Google Chrome Logo: ಬರೋಬ್ಬರಿ 8 ವರ್ಷಗಳ ಬಳಿಕ ಲೋಗೋ ಬದಲಿಸುತ್ತಿರುವ ಗೂಗಲ್ ಕ್ರೋಮ್: ಹೊಸ ಲೋಗೋ ಹೇಗಿದೆ ನೋಡಿ

| Updated By: Vinay Bhat

Updated on: Feb 07, 2022 | 1:34 PM

ಹೊಸ ಲೋಗೋದಲ್ಲಿನ ಬದಲಾವಣೆಗಳು ಸಾಕಷ್ಟು ಸೂಕ್ಷ್ಮವಾಗಿದ್ದರೂ ಕ್ರೋಮ್ 2014ರ ನಂತರ ಮೊದಲ ಬಾರಿಗೆ ತನ್ನ ಲೋಗೋವನ್ನು ಬದಲಾಯಿಸುತ್ತಿದೆ. ಗೂಗಲ್‌ ಕ್ರೋಮ್‌ನ 100ನೇ ಆವೃತ್ತಿಯ ಅಪ್‌ಡೇಟ್‌ ಶೀಘ್ರವೇ ಬಿಡುಗಡೆ ಆಗಲಿದೆ.

Google Chrome Logo: ಬರೋಬ್ಬರಿ 8 ವರ್ಷಗಳ ಬಳಿಕ ಲೋಗೋ ಬದಲಿಸುತ್ತಿರುವ ಗೂಗಲ್ ಕ್ರೋಮ್: ಹೊಸ ಲೋಗೋ ಹೇಗಿದೆ ನೋಡಿ
google chrome new logo
Follow us on

ವಿಶ್ವದ ಪ್ರಮುಖ ಇಂಟರ್ನೆಟ್ ಬ್ರೌಸರ್ (Internet Browser) ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಗೂಗಲ್ ಕ್ರೋಮ್ (Google Chrome) ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ತಮ್ಮ ಲೋಗೋವನ್ನು ಬದಲಾಯಿಸುತ್ತಿದೆ. ಹೊಸ ಲೋಗೋದಲ್ಲಿನ ಬದಲಾವಣೆಗಳು ಸಾಕಷ್ಟು ಸೂಕ್ಷ್ಮವಾಗಿದ್ದರೂ ಕ್ರೋಮ್ 2014ರ ನಂತರ ಮೊದಲ ಬಾರಿಗೆ ತನ್ನ ಲೋಗೋವನ್ನು ಬದಲಾಯಿಸುತ್ತಿದೆ. ಗೂಗಲ್‌ ಕ್ರೋಮ್‌ನ 100ನೇ ಆವೃತ್ತಿಯ ಅಪ್‌ಡೇಟ್‌ ಶೀಘ್ರವೇ ಬಿಡುಗಡೆ ಆಗಲಿದ್ದು, ಅದನ್ನು ಡೌನ್‌ಲೋಡ್‌ ಮಾಡಿ ಬಳಸಿದವರ ಕಂಪ್ಯೂಟರ್‌ಗಳಲ್ಲಿ ಹೊಸ ಲೋಗೋ ಗೋಚರಿಸಲಿದೆ. ಬ್ರೌಸರ್‌ನ ವಿನ್ಯಾಸಕಾರ ಎಲ್ವಿನ್‌ ಹೂ ಅವರು ತಮ್ಮ ಟ್ವಿಟರ್‌ (Twitter) ಖಾತೆಯಲ್ಲಿ ಹೊಸ ಲೋಗೋ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಎಲ್ವಿನ್​ ಅವರು, ಹಸಿರು ಮತ್ತು ಕೆಂಪು ಬಣ್ಣಗಳನ್ನು ಅಕ್ಕಪಕ್ಕದಲ್ಲಿ ಹಾಕುವುದು ವಿಚಿತ್ರವಾದ ಭಾವನೆಯನ್ನು ನೀಡುತ್ತದೆ ಎಂದು ಅವರು ತಮ್ಮ ಟ್ವಿಟರ್​ನಲ್ಲಿ ಉಲ್ಲೇಖಿಸಿದ್ದಾರೆ.

2008ರಲ್ಲಿ ಬಿಡುಗಡೆಯಾದಾಗ ಕ್ರೋಮ್‌ಗೆ 3ಡಿ ವಿನ್ಯಾಸ ಮಾದರಿಯ ಕೆಂಪು, ಹಳದಿ ಮತ್ತು ತಿಳಿಯಾದ ಹಸಿರು ಬಣ್ಣದ ಉಂಡೆಯಂತಹ ಆಕೃತಿ ಜತೆಗೆ ಮಧ್ಯಭಾಗದಲ್ಲಿ ಆಕಾಶ ನೀಲಿ ಬಣ್ಣದ ಸಣ್ಣ ಗಾತ್ರದ ದುಂಡಾಕಾರವನ್ನು ಲೋಗೋ’ದಲ್ಲಿ ನೀಡಲಾಗಿತ್ತು. 2011ರಲ್ಲಿ ಈ ಲೋಗೋ ಸುಧಾರಣೆಗೊಂಡು 2ಡಿ ವಿನ್ಯಾಸಕ್ಕೆ ತಿರುಗಿತು. ಆ ವೇಳೆ ಮಧ್ಯದಲ್ಲಿ ನೀಲಿ ಬಣ್ಣದ ದುಂಡಾಕಾರದ ಸುತ್ತಲೂ ತೆಳ್ಳನೆಯ ಬಿಳಿ ಗೆರೆಯನ್ನು ಎಳೆಯಲಾಗಿತ್ತು. ಇದನ್ನು 2014ರವರೆಗೆ ಮುಂದುವರಿಸಿದ ಗೂಗಲ್‌ ಕಂಪನಿಯು, ಬಳಿಕ ಪರಿಷ್ಕೃತಗೊಳಿಸಿ ಕೆಂಪು, ಹಳದಿ ಮತ್ತು ತಿಳಿಹಸಿರನ್ನು ಮತ್ತಷ್ಟು ಗಾಢವಾಗಿಸಿತು. ಮಧ್ಯದಲ್ಲಿನ ಬಿಳಿಯಾದ ಔಟ್‌ಲೈನ್‌ ದಪ್ಪಗಾಗಿಸಿತು. ಸದ್ಯ, ಅದೇ ಔಟ್‌ಲೈನ್‌ ಇನ್ನೂ ದಪ್ಪಗಾಗಿದೆ. ಮಧ್ಯಭಾಗದಲ್ಲಿ ನೀಲಿ, ಅದರ ಸುತ್ತಲೂ ವಿನ್ಯಾಸಗೊಂಡಿರುವ ಕೆಂಪು, ಹಳದಿ ಮತ್ತು ಹಸಿರು ಮತ್ತಷ್ಟು ಗಾಢ ಬಣ್ಣಕ್ಕೆ ತಿರುಗಿವೆ.

ಮೇನ್‌ ಕ್ರೋಮ್ ಲೋಗೋ ಎಲ್ಲಾ ಸಿಸ್ಟಂಗಳಲ್ಲಿಯೂ ಒಂದೇ ರೀತಿ ಕಾಣಿಸುವುದಿಲ್ಲ. ChromeOS ನಲ್ಲಿ, ಇತರ ಸಿಸ್ಟಂ ಐಕಾನ್‌ಗಳಿಗೆ ಪೂರಕವಾಗಿ ಲೋಗೋ ಹೆಚ್ಚು ವರ್ಣರಂಜಿತವಾಗಿ ಕಾಣುತ್ತದೆ. ಆದರೆ MacOS ನಲ್ಲಿ, ಲೋಗೋ ಸಣ್ಣ ನೆರಳನ್ನು ಹೊಂದಿರುತ್ತದೆ, ಅದು ಲೋಗೊದಿಂದ ಹೊರಬಂದಂತೆ  (popping out) ಗೋಚರಿಸುತ್ತದೆ. , Windows 10 ಮತ್ತು 11 ಆವೃತ್ತಿಯು ಹೆಚ್ಚು ಡ್ರಾಮೆಟಿಕ್ ಗ್ರೇಡಿಯಂಟನ್ನು ಹೊಂದಿದ್ದು ಅದು ಇತರ ವಿಂಡೋಸ್ ಐಕಾನ್‌ಗಳ ಶೈಲಿಯೊಂದಿಗೆ ಹೊಂದಿಕೊಳ್ಳುತ್ತದೆ.

 

ಗೂಗಲ್ ಅಭಿವೃದ್ಧಿಪಡಿಸಿದ ವೆಬ್ ಬ್ರೌಸರ್ ಗೂಗಲ್ ಕ್ರೋಮ್ ಹೆಚ್ಚಾಗಿ ವೆಬ್‌ಕಿಟ್‌ ಲೇಔಟ್ ಎಂಜಿನ್ ಹಾಗೂ ಅಪ್ಲಿಕೇಷನ್ ಫ್ರೇಮ್‌ವರ್ಕ್‌ ಅನ್ನು ಬಳಸುತ್ತದೆ. ಇದು ಮೊದಲ ಬಾರಿಗೆ ಮೈಕ್ರೋಸಾಫ್ಟ್ ವಿಂಡೋಸ್‌ನ ಬೀಟಾ ಆವೃತ್ತಿಯ ರೂಪದಲ್ಲಿ 2008 ಸೆಪ್ಟೆಂಬರ್ 2ರಂದು ಬಿಡುಗಡೆಯಾಯಿತಾದರೂ, ಸಾರ್ವಜನಿಕರ ಬಳಕೆಗೆ ಲಭ್ಯವಾಗಿದ್ದು ಮಾತ್ರ 2008 ಡಿಸೆಂಬರ್ 11ರಂದು. ಕ್ರೋಮ್ ಎಂಬ ಹೆಸರನ್ನು ವೆಬ್ ಬ್ರೌಸರ್‌ನ ಗ್ರಾಫಿಕಲ್ ಬಳಕೆದಾರ ಅಂತರಸಂಪರ್ಕ ಫ್ರೇಮ್, ಅಥವಾ ಕ್ರೋಮ್​​ನಿಂದ ಪಡೆದುಕೊಳ್ಳಲಾಯಿತು.

ಇನ್ನು ಗೂಗಲ್‌ ಕ್ರೋಮ್‌ ಸರ್ಚ್‌ ಬ್ರೌಸಿಂಗ್‌ನಲ್ಲಿ ಹೆಚ್ಚು ಪ್ರೈವೆಸಿ ಸೆಟ್‌ ಮಾಡುವುದಕ್ಕಾಗಿ ಹೊಸ ಎಪಿಐ ಅನ್ನು ಪರೀಕ್ಷಿಸುತ್ತಿದೆ. ಈ ಹೊಸ ವಿಧಾನ ಪಬ್ಲಿಷರ್ಸ್‌, ಕ್ರಿಯೆಟರ್ಸ್‌ ಮತ್ತು ಇತರ ಡೆವಲಪರ್‌ಗಳಿಗೆ ಜಾಹೀರಾತು ವ್ಯವಹಾರದ ಮೇಲೆ ಋಣಾತ್ಮಕ ಪರಿಣಾಮ ಬೀರದಂತೆ ಸಹಾಯ ಮಾಡಲಿದೆ. ನೀವು ಸರ್ಚ್‌ ಮಾಡುವ ವಿಚಾರದ ಆಧಾರದ ಮೇಲೆ ಬರುವ ಜಾಹಿರಾತುಗಳು ಋಣಾತ್ಮಕ ಪರಿಣಾಂ ಬೀರದಂತೆ ಉತ್ತಮ ಜಾಹಿರಾತು ನೀಡಲಿದೆ.

iPhone 13 Pro Max: ಆರ್ಡರ್ ಮಾಡಿದ್ದು ಆ್ಯಪಲ್‌ ಐಫೋನ್: ಆದರೆ ಡೆಲಿವರಿ ಆಗಿದ್ದು ಏನು ಗೊತ್ತೇ, ಶಾಕ್ ಆದ ಮಹಿಳೆ!