ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಎಲೆಕ್ಟ್ರಾನಿಕ್ ಸೇಲ್ (Flipkart Electronics sale) ನಡೆಯುತ್ತಿದ್ದು ಬಹುತೇಕ ಎಲ್ಲ ಎಲೆಕ್ಟ್ರಾನಿಕ್ ಪ್ರಾಡಕ್ಟ್ಗಳು ಬಂಪರ್ ಆಫರ್ನಲ್ಲಿ ಕಾಣಿಸಿಕೊಂಡಿದೆ. ಇಂಡಿಪೆಂಡೆನ್ಸ್ ಡೇ ಸೇಲ್ ಬೆನ್ನಲ್ಲೇ ಈ ಮೇಳ ಆಯೋಜಿಸಿರುವುದು ವಿಶೇಷ. ಮೋಟೋರೊಲಾ, ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ ಸೇರಿದಂತೆ ಹೆಚ್ಚಿನ ಸ್ಮಾರ್ಟ್ಫೋನ್ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಕಾಣುತ್ತಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆ ಆದ ಸ್ಯಾಮ್ಸಂಗ್ (Samsung) ಕಂಪನಿಯ ಗ್ಯಾಲಕ್ಸಿ F23 ಫೋನ್ ಈಗ ಕೇವಲ 14,999 ರೂ. ಗೆ ಮಾರಾಟ ಆಗುತ್ತಿದೆ. ಇದರ ಮೂಲಬೆಲೆ 17,499 ರೂ. ಆಗಿದೆ. 6.6 ಇಂಚಿನ ಡಿಸ್ ಪ್ಲೇ ಜೊತೆಗೆ, 50 ಮೆಗಾಫಿಕ್ಸೆಲ್ನ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದರಲ್ಲಿದೆ. 5000mAh ಸಾಮರ್ಥ್ಯದ ಬ್ಯಾಟರಿಗೆ 25W ಫಾಸ್ಟ್ ಚಾರ್ಜರ್ ಕೂಡ ನೀಡಲಾಗಿದೆ.
ಐಫೋನ್ 14 ಸರಣಿ ಮುಂದಿನ ತಿಂಗಳು ಅನಾವರಣಗೊಳ್ಳಲಿದೆ. ಹೀಗಿರುವಾಗ ಹಳೆಯ ಐಫೋನಿಗೆ ಬಂಪರ್ ಡಿಸ್ಕೌಂಟ್ ನೀಡಲಾಗುತ್ತಿದೆ. ಇದೀಗ ಐಫೋನ್ 12 ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ 53,999 ರೂ. ಗಳ ಆರಂಭಿಕ ಬೆಲೆಯೊಂದಿಗೆ ಮಾರಾಟವಾಗುತ್ತಿದೆ. ಅಂದರೆ ಒಟ್ಟು 11,900 ರೂ. ವರೆಗಿನ ರಿಯಾಯಿತಿ ಪಡೆದುಕೊಳ್ಳಬಹುದು. ಇದು 5G ಅನ್ನು ಬೆಂಬಲಿಸುತ್ತದೆ. ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್‌ಗಳನ್ನು ಹೊಂದಿವೆ.
ಇನ್ನು ಮೋಟೋರೊಲಾ G52 ಸ್ಮಾರ್ಟ್ಫೋನ್ ಕೂಡ 14,499 ರೂ. ಗೆ ಸೇಲ್ ಆಗುತ್ತಿದೆ. ಇದರ ಜೊತೆಗೆ ನಿಮ್ಮ ಬಳಿ ಎಸ್ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದು ಇದರ ಮೂಲಕ ಖರೀದಿಸಿದರೆ ಶೇ. 10 ರಷ್ಟು ಡಿಸ್ಕೌಂಟ್ ಸಿಗುತ್ತದೆ. ಬಜೆಟ್ ಬೆಲೆಯ ರಿಯಲ್ ಮಿ C11 ಫೋನ್ ಕೂಡ ಕೇವಲ 7,499 ರೂ. ಗೆ ಖರೀದಿಸಬಹುದು. ಇದರಲ್ಲಿ ಕೂಡ ಎಸ್ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ದಾರರಿಗೆ ಶೇ. 10 ರಷ್ಟು ರಿಯಾಯಿತಿ ಇದೆ.
ಮೋಟೋ G32 ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ ಕೇವಲ 11,999 ರೂ. ಗೆ ಸೇಲ್ ಕಾಣುತ್ತಿದೆ. ಇದರ ಜೊತೆಗೆ ಎಸ್ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ದಾರರಿಗೆ ಶೇ. 10 ರಷ್ಟು ಆಫರ್ ಇದೆ. ಈ ಫೋನಿನ ಮೂಲಬೆಲೆ 12,999 ರೂ., ಇನ್ನು ಐಫೋನ್ 13 ಅನ್ನು ನೀವು 73,999 ರೂ. ಗೆ ಖರೀದಿಸಬಹುದು. ಇದರ ಮೂಲಬೆಲೆ 79,900 ರೂ. ಆಗಿದೆ. ಇದರಲ್ಲಿ ಕೂಡ ಬ್ಯಾಂಕ್ ಆಫರ್, ಎಕ್ಸ್ಚೇಂಜ್ ಆಫರ್ ನೀಡಲಾಗಿದೆ.