ಇ ಕಾಮರ್ಸ್ ತಾಣಗಳಲ್ಲಿ ಸ್ಮಾರ್ಟ್ಫೋನ್ಗಳಿಗೆ ಸದಾ ಒಂದಲ್ಲ ಒಂದು ಆಫರ್ಗಳು ಇದ್ದೇ ಇರುತ್ತವೆ. ಬ್ಯಾಂಕ್ ಆಫರ್, ಎಕ್ಸ್ಚೇಂಜ್ ಆಫರ್, ಫ್ಲಿಪ್‌ಕಾರ್ಟ್ (Flipkart), ಅಮೆಜಾನ್ನಲ್ಲಾದರೆ (Amazon) ಅನೇಕ ಮೇಳಗಳು ನಡೆಯುತ್ತಲೇ ಇರುತ್ತವೆ. ಆದರೆ, ಫ್ಲಿಪ್‌ಕಾರ್ಟ್ (Flipkart Love it or Return It) ತನ್ನ ಬಳಕೆದಾರರಿಗೆ ಅಚ್ಚರಿಯ ಕೊಡುಗೆಯನ್ನು ನೀಡಿದೆ. ಇದರ ಮೂಲಕ ಗ್ರಾಹಕರು ಹಣಕೊಟ್ಟು ಒಂದು ಹೊಸ ಸ್ಮಾರ್ಟ್‌ಫೋನ್ (Smartphone) ಅನ್ನು ಖರೀದಿಸಬಹುದು. ಅದನ್ನು ನೀವು 15 ದಿನಗಳವರೆಗೆ ಬಳಸಬಹುದು. ಈ ಸಮಯದಲ್ಲಿ ಆ ಸ್ಮಾರ್ಟ್‌ಫೋನ್ ನಿಮಗೆ ಇಷ್ಟವಾಗಿಲ್ಲ ಎಂದಾದರೆ ಅದನ್ನು ಹಿಂತಿರುಗಿಸಬಹುದು. ಈ ಸಂದರ್ಭ ಬಳಕೆದಾರನು ತನ್ನ ಸಂಪೂರ್ಣ ಹಣವನ್ನು ಮರುಪಾವತಿಯಾಗಿ ಪಡೆಯುತ್ತಾರೆ.
ಆದರೆ, ಈ ಕೊಡುಗೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಲ್ಲ, ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ. ಹೊಸ ‘ಲವ್ ಇಟ್ ಆರ್ ರಿಟರ್ನ್ ಇಟ್’ ಪ್ರೋಗ್ರಾಂಗಾಗಿ ಫ್ಲಿಪ್‌ಕಾರ್ಟ್ ಸ್ಯಾಮ್‌ಸಂಗ್ ಜೊತೆ ಪಾಲುದಾರಿಕೆ ಹೊಂದಿದೆ. Samsung Galaxy Z Fold 3 ಮತ್ತು Samsung Galaxy Z Flip 3 ನಂತಹ ಮಡಚುವ ಸ್ಮಾರ್ಟ್ಫೋನ್ಗಳನ್ನು ಪರೀಕ್ಷಿಸಲು ಗ್ರಾಹಕರಿಗೆ ಈ ಅವಕಾಶವನ್ನು ಮಾಡಿದೆ.
ಈ ಫ್ಲಿಪ್‌ಕಾರ್ಟ್ ಕಾರ್ಯಕ್ರಮವು ಪ್ರಸ್ತುತ ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಮುಂಬೈ, ಗುರುಗ್ರಾಮ್, ಅಹಮದಾಬಾದ್, ಕೋಲ್ಕತ್ತಾ, ಚೆನ್ನೈ ಮತ್ತು ವಡೋದರದಲ್ಲಿ ಚಾಲ್ತಿಯಲ್ಲಿದೆ.
ಫ್ಲಿಪ್‌ಕಾರ್ಟ್‌ನಿಂದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 3 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 3 ಖರೀದಿಸಿ, ಈ ಪೋನ್ ಇಷ್ಟವಾಗದೇ ಇದ್ದರೆ, ಅದನ್ನು ವಾಪಸ್ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ. ನೀವು ರಿಟರ್ನ್ ರಿಕ್ವೆಸ್ಟ್ ಅನ್ನು ಹಾಕಿದರೆ, ಪೋನ್ ಅನ್ನು ಹಿಂತಿರುಗಿಸಬಹುದು. ಹಾಗೆಯೆ ವಾಪಸ್ ಪಡೆಯುವ ಮುನ್ನ ಫೋನ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಫ್ಲಿಪ್‌ಕಾರ್ಟ್ ಪರಿಶೀಲಿಸುತ್ತದೆ. ನಂತರ ಪೋನ್ ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಹಿಂತಿರುಗಿಸಲಾಗುತ್ತದೆ.
15 ದಿನ ಬಳಸಿ ಈ ಸ್ಮಾರ್ಟ್‌ಫೋನ್ ನಿಮಗೆ ಇಷ್ಟವಾಗಿಲ್ಲ ಎಂದಾದರೆ ಮರುಪಾವತಿ ಮಾಡಲು ಮೊದಲನೆಯದಾಗಿ ಫ್ಲಿಪ್‌ಕಾರ್ಟ್ ಒದಗಿಸಿದ ರಿಟರ್ನ್ ರಿಕ್ವೆಸ್ಟ್ ವೆಬ್‌ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಪ್ಲಿಕೇಶನ್‌ಗೆ ಲಾಗಿನ್ ಮಾಡಲು ಮಾನ್ಯವಾದ IMEI ಸಂಖ್ಯೆಯನ್ನು ನಮೂದಿಸಿ. ಈಗ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ನಮೂದಿಸಬೇಕು. ಇದಾದ ನಂತರ ಟಿಕೆಟ್ ಸಂಖ್ಯೆಯನ್ನು ರಚಿಸಲಾಗುತ್ತದೆ ಮತ್ತು ಬಳಕೆದಾರರು ಇಮೇಲ್ ಅನ್ನು ಪಡೆಯುತ್ತಾರೆ. ಈ ಇಮೇಲ್ ಮೂಲಕ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲಾಗುತ್ತದೆ, ಅದು ಎಲ್ಲವೂ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಫೋನ್‌ನಲ್ಲಿ ಪರಿಶೀಲಿಸುತ್ತದೆ. ಈ ಪರಿಶೀಲನೆಯ ನಂತರ, ಬಳಕೆದಾರನನ್ನು ಪಿಕಪ್ ಮಾಡಲು ಸಂಪರ್ಕಿಸಲಾಗುತ್ತದೆ. ಸಾಧನವನ್ನು ತೆಗೆದುಕೊಂಡ 7 ದಿನಗಳಲ್ಲಿ ಬಳಕೆದಾರರು ತಾವು ಪಾವತಿಸಿದದ ಹಣವನ್ನು ಪುನಃ ಪಡೆಯುತ್ತಾರೆ.
WhatsApp: ವಾಟ್ಸ್ಆ್ಯಪ್ ಲಾಸ್ಟ್ ಸೀನ್ ಆಯ್ಕೆಯಲ್ಲಿ ಅಚ್ಚರಿಯ ಹೊಸ ಫೀಚರ್: ಬೆರಗಾದ ಬಳಕೆದಾರರು
0888888888: ಈ ಫೋನ್ ನಂಬರ್ ಬ್ಯಾನ್ ಆಗಲು ಅಸಲಿ ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ!
(Flipkart has unveiled a new Love it or Return It programme for premium smartphones)