WhatsApp: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಬಹುನಿರೀಕ್ಷೆಯ ಫೀಚರ್: ಹೊಸ ಅಪ್ಡೇಟ್​ನಲ್ಲಿದೆ ಬೊಂಬಾಟ್ ಆಯ್ಕೆ

WhatsApp New Update: ವಾಟ್ಸ್​ಆ್ಯಪ್​ ಈಗ “ನನ್ನ ಸಂಪರ್ಕಗಳನ್ನು ಹೊರತುಪಡಿಸಿ" (My Contacts Except) ಎಂಬ ಆಯ್ಕೆಯನ್ನು ತಂದಿದೆ. ಈ ಆಯ್ಕೆಯೊಂದಿಗೆ ಬಳಕೆದಾರರು ತಮ್ಮ ಮಾಹಿತಿಗಳನ್ನು ಅಪ್ಲಿಕೇಶನ್‌ನಲ್ಲಿ ಯಾರು ನೋಡಬಹುದು ಎಂಬುದನ್ನು ವೈಯಕ್ತಿಕ ನೆಲೆಯಲ್ಲಿ ನಿಯಂತ್ರಿಸಬಹುದು.

WhatsApp: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಬಹುನಿರೀಕ್ಷೆಯ ಫೀಚರ್: ಹೊಸ ಅಪ್ಡೇಟ್​ನಲ್ಲಿದೆ ಬೊಂಬಾಟ್ ಆಯ್ಕೆ
WhatsApp Update
Follow us
TV9 Web
| Updated By: Vinay Bhat

Updated on: Nov 22, 2021 | 2:15 PM

ಫೇಸ್​ಬುಕ್ ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಈಗೀಗ ಬಳಕೆದಾರರಿಗೆ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ಮುಖ್ಯವಾಗಿ ಪ್ರೈವಸಿಗೆ ಸಂಬಂಧ ಪಟ್ಟಂತೆ ಉಪಯುಕ್ತ ಫೀಚರ್​ಗಳನ್ನು ನೀಡುತ್ತಿರುವ ವಾಟ್ಸ್​ಆ್ಯಪ್​ ಈಗ “ನನ್ನ ಸಂಪರ್ಕಗಳನ್ನು ಹೊರತುಪಡಿಸಿ” (My Contacts Except) ಎಂಬ ಆಯ್ಕೆಯನ್ನು ತಂದಿದೆ. ಈ ಆಯ್ಕೆಯೊಂದಿಗೆ ಬಳಕೆದಾರರು ತಮ್ಮ ಮಾಹಿತಿಗಳನ್ನು ಅಪ್ಲಿಕೇಶನ್‌ನಲ್ಲಿ ಯಾರು ನೋಡಬಹುದು ಎಂಬುದನ್ನು ವೈಯಕ್ತಿಕ ನೆಲೆಯಲ್ಲಿ ನಿಯಂತ್ರಿಸಬಹುದು. ಅಂದರೆ, ಈ ವೈಶಿಷ್ಟ್ಯವು ಪ್ರೊಫೈಲ್ ಚಿತ್ರಗಳು, ಕೊನೆಯದಾಗಿ ನೋಡಿದ ಮತ್ತು ಸ್ಟೇಟಸ್ ಎಲ್ಲವನ್ನು (profile pictures, last seen, and status) ನೀವು ಬಯಸದ ಸಂಪರ್ಕಗಳು ನೋಡದಂತೆ ಆಯ್ಕೆ ಮಾಡಬಹುದು. ವಾಟ್ಸ್​ಆ್ಯಪ್​​ ಬೀಟಾ ಈಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಪಡೆದಿದೆ. ವರದಿಯ ಪ್ರಕಾರ ಈಗಾಗಲೇ ಈ ಆಯ್ಕೆ ವಾಟ್ಸ್​ಆ್ಯಪ್​ ವೆಬ್ ಬಳಕೆದಾರರಿಗೆ ಲಭ್ಯವಾಗುತ್ತಿದೆಯಂತೆ.

ಇದರಲ್ಲಿರುವ ಲಾಸ್ಟ್ ಸೀನ್ ಫೀಚರ್ ಪ್ರತಿಯೊಬ್ಬ ಬಳಕೆದಾರರು ಯಾವಾಗ ಕೊನೆಯದಾಗಿ ವಾಟ್ಸ್​ಆ್ಯಪ್ ತೆರೆದು ನೋಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಇದರಲ್ಲಿ Everyone, My Contacts ಮತ್ತು Nobody ಎಂಬ ಆಯ್ಕೆಗಳೂ ಕೂಡ ಇದೆ. ಸದ್ಯ ಇದಕ್ಕೆ ಈಗ ಮತ್ತೊಂದು ಹೊಸ ಫೀಚರ್ ಸೇರ್ಪಡೆಯಾಗಿದೆ. ಅಂದರೆ ನಿರ್ದಿಷ್ಟ ಸಂಪರ್ಕ ಸಂಖ್ಯೆಗೆ ಲಾಸ್ಟ್‌ ಸೀನ್ ಕಾಣದಂತೆ ಮಾಡುವ ಆಯ್ಕೆ. ವಾಟ್ಸ್‌ಆ್ಯಪ್ ಬಳಕೆದಾರರು ತಮ್ಮ ಲಾಸ್ಟ್ ಸೀನ್ ಅನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ತೋರಿಸದೇ ಇರುವಂತಹ ಆಯ್ಕೆ ಇದಾಗಿದೆ. ಇದರಿಂದಾಗಿ ಬಳಕೆದಾರರು ಬಯಸಿದ ವ್ಯಕ್ತಿಗಳಿಗೆ ಮಾತ್ರವೇ ಲಾಸ್ಟ್ ಸೀನ್ ಕಾಣಿಸಲಿದೆ.

ಇನ್ನು ಧ್ವನಿ ರೆಕಾರ್ಡಿಂಗ್‌ಗಳನ್ನು ಪೂರ್ವವೀಕ್ಷಿಸಿ ಮತ್ತು ವಿರಾಮಗೊಳಿಸಿ ಎಂಬ ಆಯ್ಕೆಯ ಬಗ್ಗೆ ಇದ್ದ ಊಹಾಪೊಹಗಳು ಕೊನೆಗೊಂಡಿವೆ. ಬಳಕೆದಾರರು ರೆಕಾರ್ಡ್ ಮಾಡುತ್ತಿರುವ ಧ್ವನಿ ಸಂದೇಶವನ್ನು ವಿರಾಮಗೊಳಿಸಲು ಮತ್ತು ಪುನರಾರಂಭಿಸಲು ಹೊಸ ವೈಶಿಷ್ಟ್ಯವು ಅನುಮತಿಸುತ್ತದೆ. ನೀವು ಒಂದೇ ಬಾರಿಗೆ ಸಂದೇಶವನ್ನು ರೆಕಾರ್ಡ್ ಮಾಡಲು ಸಾಧ್ಯವಾಗದಿದ್ದಾಗ ಈ ವೈಶಿಷ್ಟ್ಯವು ಸಹಾಯಕವಾಗಿರುತ್ತದೆ. ಬಳಕೆದಾರರು ರೆಕಾರ್ಡಿಂಗ್ ಪ್ರಾರಂಭಿಸಿದಾಗ, ಅವರು ಆನ್ ಮಾಡಿದ ನಂತರ, ಅದು ಧ್ವನಿ ಸಂದೇಶವನ್ನು ಸೇರಿಸಲು ಪುನರಾರಂಭದ ಬಟನ್ ಅನ್ನು ತೋರಿಸುತ್ತದೆ. ನೀವು ಸಂದೇಶವನ್ನು ಸೇರಿಸಲು ಬಯಸಿದರೆ, ನೀವು ರೆಸ್ಯೂಮ್ ಬಟನ್ ಅನ್ನು ಕ್ಲಿಕ್ ಮಾಡಬಹುದು ಅಥವಾ ನೀವು ಸಂದೇಶವನ್ನು ಕಳುಹಿಸಬಹುದಾಗಿದೆ

ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್​ ತನ್ನ ವೆಬ್ ಬಳಕೆದಾರರಿಗಾಗಿ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು ಹೊರತಂದಿತ್ತು.ಈ ಮೂಲಕ ವಾಟ್ಸ್​ಆ್ಯಪ್ ವೆಬ್​ಗಾಗಿ ನೀವು ಸ್ಮಾರ್ಟ್​ಫೋನ್​ ಅನ್ನು ಆನ್​ಲೈನ್​ನಲ್ಲಿ  ಇರಿಸುವ ಅಗತ್ಯವಿಲ್ಲ. ಈ ಹಿಂದೆ ವಾಟ್ಸ್​ಆ್ಯಪ್ ವೆಬ್ ಬಳಸಬೇಕಾದರೆ ಪ್ರತಿ ಬಾರಿ ನಿಮ್ಮ ಫೋನ್‌ನೊಂದಿಗೆ ಲಾಗಿನ್ ಮಾಡಬೇಕಾಗಿತ್ತು. ಬೀಟಾ ಪ್ರೋಗ್ರಾಂನಿಂದ ಹೊರಬರುವ ಮಲ್ಟಿ-ಡಿವೈಸ್ ವೈಶಿಷ್ಟ್ಯದಿಂದ ಸ್ಮಾರ್ಟ್​ಫೋನ್ ಸಹಾಯವಿಲ್ಲದೆ ಲಾಗಿನ್​ ಆಗಬಹುದಾಗಿದೆ.

Motorola G200: ವಿದೇಶದಲ್ಲಿ ಮೋಟೋ G ಸಿರೀಸ್ ಭರ್ಜರಿ ಸೇಲ್: ಕೆಲವೇ ದಿನಗಳಲ್ಲಿ ಭಾರತಕ್ಕೂ ಲಗ್ಗೆ

(Facebook-owned platform WhatsApp released a feature called My Contacts Except)

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ