AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

iQOO 9 SE: ವಿದೇಶದಲ್ಲಿ ಭರ್ಜರಿ ಸೇಲ್: ಭಾರತದಲ್ಲಿ ಒಂದೇ ಬಾರಿಗೆ 3 ಫೋನ್ ರಿಲೀಸ್ ಮಾಡಲಿದೆ ಐಕ್ಯೂ

ಇತ್ತೀಚೆಗಷ್ಟೆ ವಿದೇಶದಲ್ಲಿ ಬಿಡುಗಡೆ ಮಾಡಿ ಭರ್ಜರಿ ಸೇಲ್ ಆಗುತ್ತಿರುವ ಐಕ್ಯೂ 9 ಸರಣಿಯ ಸ್ಮಾರ್ಟ್​ಫೋನ್​ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡದೆ. ವಿಶೇಷ ಎಂದರೆ ಈ ಸರಣಿಯಲ್ಲಿ ಐಕ್ಯೂ 9 (IQoo 9) ಮತ್ತು ಐಕ್ಯೂ 9 ಪ್ರೊ (IQoo 9 Pro) ಜೊತೆ ಐಕ್ಯೂ 9 SE (IQoo 9 SE) ಎಂಬ ಮತ್ತೊಂದು ಫೋನ್ ಕೂಡ ಅನಾವರಣ ಮಾಡಲಿದೆಯಂತೆ.

iQOO 9 SE: ವಿದೇಶದಲ್ಲಿ ಭರ್ಜರಿ ಸೇಲ್: ಭಾರತದಲ್ಲಿ ಒಂದೇ ಬಾರಿಗೆ 3 ಫೋನ್ ರಿಲೀಸ್ ಮಾಡಲಿದೆ ಐಕ್ಯೂ
iQOO 9 SE
TV9 Web
| Updated By: Vinay Bhat|

Updated on: Feb 07, 2022 | 2:22 PM

Share

ವಿದೇಶದಲ್ಲಿ ಭರ್ಜರಿ ಯಶಸ್ಸು ಸಾಧಿಸಿಸುತ್ತಿರುವ ಐಕ್ಯೂ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಈಗಷ್ಟೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ. ಇದಕ್ಕಾಗಿ ಐಕ್ಯೂ ಇದೀಗ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಇತ್ತೀಚೆಗಷ್ಟೆ ವಿದೇಶದಲ್ಲಿ ಬಿಡುಗಡೆ ಮಾಡಿ ಭರ್ಜರಿ ಸೇಲ್ ಆಗುತ್ತಿರುವ ಐಕ್ಯೂ 9 ಸರಣಿಯ ಸ್ಮಾರ್ಟ್​ಫೋನ್​ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡದೆ. ವಿಶೇಷ ಎಂದರೆ ಈ ಸರಣಿಯಲ್ಲಿ ಐಕ್ಯೂ 9 (IQoo 9) ಮತ್ತು ಐಕ್ಯೂ 9 ಪ್ರೊ (IQoo 9 Pro) ಜೊತೆ ಐಕ್ಯೂ 9 SE (IQoo 9 SE) ಎಂಬ ಮತ್ತೊಂದು ಫೋನ್ ಕೂಡ ಅನಾವರಣ ಮಾಡಲಿದೆಯಂತೆ. ಮುಂದಿನ ತಿಂಗಳು ಈ ಫೋನ್​ಗಳು ಭಾರತಕ್ಕೆ ಅಪ್ಪಳಿಸಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​​ನಲ್ಲಿ ಈ ಫೋನ್​ಗಳು ಬಿಡುಗಡೆ ಆಗಲಿದೆ ಎಂದು ಕಂಪನಿ ಈಗಾಗಲೇ ಸ್ಪಷ್ಟ ಪಡಿಸಿದೆ. ಐಕ್ಯೂ 9 ಮತ್ತು 9 ಪ್ರೊ ಸ್ಮಾರ್ಟ್‌ಫೋನ್‌ಗಳು ಇತ್ತೀಚೆಗೆ ಘೋಷಿಸಲಾದ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಬಲವನ್ನು ಒಳಗೊಂಡಿರುವುದು ವಿಶೇಷ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌, ಎಂದಿನಂತೆ ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದರಲ್ಲಿದೆ.

ಐಕ್ಯೂ 9 SE ಸ್ಮಾರ್ಟ್‌ಫೋನಿನ ವಿಶೇಷತೆ ಬಗ್ಗೆ ನೋಡುವುದಾದರೆ, ಇದು 6.6 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರವನ್ನು ಹೊಂದಿದ್ದು, ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ 120-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.ಜೊತೆಗೆ ಈ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆ. ಇದರ ಬೆಲೆ 35,000 ಇರಬಹುದೆಂದು ಅಂದಾಜಿಸಲಾಗಿದೆ.

ಇನ್ನು ಐಕ್ಯೂ 9 ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರವನ್ನು ಹೊಂದಿದ್ದು, ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ 120-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.ಜೊತೆಗೆ ಈ ಸ್ಮಾರ್ಟ್‌ಫೋನ್‌ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆ.

ಐಕ್ಯೂ 9 ಸ್ಮಾರ್ಟ್‌ಫೋನ್‌ ಮೂರು ಮಾದರಿಯಲ್ಲಿ ಮಾರುಕಟ್ಟೆಗೆ ಬಂದಿದೆ. ಇದರ 8GB + 256GB ಸ್ಟೋರೇಜ್ ಮಾದರಿಗೆ RMB 3,999 ಅಂದರೆ ಭಾರತದಲ್ಲಿ ಒದರ ಬೆಲೆ ಅಂದಾಜು 47,000 ರೂ. ಎನ್ನಬಹುದು. ಇದಲ್ಲದೆ 12GB + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ RMB 4,399 (ಅಂದಾಜು 51,600ರೂ) ಮತ್ತು 12GB + 512GB ಸ್ಟೋರೇಜ್ ಕಾನ್ಫಿಗರೇಶನ್ ಬೆಲೆ RMB 4,799 (ಅಂದಾಜು 56,240ರೂ) ಬೆಲೆ ಹೊಂದಿದೆ.

ಐಕ್ಯೂ 9 ಪ್ರೊ ಸ್ಮಾರ್ಟ್‌ಫೋನ್ 3,200×1,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78-ಇಂಚಿನ ಕ್ವಾಡ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಹಾಗೆಯೇ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಐಕ್ಯೂ 9ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ಬೇಸ್‌ ಮಾಡೆಲ್‌ 8GB + 256GB ಸ್ಟೋರೇಜ್ ಆಯ್ಕೆಗೆ RMB 4,999 (ಅಂದಾಜು 58,600ರೂ) ಗೆ ನಿಗದಿಪಡಿಸಲಾಗಿದೆ.

Google Chrome Logo: ಬರೋಬ್ಬರಿ 8 ವರ್ಷಗಳ ಬಳಿಕ ಲೋಗೋ ಬದಲಿಸುತ್ತಿರುವ ಗೂಗಲ್ ಕ್ರೋಮ್: ಹೊಸ ಲೋಗೋ ಹೇಗಿದೆ ನೋಡಿ

iPhone 13 Pro Max: ಆರ್ಡರ್ ಮಾಡಿದ್ದು ಆ್ಯಪಲ್‌ ಐಫೋನ್: ಆದರೆ ಡೆಲಿವರಿ ಆಗಿದ್ದು ಏನು ಗೊತ್ತೇ, ಶಾಕ್ ಆದ ಮಹಿಳೆ!

ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ