ಫ್ಲಿಪ್‌ಕಾರ್ಟ್‌ನ ನವೀಕರಿಸಿದ ಸ್ಮಾರ್ಟ್‌ಫೋನ್ ಮಾರಾಟ ಪುನರಾರಂಭಗೊಂಡಿದೆ. ನವೀಕರಿಸಿದ ವರ್ಗದ ಅಡಿಯಲ್ಲಿ ಐಫೋನ್ ಮತ್ತು ಇತರ ಆಂಡ್ರೈಡ್ ಫೋನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.
Flipkartನಲ್ಲಿ iPhone 6, 6s, 6s Plus, iPhone SE, iPhone 7 ಮತ್ತು iPhone 8 ಅನ್ನು ಸಮಂಜಸವಾದ ಬೆಲೆಗೆ ಪಡೆಯಬಹುದು. Redmi, Motorola ಮತ್ತು Samsung ಸ್ಮಾರ್ಟ್‌ಫೋನ್‌ಗಳು ಕೂಡ ಲಭ್ಯವಿದೆ. Google Pixel 3a XL ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.
ನವೀಕರಿಸಿದ Google Pixel 3 XL ಅನ್ನು 64GB RAM ಜೊತೆಗೆ 13,999ರೂ.ಗೆ ಪಡೆಯಬಹುದು. Pixel 3 XL 6.3 ಇಂಚಿನ QHD+ ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ 12.2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಎರಡು 8ಮೆಗಾಪಿಕ್ಸೆಲ್ ಸೆಲ್ಫಿ ಲೆನ್ಸ್‌ಗಳನ್ನು ಹೊಂದಿದೆ. 3,430mAh ಬ್ಯಾಟರಿಯನ್ನು ಹೊಂದಿದೆ.
ನವೀಕರಿಸಿದ Apple iPhone 7 ಅನ್ನು ಬೆಲೆ 14,529 ರೂ. ಬೆಲೆಗೆ ಖರೀದಿಸಬಹುದಾಗಿದ್ದು, ಇದು ಐಫೋನ್ 8 ರಂತೆಯೇ ಅದೇ ಕ್ಯಾಮೆರಾಗಳು ಮತ್ತು ಪರದೆಯನ್ನು ಹೊಂದಿದೆ. ಇದು A10 ಫ್ಯೂಷನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
64GB ಆವೃತ್ತಿಯು ನವೀಕರಿಸಿದ ಚಿನ್ನದ ಬಣ್ಣದ ರೂಪಾಂತರದಲ್ಲಿ Apple iPhone 6s ಕೇವಲ 10,899 ರೂ.ಗಳಿಗೆ ಲಭ್ಯವಿದೆ. ಇದು 4.7ಇಂಚಿನ ರೆಟಿನಾ ಡಿಸ್ಪ್ಲೇ ಹೊಂದಿದ್ದು, 12MP ಮುಖ್ಯ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ A9 ಪ್ರೊಸೆಸರ್ ಹೊಂದಿದೆ.
16GB iPhone 6s ಬೆಲೆ 9,999 ರೂ. ಇದ್ದು, ಸಿಲ್ವರ್ ಮತ್ತು ಸ್ಪೇಸ್ ಗ್ರೇ ಬಣ್ಣಗಳು ಹಾಗೂ ಐಫೋನ್ 6ನ ನವೀಕರಿಸಿದ ಮಾದರಿಗಳೂ ಲಭ್ಯವಿದೆ.