ವಿಶ್ವದ ಅತಿದೊಡ್ಡ ವೆಬ್ಸೈಟ್ ಡೊಮೈನ್ ಹೋಸ್ಟ್ ಗೋ ಡ್ಯಾಡಿ (GoDaddy) ಹ್ಯಾಕ್ ಆಗಿದೆ ಎಂದು ವರದಿಯಾಗಿದೆ. ಇದರಿಂದ ಸುಮಾರು 12 ಲಕ್ಷ ವರ್ಡ್ಪ್ರಸ್ ಬಳಕೆದಾರರ ಡೇಟಾ ಅಪಾಯದಲ್ಲಿದೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಯುಎಸ್ ಸೆಕ್ಯೂರಿಟಿ ಮತ್ತು ಎಕ್ಸ್ಚೇಂಜ್ ಕಮಿಷನ್ ಕಂಡುಹಿಡಿದಿದ್ದು, ಅನುಮತಿಯಲ್ಲದೆ ಥರ್ಡ್ ಪಾರ್ಟಿಯೊಬ್ಬರು (Third Party) ಒಳ ಪ್ರವೇಶಿಸಿದ್ದಾರೆ ಎಂದು ಹೇಳಿದೆ. “ನಾವು ಕಾರ್ಯನಿರ್ವಹಿಸುವ ವರ್ಡ್ಪ್ರೆಸ್ ಹೋಸ್ಟಿಂಗ್ನಲ್ಲಿ ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಿದ್ದೇವೆ. ಮತ್ತು ತಕ್ಷಣವೇ ಐಟಿ ಫೊರೆನ್ಸಿಕ್ಸ್ ಸಂಸ್ಥೆಯ ಸಹಾಯದಿಂದ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಪಾಸ್ವರ್ಡ್ ಅನ್ನು ಹಾಕಿ ಪ್ರವೇಶವಿಲ್ಲದ ಥರ್ಡ್ ಪಾರ್ಟಿ ವ್ಯಕ್ತಿ ಸಿಸ್ಟಂ ಒಳಹೊಕ್ಕಿದ್ದಾರೆ” ಎಂದು ಹೇಳಿದೆ.
ಗೋ ಡ್ಯಾಡಿ ಇಂಟರ್ನೆಟ್ ಮೂಲಕ ಬ್ಯುಸಿನೆಸ್ ಆರಂಭಿಸಲು ವಿಶ್ವದ ಅತಿದೊಡ್ಡ ಇಂಟರ್ ನೆಟ್ ಡೊಮೈನ್ ಸೇವೆ ಆಗಿದೆ. ಗೋ ಡ್ಯಾಡಿ ಅಮೆರಿಕಾದ ಸಾರ್ವಜನಿಕವಾಗಿ ಮಾರಾಟವಾದ ಇಂಟರ್ನೆಟ್ ಡೊಮೇನ್ ರಿಜಿಸ್ಟ್ರಾರ್ ಮತ್ತು ವೆಬ್ ಹೋಸ್ಟಿಂಗ್ ಕಂಪನಿ. ಇದು 17 ದಶಲಕ್ಷ ಗ್ರಾಹಕರೊಂದಿಗೆ ವಿಶ್ವದ ಅತಿದೊಡ್ಡ ಡೊಮೇನ್ ಎನಿಸಿಕೊಂಡಿದೆ. ಆಡಳಿತದಲ್ಲಿ 71 ದಶಲಕ್ಷ ಡೊಮೇನ್ ಗಳನ್ನು ಹೊಂದಿದೆ. ಅಂತರ್ಜಾಲಕ್ಕೆ ವೆಬ್ಸೈಟ್ ಅನ್ನು ಪೋಸ್ಟ್ ಮಾಡಲು, ವೆಬ್ ಹೋಸ್ಟಿಂಗ್ ಸೇವೆಗೆ ಇದು ಸಹಕಾರಿ ಆಗಿದೆ.
ಗೋ ಡ್ಯಾಡಿ ಹೋಸ್ಟಿಂಗ್ ಸಂಸ್ಥೆಯ ಗ್ರಾಹಕ ವೆಬ್ ತಾಣಗಳು ಹಾಗೂ ಇಮೇಲ್ಗಳು ಡೌನ್ ಆಗಿವೆಯಂತೆ. ಗೋ ಡ್ಯಾಡಿ ಸೇವೆಯಲ್ಲಿ ವ್ಯತ್ಯಯವಾಗಲು ಅನಾಮಧೇಯ ಹ್ಯಾಕರ್ ಸಂಸ್ಥೆ ಕಾರಣ ಎಂದು ತಿಳಿದು ಬಂದಿದೆ. ಆದರೆ, ಎಷ್ಟು ವೆಬ್ ತಾಣಗಳು ಇದರಿಂದ ತೊಂದರೆ ಅನುಭವಿಸಿದೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. ಸೋಮವಾರ ಮಧ್ಯಾಹ್ನದಿಂದಲೇ ಆರಿಜೋನಾ ಮೂಲದ Scottsdale ಸ್ಥಗಿತಗೊಂಡಿದೆ.
“Anonymous Owner” ಎಂಬ ಏಕ ವ್ಯಕ್ತಿ ಕೃತ್ಯ ಇದಾಗಿದ್ದು, ಯಾವುದೇ ಸಂಘಟನೆ ಈ ಅತಿಕ್ರಮದ ಹಿಂದೆ ಇಲ್ಲ ಎಂದು ತಿಳಿದು ಬಂದಿದೆ. ನಿಮ್ಮ ವೆಬ್ ಸೈಟ್ ಗೋ ಡ್ಯಾಡಿ ಬಳಸಿ ಹೋಸ್ಟ್ ಮಾಡಿದ್ದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಸುಮಾರು 10.5 ಮಿಲಿಯನ್ ಗ್ರಾಹಕರನ್ನು ಗೋ ಡ್ಯಾಡಿ ಹೊಂದಿದೆ. Stop Online Piracy Act, or SOPA ಕಾಯಿದೆಗೆ ಗೋ ಡ್ಯಾಡಿ ಬೆಂಬಲ ನೀಡಿದ ಪರಿಣಾಮ ವೆಬ್ ಸೈಟ್ ಹ್ಯಾಕ್ ಆಗಿರಬಹುದು ಎಂದು ಶಂಕಿಸಲಾಗಿದೆ. ಸುಮಾರು 52 ಮಿಲಿಯನ್ ಡೊಮೈನ್ ಹೆಸರುಗಳು ಹಾಗೂ 5 ಮಿಲಿಯನ್ ವೆಬ್ ತಾಣಗಳನ್ನು ತನ್ನ ಸರ್ವರ್ ಗಳಲ್ಲಿ ಹೋಸ್ಟ್ ಮಾಡಿರುವ ದಾಖಲೆಯನ್ನು ಗೋ ಡ್ಯಾಡಿ ಹೊಂದಿದೆ. 2007 ಹಾಗೂ 2009 ರಲ್ಲಿ ಇದೇ ರೀತಿ ಗೋ ಡ್ಯಾಡಿ ತಾಣ ಹ್ಯಾಕ್ ಆಗಿತ್ತು.
(GoDaddy one of the largest domain registrars Hacked data of 12 lakh WordPress users are at risk)
Published On - 11:51 am, Tue, 23 November 21