iPhone 13 Pro Max: ಆರ್ಡರ್ ಮಾಡಿದ್ದು ಆ್ಯಪಲ್ ಐಫೋನ್: ಆದರೆ ಡೆಲಿವರಿ ಆಗಿದ್ದು ಏನು ಗೊತ್ತೇ, ಶಾಕ್ ಆದ ಮಹಿಳೆ!
ಲಂಡನ್ನ ಮಹಿಳೆಯೊಬ್ಬರು ಆ್ಯಪಲ್ ಐಫೊನ್ 13 ಪ್ರೊ ಮ್ಯಾಕ್ಸ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ. ಆದರೆ, ಅವರಿಗೆ ಬಂದಿದ್ದು ಮಾತ್ರ ಸೋಪ್ ಬಾಟಲಿ. ಇದನ್ನು ಕಂಡು ಆ ಮಹಿಳೆ ಶಾಕ್ಗೆ ಒಳಗಾಗಿದ್ದಾರೆ.
ಇದು ಆನ್‍ಲೈನ್ ಶಾಪಿಂಗ್‍ನ (Online Shopping) ಮತ್ತೊಂದು ಅವಾಂತರ. ಈಗ ಆಫ್‌ಲೈನ್‌ಗಿಂತ ಆಲ್‌ಲೈನ್ ನೆಚ್ಚಿಕೊಂಡವರೇ ಅಧಿಕ. ಯಾಕೆಂದರೆ ಬಹಳ ಸುಲಭ. ಕುಳಿತಲ್ಲೇ ಎಲ್ಲ ಕೆಲಸ ಆಗುತ್ತದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಸ್ಮಾರ್ಟ್ಫೋನ್ಗೆ (Smartphone) ಬದಲಾಗಿ ಕಲ್ಲು, ಇಟ್ಟಿಗೆ ಹಾಗೂ ಬದಲಿ ವಸ್ತುಗಳು ಬಂದಿರುವ ನಿದರ್ಶನಗಳು ಸಾಕಷ್ಟಿವೆ. ಗ್ರಾಹಕರು ಆರ್ಡರ್ ಮಾಡುವುದೇ ಒಂದಾದರೆ, ಅವರಿಗೆ ಬರೋದು ಇನ್ನೊಂದು. ಆದರೂ ಕೂಡ ಆನ್‌ಲೈನ್ ಶಾಪಿಂಗ್ ಮಾಡುವುದು ಕಡಿಮೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ವಂಚಕರು ನೇರವಾಗಿ ಮೋಸಮಾಡುವುದನ್ನು ಕಡಿಮೆ ಮಾಡಿ ಆನ್ಲೈನ್ ಮೂಲಕ ವಂಚಿಸಲು (Online Fraud) ಶುರುಮಾಡಿದ್ದಾರೆ. ಎಲ್ಲೋ ಕೂತು, ಕೇವಲ ಆನ್ಲೈನ್ ಮೂಲಕವೇ ಲಕ್ಷ ಲಕ್ಷ ಹಣ ಎಗರಿಸುತ್ತಿದ್ದಾರೆ. ದಿನಬೆಳಗಾದರೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ವಂಚನೆ ಪ್ರಕರಣಗಳು ಚಿತ್ರ, ವಿಚಿತ್ರ ರೀತಿಯಲ್ಲಿ ಮೋಸ ಮಾಡುವ ಸುದ್ದಿ ಕೇಳುತ್ತಲೇ ಇರುತ್ತೇವೆ. ಈಗ ಅದೇರೀತಿಯ ಪ್ರಕರಣವೊಂದು ನಡೆದಿದೆ.
ಮಹಿಳೆಯೊಬ್ಬರು ಆ್ಯಪಲ್ ಐಫೊನ್ 13 ಪ್ರೊ ಮ್ಯಾಕ್ಸ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ. ಆದರೆ, ಅವರಿಗೆ ಬಂದಿದ್ದು ಮಾತ್ರ ಸೋಪ್ ಬಾಟಲಿ. ಇದನ್ನು ಕಂಡು ಆ ಮಹಿಳೆ ಶಾಕ್ಗೆ ಒಳಗಾಗಿದ್ದಾರೆ. ಹೌದು, ದಿ ಸನ್ ಮಾಡಿರುವ ವರದಿ ಪ್ರಕಾರ, ಬ್ರಿಟನ್ ಮೂಲದ ಖೌಲಾ ಲಫೈಲಿ ಎಂಬ 32 ವರ್ಷದ ಮಹಿಳೆ ಜನವರಿ 24 ರಂದು ತನ್ನ ಉತ್ತರ ಲಂಡನ್ ಮನೆಯಲ್ಲಿ ಸ್ಕೈ ಮೊಬೈಲ್‌ನಿಂದ 1,500 ಡಾಲರ್ ನೀಡಿ ಐಫೋನ್ 13 ಪ್ರೊ ಮ್ಯಾಕ್ಸ್ ಆರ್ಡರ್ ಮಾಡಿದ್ದರು. ಇದಕ್ಕಾಗಿ ಅವರು £ 150 ಮುಂಗಡವಾಗಿ ಪಾವತಿಸಿದರು ಮತ್ತು 36 ತಿಂಗಳ ಒಪ್ಪಂದಕ್ಕೆ ಸಹಿ ಹಾಕಿದರು. ಡೆಲಿವರಿ ದಿನದಂದು ಆರ್ಡರ್ ಕೈ ಸೇರಬೇಕಿತ್ತು. ಆದರೆ ಅದು ತಲುಪಲಿಲ್ಲ. ಏನೋ ಸಮಸ್ಯೆಯಾಗಿದೆ ಎಂದು ಅರಿತ ಇವರು ಆರ್ಡರ್ ಮಾಡಿದ ಸೈಟ್ಗೆ ಕರೆ ಮಾಡಿ ವಿಚಾರಿಸಿದ್ದಾರೆ.
ಖೌಲಾ ಈ ಬಗ್ಗೆ ಮಾತನಾಡಿದ್ದು, “ನಾವು ಮೊದಲ ಮಹಡಿಯ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದೇವೆ, ಆದ್ದರಿಂದ ಡೆಲಿವರಿ ಇದ್ದಾಗ ನಾವು ಕಿಟಕಿಯಿಂದ ಹೊರಗೆ ನೋಡಬೇಕು ಇಲ್ಲದಿದ್ದರೆ ಅವರು ತಪ್ಪಾದ ಫ್ಲಾಟ್‌ಗೆ ಆರ್ಡರ್ ತಲುಪಿಸುತ್ತಾರೆ. ಅನೇಕರು ತಪ್ಪಾಗಿ ನಮ್ಮ ಮನೆಗೆ ಕರೆದುಕೊಂಡು ಬರುವವರನ್ನು ನಾನು ನೋಡಿದ್ದೇವೆ,” ಎಂದು ಹೇಳಿದ್ದಾರೆ.
ಕೊನೆಗೇ ಹೇಗೋ ಆರ್ಡನ್ ಮನೆಗೆ ಬಂದು ತಲುಪಿತು. ಆದರೆ, ಆರ್ಡರ್ ಪೆಟ್ಟಿಗೆಯನ್ನು ತೆರೆಯುತ್ತಿದ್ದಂತೆ ಅದರಲ್ಲಿ iPhone 13 Pro Max ಬದಲಿಗೆ ಬ್ಲೂ ಹ್ಯಾಂಡ್ ಸೋಪ್ನ ಬಾಟಲಿ ತುಂಬಿಸಿಲಾಗಿತ್ತು. ಪ್ಯಾಕೇಜ್ ಸ್ವೀಕರಿಸಿದ ತಕ್ಷಣ ಸ್ಕೈ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿ ದೂರು ನೀಡಿದ್ದಾರೆ. ಇದೀಗ ಮೋಸ ಹೋಗಿ ಒಂದು ವಾರವಾದರೂ ಇವರಿಗೆ ಇದುವರೆಗೆ ಐಫೋನ್ ಬಂದಿಲ್ಲವಂತೆ. ಮಹಿಳೆ ಈ ಘಟನೆಯಿಂದ ನೊಂದಿದ್ದಾರೆ. ಇಷ್ಟಪಟ್ಟು ಐಫೋನ್ ಖರೀದಿಸಿದರೆ ಕೊನೆಗೆ ಸೋಪು ಬಾಟಲಿ ಬಂದಿರುವುದನ್ನು ಕಂಡು ಬೇಸರಗೊಂಡಿದ್ದಾರೆ.
Tecno Pova 5G: ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ 6000mAh ಬ್ಯಾಟರಿಯ ಹೊಸ 5G ಸ್ಮಾರ್ಟ್ಫೋನ್