ವಾಲೆಂಟೈನ್ಸ್ ಡೇ (Valentines Day) ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಂದರ್ಭ ನೀವು ಪ್ರೀತಿಯನ್ನು ವ್ಯಕ್ತಪಡಿಸುವ ಜೊತೆಗೆ ವಿಶೇಷ ಉಡುಗೊರೆಯನ್ನೂ ನೀಡಿದರೆ ನಿಮ್ಮನ್ನು ಪ್ರೀತಿಸುವವರು ಮತ್ತಷ್ಟು ಖುಷಿ ಪಡಬಹುದು. ಇದಕ್ಕಾಗಿಯೇ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ‘ಫ್ಲಿಪ್ ಹಾರ್ಟ್ ಡೇಸ್’ (Flip Heart Days) ಎಂಬ ವಿಶೇಷ ಮೇಳವನ್ನ ಶುರು ಮಾಡಿದೆ. ಈಗಾಗಲೇ ಲೈವ್ ಆಗಿರುವ ಈ ಸೇಲ್ ಫೆಬ್ರವರಿ 12 ರ ವರೆಗೆ ನಡೆಯಲಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಒನ್ಪ್ಲಸ್, ಶವೋಮಿ, ರಿಯಲ್ ಮಿ, ಸ್ಯಾಮ್ಸಂಗ್ (Samsung) ಕಂಪನಿಯ ಫೋನುಗಳು ಮಾತ್ರವಲ್ಲದೆ ದುಬಾರಿ ಬೆಲೆಯ ಐಫೋನ್ಗಳನ್ನು ಕೂಡ ಕಡಿಮೆ ದರಕ್ಕೆ ಖರೀದಿಸಬಹುದು. ಹಾಗಾದರೆ ಫ್ಲಿಪ್ ಹಾರ್ಟ್ ಡೇಸ್ ಸೇಲ್ನಲ್ಲಿ ಡಿಸ್ಕೌಂಟ್ನಲ್ಲಿ ಸೇಲ್ ಆಗುತ್ತಿರುವ ಪ್ರಸಿದ್ಧ ಸ್ಮಾರ್ಟ್ಫೋನ್ಗಳು ಯಾವುವು ಎಂಬುದನ್ನು ನೋಡೋಣ.
ಆ್ಯಪಲ್ ಐಫೋನ್ 14: ಕಳೆದ ವರ್ಷ ಬಿಡುಗಡೆ ಆಗಿ ಭರ್ಜರಿ ಸೇಲ್ ಕಂಡ ಆ್ಯಪಲ್ ಕಂಪನಿಯ ಐಫೋನ್ 14 ಅನ್ನು ನೀವು ಕೇವಲ 66,999 ರೂ. ಗೆ ಖರೀದಿಸಬಹುದು. ಇದರ ಮೇಲೆ ಶೇ. 16 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಜೊತೆಗೆ 20,000 ರೂ. ವರೆಗಿನ ಎಕ್ಸ್ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ.
ಮೋಟೋರೊಲಾ G52: ಶೇ. 35 ರಷ್ಟು ರಿಯಾಯಿತಿ ಪಡೆದುಕೊಂಡಿರುವ ಮೋಟೋ G52 ಸ್ಮಾರ್ಟ್ಫೋನನ್ನು ನೀವು ಈಗ 12,999 ರೂ. ಗೆ ಖರೀದಿಸಬಹುದು. ಇದರಲ್ಲಿ 50 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ನೀಡಲಾಗಿದೆ.
WhatsApp: ವಾಟ್ಸ್ಆ್ಯಪ್ನ ಈ ಹೊಸ ಫೀಚರ್ಗಾಗಿ ಕಾದು ಕುಳಿತ ಬಳಕೆದಾರರು: ಬರುತ್ತಿದೆ ಬಹುಬೇಡಿಕೆಯ ಆಯ್ಕೆ
ಐಫೋನ್ 13: ಆ್ಯಪಲ್ ಕಂಪನಿಯ ಐಫೋನ್ 13 ಖರೀದಿಗೆ ಕೂಡ ಇದೇ ಉತ್ತಮ ಸಮಯ ಎನ್ನಬಹುದು. ಯಾಕೆಂದರೆ ಫ್ಲಿಪ್ ಹಾರ್ಟ್ ಡೇಸ್ ಸೇಲ್ನಲ್ಲಿ ಈ ಫೋನ್ ಮೇಲೆ ಶೇ. 11 ರಷ್ಟು ರಿಯಾಯಿತಿ ನೀಡಲಾಗಿದ್ದು 62,049 ರೂ. ಗೆ ಸೇಲ್ ಕಾಣುತ್ತಿದೆ. 23,000 ರೂ. ವರೆಗಿನ ಎಕ್ಸ್ಚೇಂಜ್ ಆಫರ್ ಕೂಡ ಇದೆ. ಇದರ ಜೊತೆಗೆ ಫ್ಲಿಪ್ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಡಿಸ್ಕೌಂಟ್ ಸಿಗುತ್ತದೆ. ಹೆಚ್ಡಿಎಫ್ಸಿ ಕಾರ್ಡ್ ದಾರರಿಗೆ 2000 ರೂ. ಗಳ ರಿಯಾಯಿತಿ ಇದೆ.
ರಿಯಲ್ ಮಿ GT ನಿಯೋ 3T: 34,999 ರೂ. ಮೂಲಬೆಲೆ ಹೊಂದಿರುವ ಈ ಸ್ಮಾರ್ಟ್ಫೋನ್ ಈಗ ಕೇವಲ 24,999 ರೂ. ಗೆ ಸೇಲ್ ಆಗುತ್ತಿದೆ. ರಿಯಲ್ ಮಿ GT ನಿಯೋ 3T ಫೋನ್ ಮೇಲೆ ಶೇ. 28 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರಲ್ಲಿ 64 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ನೀಡಲಾಗಿದೆ.
ಗ್ಯಾಲಕ್ಸಿ A23: ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ A23 ಸ್ಮಾರ್ಟ್ಫೋನನ್ನು ಈಗ 19,499 ರೂ. ಗೆ ಖರೀದಿಸಬಹುದು. ಇದು ಶೇ. 18 ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. 18.500 ರೂ. ವರೆಗಿನ ಎಕ್ಸ್ಚೇಂಜ್ ಆಫರ್ ಕೂಡ ನೀಡಲಾಗಿದೆ. ಈ ಫೋನ್ 50 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವ ರಿಯರ್ ಕ್ಯಾಮೆರಾ ಹೊಂದಿದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಅಳವಡಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ