AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GoDaddy: ವಿಶ್ವದ ಅತಿದೊಡ್ಡ ವೆಬ್​ಸೈಟ್​ ಡೊಮೈನ್ ಹೋಸ್ಟ್​ ಗೋ ಡ್ಯಾಡಿ ಹ್ಯಾಕ್: ಅಪಾಯದಲ್ಲಿ 12 ಲಕ್ಷ ಬಳಕೆದಾರರ ಡೇಟಾ

GoDaddy hacked: ಯುಎಸ್ ಸೆಕ್ಯೂರಿಟಿ ಮತ್ತು ಎಕ್ಸ್​ಚೇಂಜ್ ಕಮಿಷನ್ ಶ್ವದ ಅತಿದೊಡ್ಡ ವೆಬ್​ಸೈಟ್​ ಡೊಮೈನ್ ಹೋಸ್ಟ್​ ಗೋ ಡ್ಯಾಡಿ (GoDaddy) ಹ್ಯಾಕ್ ಆಗಿದೆ ಎಂಬ ವಿಚಾರವನ್ನು ಕಂಡುಹಿಡಿದಿದೆ.

GoDaddy: ವಿಶ್ವದ ಅತಿದೊಡ್ಡ ವೆಬ್​ಸೈಟ್​ ಡೊಮೈನ್ ಹೋಸ್ಟ್​ ಗೋ ಡ್ಯಾಡಿ ಹ್ಯಾಕ್: ಅಪಾಯದಲ್ಲಿ 12 ಲಕ್ಷ ಬಳಕೆದಾರರ ಡೇಟಾ
godaddy hacked
TV9 Web
| Updated By: Vinay Bhat|

Updated on:Nov 23, 2021 | 12:01 PM

Share

ವಿಶ್ವದ ಅತಿದೊಡ್ಡ ವೆಬ್​ಸೈಟ್​ ಡೊಮೈನ್ ಹೋಸ್ಟ್​ ಗೋ ಡ್ಯಾಡಿ (GoDaddy) ಹ್ಯಾಕ್ ಆಗಿದೆ ಎಂದು ವರದಿಯಾಗಿದೆ. ಇದರಿಂದ ಸುಮಾರು 12 ಲಕ್ಷ ವರ್ಡ್​​ಪ್ರಸ್ ಬಳಕೆದಾರರ ಡೇಟಾ ಅಪಾಯದಲ್ಲಿದೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಯುಎಸ್ ಸೆಕ್ಯೂರಿಟಿ ಮತ್ತು ಎಕ್ಸ್​ಚೇಂಜ್ ಕಮಿಷನ್ ಕಂಡುಹಿಡಿದಿದ್ದು, ಅನುಮತಿಯಲ್ಲದೆ ಥರ್ಡ್​ ಪಾರ್ಟಿಯೊಬ್ಬರು (Third Party) ಒಳ ಪ್ರವೇಶಿಸಿದ್ದಾರೆ ಎಂದು ಹೇಳಿದೆ. “ನಾವು ಕಾರ್ಯನಿರ್ವಹಿಸುವ ವರ್ಡ್​ಪ್ರೆಸ್ ಹೋಸ್ಟಿಂಗ್​ನಲ್ಲಿ ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಿದ್ದೇವೆ. ಮತ್ತು ತಕ್ಷಣವೇ ಐಟಿ ಫೊರೆನ್ಸಿಕ್ಸ್ ಸಂಸ್ಥೆಯ ಸಹಾಯದಿಂದ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಪಾಸ್ವರ್ಡ್ ಅನ್ನು ಹಾಕಿ ಪ್ರವೇಶವಿಲ್ಲದ ಥರ್ಡ್​ ಪಾರ್ಟಿ ವ್ಯಕ್ತಿ ಸಿಸ್ಟಂ ಒಳಹೊಕ್ಕಿದ್ದಾರೆ” ಎಂದು ಹೇಳಿದೆ.

ಗೋ ಡ್ಯಾಡಿ ಇಂಟರ್ನೆಟ್ ಮೂಲಕ ಬ್ಯುಸಿನೆಸ್ ಆರಂಭಿಸಲು ವಿಶ್ವದ ಅತಿದೊಡ್ಡ ಇಂಟರ್ ನೆಟ್ ಡೊಮೈನ್ ಸೇವೆ ಆಗಿದೆ. ಗೋ ಡ್ಯಾಡಿ ಅಮೆರಿಕಾದ ಸಾರ್ವಜನಿಕವಾಗಿ ಮಾರಾಟವಾದ ಇಂಟರ್ನೆಟ್ ಡೊಮೇನ್ ರಿಜಿಸ್ಟ್ರಾರ್ ಮತ್ತು ವೆಬ್ ಹೋಸ್ಟಿಂಗ್ ಕಂಪನಿ. ಇದು 17 ದಶಲಕ್ಷ ಗ್ರಾಹಕರೊಂದಿಗೆ ವಿಶ್ವದ ಅತಿದೊಡ್ಡ ಡೊಮೇನ್ ಎನಿಸಿಕೊಂಡಿದೆ. ಆಡಳಿತದಲ್ಲಿ 71 ದಶಲಕ್ಷ ಡೊಮೇನ್ ಗಳನ್ನು ಹೊಂದಿದೆ. ಅಂತರ್ಜಾಲಕ್ಕೆ ವೆಬ್​ಸೈಟ್ ಅನ್ನು ಪೋಸ್ಟ್ ಮಾಡಲು, ವೆಬ್ ಹೋಸ್ಟಿಂಗ್ ಸೇವೆಗೆ ಇದು ಸಹಕಾರಿ ಆಗಿದೆ.

ಗೋ ಡ್ಯಾಡಿ ಹೋಸ್ಟಿಂಗ್ ಸಂಸ್ಥೆಯ ಗ್ರಾಹಕ ವೆಬ್ ತಾಣಗಳು ಹಾಗೂ ಇಮೇಲ್​ಗಳು ಡೌನ್ ಆಗಿವೆಯಂತೆ. ಗೋ ಡ್ಯಾಡಿ ಸೇವೆಯಲ್ಲಿ ವ್ಯತ್ಯಯವಾಗಲು ಅನಾಮಧೇಯ ಹ್ಯಾಕರ್ ಸಂಸ್ಥೆ ಕಾರಣ ಎಂದು ತಿಳಿದು ಬಂದಿದೆ. ಆದರೆ, ಎಷ್ಟು ವೆಬ್ ತಾಣಗಳು ಇದರಿಂದ ತೊಂದರೆ ಅನುಭವಿಸಿದೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. ಸೋಮವಾರ ಮಧ್ಯಾಹ್ನದಿಂದಲೇ ಆರಿಜೋನಾ ಮೂಲದ Scottsdale ಸ್ಥಗಿತಗೊಂಡಿದೆ.

“Anonymous Owner” ಎಂಬ ಏಕ ವ್ಯಕ್ತಿ ಕೃತ್ಯ ಇದಾಗಿದ್ದು, ಯಾವುದೇ ಸಂಘಟನೆ ಈ ಅತಿಕ್ರಮದ ಹಿಂದೆ ಇಲ್ಲ ಎಂದು ತಿಳಿದು ಬಂದಿದೆ. ನಿಮ್ಮ ವೆಬ್ ಸೈಟ್ ಗೋ ಡ್ಯಾಡಿ ಬಳಸಿ ಹೋಸ್ಟ್ ಮಾಡಿದ್ದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಸುಮಾರು 10.5 ಮಿಲಿಯನ್ ಗ್ರಾಹಕರನ್ನು ಗೋ ಡ್ಯಾಡಿ ಹೊಂದಿದೆ. Stop Online Piracy Act, or SOPA ಕಾಯಿದೆಗೆ ಗೋ ಡ್ಯಾಡಿ ಬೆಂಬಲ ನೀಡಿದ ಪರಿಣಾಮ ವೆಬ್ ಸೈಟ್ ಹ್ಯಾಕ್ ಆಗಿರಬಹುದು ಎಂದು ಶಂಕಿಸಲಾಗಿದೆ. ಸುಮಾರು 52 ಮಿಲಿಯನ್ ಡೊಮೈನ್ ಹೆಸರುಗಳು ಹಾಗೂ 5 ಮಿಲಿಯನ್ ವೆಬ್ ತಾಣಗಳನ್ನು ತನ್ನ ಸರ್ವರ್ ಗಳಲ್ಲಿ ಹೋಸ್ಟ್ ಮಾಡಿರುವ ದಾಖಲೆಯನ್ನು ಗೋ ಡ್ಯಾಡಿ ಹೊಂದಿದೆ. 2007 ಹಾಗೂ 2009 ರಲ್ಲಿ ಇದೇ ರೀತಿ ಗೋ ಡ್ಯಾಡಿ ತಾಣ ಹ್ಯಾಕ್ ಆಗಿತ್ತು.

(GoDaddy one of the largest domain registrars Hacked data of 12 lakh WordPress users are at risk)

Published On - 11:51 am, Tue, 23 November 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!