ಮಾರುಕಟ್ಟೆಯಲ್ಲಿಂದು ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಹೊಸ ಸ್ಮಾರ್ಟ್ಫೋನ್ಗಳು (Smartphones) ಬಿಡುಗಡೆ ಆಗುತ್ತವೆ. ಇದರಲ್ಲಿ ಬಹುತೇಕ ಮೊಬೈಲ್ಗಳು ಬಜೆಟ್ ಅಥವಾ ಮಧ್ಯಮ ಬೆಲೆಗೆ ಲಭ್ಯವಿರುವುದರಿಂದ ಬೇಗನೆ ಸೇಲ್ ಆಗಿ ಬಿಡುತ್ತದೆ. ಈಗ ಉಪಯೋಗಿಸುತ್ತಿರುವ ಮೊಬೈಲ್ ಬೋರ್ ಆಯಿತು ಎಂದಾಗ ಜನರು ಮತ್ತೊಂದು ಹೊಸ ಸ್ಮಾರ್ಟ್ಫೋನ್ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ನೂತನ ಮೊಬೈಲ್ ಖರೀದಿಸುವಾಗ ಕೆಲವರು ತಮ್ಮ ಹಳೆಯ ಫೋನನ್ನು ಎಷ್ಟು ಬೆಲೆ ಸಿಗುತ್ತೊ ಅಷ್ಟಕ್ಕೆ ಹೊರಗಿನ ರಿಟೈಲ್ ಸ್ಟೋರ್ಗೆ ಮಾರಾಟ ಮಾಡಿ ಬಿಡುತ್ತಾರೆ. ಆ ಮೊಬೈಲ್ಗೆ (Mobile) ಅರ್ಹವಾದ ಬೆಲೆ ಸಿಗುವುದಿಲ್ಲ. ಆದರೆ, ನಿಮ್ಮ ಮೊಬೈಲ್ ಅನ್ನು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ (Flipkart) ಮೂಲಕ ಮಾರಾಟ ಮಾಡಬಹುದು ಎಂಬುದು ನಿಮಗೆ ಗೊತ್ತೇ?. ಇದಕ್ಕಾಗಿ ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್.
ಫ್ಲಿಪ್ಕಾರ್ಟ್ ಸಂಸ್ಥೆ ಇತ್ತೀಚೆಗಷ್ಟೆ ತನ್ನ ಫೆಸ್ಟಿವಲ್ ಸೀಸನ್ 2022 ರಲ್ಲಿ ಸೆಲ್- ಬ್ಯಾಂಕ್ ಪ್ರೊಗ್ರಾಮ್ ಎಂಬ ವಿಶೇಷ ಆಯ್ಕೆಯನ್ನು ನೀಡಿತ್ತು. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್ಫೋನನ್ನು ಯಾವುದೇ ಅಪಾಯವಿಲ್ಲದೆ ಸೇಫ್ ಹಾಗೂ ಸುಲಭವಾಗಿ ಮಾರಾಟ ಮಾಡಬಹುದು. ಇಲ್ಲಿ ನಿಮ್ಮ ಮೊಬೈಲ್ಗೆ ಅರ್ಹವಾಗಿ ಖಚಿತ ಬೆಲೆ ಕೂಡ ಸಿಗುತ್ತದೆ. ಕೆಲವೇ ಸಮಯದಲ್ಲಿ ಹಣ ನಿಮ್ಮ ಬ್ಯಾಂಕ್ ಅಕೌಂಟ್ಗೆ ಬಂದಿರುತ್ತದೆ. ಫ್ಲಿಪ್ಕಾರ್ಟ್ ಮೂಲಕ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ಫೋನ್ ಸೇಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ.
ಫ್ಲಿಪ್ಕಾರ್ಟ್ನಲ್ಲಿ ಹಳೆಯ ಫೋನ್ ಸೇಲ್ ಮಾಡುವುದು ಹೇಗೆ?:
ಹಳೆಯ ಫೋನ್ ಸೇಲ್ ಮಾಡುವ ಮುನ್ನ ಈ ಕೆಲಸ ಮಾಡಿ:
ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವ ಮುನ್ನ ಅದರಲ್ಲಿರುವ ಅಕೌಂಟ್ಸ್, ಫೈಲ್ಸ್, ಫೋಟೋಗಳನೆಲ್ಲಾ ಬ್ಯಾಕಪ್ ಮಾಡಿಕೊಳ್ಳಿ. ಅದಕ್ಕಾಗಿ ಗೂಗಲ್ನಲ್ಲಿ ದೊರೆಯುವ ಒನ್ಡ್ರೈವ್ ಆ್ಯಪ್ ಬಳಕೆ ಮಾಡಬಹುದು. ಅಂತೆಯೇ, ಟ್ವಿಟ್ಟರ್, ಫೇಸ್ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್, ಫೋನ್ ಪೇ, ಗೂಗಲ್ ಪೇ ಸೇರಿದಂತೆ ನೀವು ಲಾಗಿನ್ ಆಗಿರುವ ಆಕೌಂಟ್ನಿಂದ ಲಾಗ್ ಜೌಟ್ ಆಗಿದ್ದೀರಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ನೀವು ಫೋನು ಮಾರಾಟ ಮಾಡುವ ಮುನ್ನ ರಿಸೆಟ್ ಮಾಡುವುದು ಉತ್ತಮ ಆಯ್ಕೆ.
Published On - 12:11 pm, Mon, 17 October 22