದೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್ ಟೈಮ್ ಎನ್ನಬಹುದು. ಯಾಕಂದ್ರೆ ಈ ಸೇಲ್‌ನಲ್ಲಿ ಮೊಬೈಲ್ಗಳ ಮೇಲೆ ಸೇರಿದಂತೆ ಹೆಚ್ಚುವರಿಯಾಗಿ ಹಲವಾರು ಉತ್ಪನ್ನಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ಒದಗಿಸಲು ಫ್ಲಿಪ್‌ಕಾರ್ಟ್ ಮುಂದಾಗಿದೆ. ಖರೀದಿದಾರರು ರಿಯಲ್ ಮಿ, ಒಪ್ಪೋ, ಸ್ಯಾಮ್ಸಂಗ್, ಆ್ಯಪಲ್ ಕಂಪನಿ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳು (Smartphone) ಊಹಿಸಲಾಗದ ರೀತಿಯ ಡಿಸ್ಕೌಂಟ್ ಪಡೆದುಕೊಳ್ಳಬಹುದು.
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ನಲ್ಲಿ ಸ್ಮಾರ್ಟ್ ವಾಚ್‌ಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿಗಳನ್ನು ಘೋಷಿಸಿದೆ. ಟ್ರಿಮ್ಮರ್‌ಗಳು ಮತ್ತು ಶೇವರ್‌ಗಳ ಮೇಲೆ ಶೇಕಡಾ 70 ರಷ್ಟು ರಿಯಾಯಿತಿ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ನೀಡಿದೆ. ಒನ್ಪ್ಲಸ್, ಬೋಟ್, ಜೆಬಿಎಲ್, ರಿಯಲ್ ಮಿ ಮತ್ತು ಹೆಚ್ಚಿನ ಬ್ರಾಂಡ್‌ಗಳಿಂದ ಪೋರ್ಟಬಲ್ ಸ್ಪೀಕರ್‌ಗಳು ಮತ್ತು ಹೆಡ್‌ಫೋನ್‌ಗಳು 80 ಪ್ರತಿಶತದಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ತಮ್ಮ ಹೋಳಿ ಶಾಪಿಂಗ್ ಅಗತ್ಯಗಳನ್ನು ಪೂರೈಸಲು, ಬಳಕೆದಾರರು ಹೋಳಿ ಹಬ್ಬಕ್ಕೆ ಬಟ್ಟೆಗಳನ್ನು 80 ಪ್ರತಿಶತದಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದು. ಜೊತೆಗೆ ಮನೆ ಮತ್ತು ಅಡುಗೆಗೆ ಅಗತ್ಯ ವಸ್ತುಗಳ ಬೆಲೆ 99 ರೂ. ನಿಂದ ಪ್ರಾರಂಭವಾಗುತ್ತವೆ.
ಸ್ಮಾರ್ಟ್‌ಫೋನ್ ವಿಚಾರಕ್ಕೆ ಬರುವುದಾದರೆ, ಮೋಟೋರೊಲಾ ಎಡ್ಜ್ 20 ಪ್ರೊ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ 32,999 ರೂ. ಗಳಿಗೆ ಲಭ್ಯವಾಗಲಿದೆ. ಈ ಫೋನ್‌ನ ಮೂಲ ಬೆಲೆ 36,999 ರೂ. ಆಗಿದೆ. ಇದಲ್ಲದೆ ಬ್ಯಾಂಕ್ ಆಫರ್ ಮೂಲಕ 32,249ರೂ. ಗಳಿಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870SoC ಪ್ರೊಸೆಸರ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ f/1.9 ಲೆನ್ಸ್ ಹೊಂದಿದೆ. ಜೊತೆಗೆ 4,500mAh ಬ್ಯಾಟರಿಯನ್ನು ಒದಗಿಸಿದ್ದು, 30W ಟರ್ಬೊಪವರ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇದರ ಜೊತೆಗೆ ಮೋಟೋರೊಲಾ ಎಡ್ಜ್ 20 ಫೋನ್ ಡಿಸ್ಕೌಂಟ್‌ನಲ್ಲಿ 25,999 ರೂ. ಗಳಿಗೆ ದೊರೆಯಲಿದೆ. ಈ ಫೋನ್‌ನ ಮೂಲ ಬೆಲೆ 29,999 ರೂ. ಆಗಿದೆ. ಇದಲ್ಲದೆ ಬ್ಯಾಂಕ್ ಆಫರ್ ಮೂಲಕ ಈ ಸ್ಮಾರ್ಟ್‌ಫೋನ್ 25,249 ರೂ. ಗಳಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ.
Infinix X3: ಭಾರತದಲ್ಲಿ ಕೇವಲ 11,999 ರೂ. ಗೆ ಬಿಡುಗಡೆ ಆಗಿದೆ ಇನ್ಫಿನಿಕ್ಸ್ X3 ಸ್ಮಾರ್ಟ್ ಟಿವಿ
Samsung Galaxy S22 series: ದುಬಾರಿ ಬೆಲೆಯ ಗ್ಯಾಲಕ್ಸಿ S22 ಸರಣಿಯ ಮೂರು ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯ