WhatsApp: ವಾಟ್ಸ್ಆ್ಯಪ್ನಲ್ಲಿ ದೊಡ್ಡ ಗಾತ್ರದ MB, GB ಫೈಲ್‌ಗಳನ್ನು ಕ್ಷಣಾರ್ಧದಲ್ಲಿ ಸೆಂಡ್ ಮಾಡುವ ಟ್ರಿಕ್ ಗೊತ್ತಾ?
WhatsApp Tricks: 100MB ಗಿಂತ ಅಧಿಕ ಗಾತ್ರದ ಫೈಲ್‌ಗಳನ್ನು ಅಥವಾ GB ಗಾತ್ರ ಇರುವ ಫೈಲ್‌ಗಳನ್ನು ವಾಟ್ಸ್ಆ್ಯಪ್ನಲ್ಲಿ ಶೇರ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಷ್ಟೆಲ್ಲ ಕಟ್ಟುನಿಟ್ಟಿನ ಸವಾಲುಗಳಿದ್ದರೂ ವಾಟ್ಸ್ಆ್ಯಪ್ನಲ್ಲಿ ನೀವು ದೊಡ್ಡದಾದ ಫೈಲ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಿದೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.
![WhatsApp: ವಾಟ್ಸ್ಆ್ಯಪ್ನಲ್ಲಿ ದೊಡ್ಡ ಗಾತ್ರದ MB, GB ಫೈಲ್‌ಗಳನ್ನು ಕ್ಷಣಾರ್ಧದಲ್ಲಿ ಸೆಂಡ್ ಮಾಡುವ ಟ್ರಿಕ್ ಗೊತ್ತಾ?](https://images.tv9kannada.com/wp-content/uploads/2022/02/WhatsApp-Tips-and-Tricks.jpg?w=1280)
ನಮ್ಮ ಜೀವನದ ಅವಿಬಾಜ್ಯ ಸಂವಹನ ಮಾಧ್ಯಮವಾಗಿ ಬಳಕೆಯಾಗುತ್ತಿರುವ ವಾಟ್ಸ್ಆ್ಯಪ್ನಿಂದ (WhatsApp) ಅನೇಕ ಪ್ರಯೋಜನಗಳು ಆಗುತ್ತಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಬೇಕಾದ ಎಲ್ಲ ಫೀಚರ್ಗಳನ್ನು ಕಂಪನಿ ಬಿಡುಗಡೆ ಮಾಡುತ್ತಿದೆ. ಇದಕ್ಕಾಗಿಯೆ ಇದರ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಂಪನಿಗಳಿಗೆ ಸಂಬಂಧಿಸಿದ ಗ್ರೂಪ್ (WhatsApp Group), ಕಾಲೇಜ್, ಸ್ಕೂಲ್ಗೆ ಸಂಬಂಧಿಸಿದ ಮತ್ತೊಂದು ಗ್ರೂಪ್, ಅಲ್ಲದೆ ಈಗ ಆನ್ ಲೈನ್ ಕ್ಲಾಸ್ (Online Class) ಇರುವುದರಿಂದ ಪಠ್ಯಕ್ಕೆ ಸಂಬಂಧ ಪಟ್ಟ ವಿಷಯಗಳನ್ನು ಹಂಚಿಕೊಳ್ಳಲೂ ವಾಟ್ಸ್ಆ್ಯಪ್ ತುಂಬಾ ಸಹಕಾರಿ ಆಗಿದೆ. ಇದರಲ್ಲಿ ಪಿಡಿಎಫ್ ಫೈಲ್‌ಗಳು ಮತ್ತು ಎಕ್ಸೆಲ್ ಶೀಟ್‌ಗಳು ಸೇರಿದಂತೆ ಮೀಡಿಯಾ ಫೈಲ್‌ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಇತರ ಬಳಕೆದಾರರೊಂದಿಗೆ ಶೇರ್ ಮಾಡಿಕೊಳ್ಳಲು ಸಹ ಅವಕಾಶವನ್ನ ನೀಡಿದೆ.
ಆದರೆ, 100MB ಗಿಂತ ಅಧಿಕ ಗಾತ್ರದ ಫೈಲ್‌ಗಳನ್ನು ಅಥವಾ GB ಗಾತ್ರ ಇರುವ ಫೈಲ್‌ಗಳನ್ನು ವಾಟ್ಸ್ಆ್ಯಪ್ನಲ್ಲಿ ಶೇರ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ವಾಟ್ಸ್ಆ್ಯಪ್ ಬಳಸಿ ರೆಕಾರ್ಡ್ ಮಾಡಿದ ವಿಡಿಯೋಗಳ ಮಿತಿ 16MB ಗಿಂತ ಅಧಿಕವಾಗಿರಬಾರದು. ಇಷ್ಟೆಲ್ಲ ಕಟ್ಟುನಿಟ್ಟಿನ ಸವಾಲುಗಳಿದ್ದರೂ ವಾಟ್ಸ್ಆ್ಯಪ್ನಲ್ಲಿ ನೀವು ದೊಡ್ಡದಾದ ಫೈಲ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಿದೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.
ಅಧಿಕ ಗಾತ್ರದ ಎಂಬಿ ಅಥವಾ ಜಿಬಿ ಗಾತ್ರದ ಫೈಲ್‌ಗಳನ್ನು ಗೂಗಲ್ ಡ್ರೈವ್‌ನಲ್ಲಿ ಅಪ್‌ಲೋಡ್ ಮಾಡುವುದು ಮತ್ತು ಆ ಲಿಂಕ್ ಅನ್ನು ವಾಟ್ಸ್ಆ್ಯಪ್ನಲ್ಲಿ ರಿಸೀವರ್‌ನೊಂದಿಗೆ ಶೇರ್‌ಮಾಡಿಕೊಳ್ಳುವುದು. ಇದರಿಂದ ದೊಡ್ಡಗಾತ್ರದ ಫೈಲ್‌ಗಳನ್ನ ಹಂಚಿಕೊಳ್ಳಬಹುದಾಗಿದೆ. ಇದಕ್ಕಾಗಿ ಮೊದಲು ನೀವು ಗೂಗಲ್ ಡ್ರೈವ್ ತೆರೆಯಿರಿ. ಬಳಿಕ ಸ್ಕ್ರೀನ್‌ನ ಕೆಳಗಿನ ಬಲ ಮೂಲೆಯಲ್ಲಿರುವ ಪ್ಲಸ್ ಐಕಾನ್ ಮೇಲಿನ ಅಪ್‌ಲೋಡ್ ಫೈಲ್ ಅನ್ನು ಟ್ಯಾಪ್ ಮಾಡಿ. ಓಪನ್ ಆಯ್ಕೆಯನ್ನು ಟ್ಯಾಪ್ ಮಾಡಿ. ಫೈಲ್ ಅನ್ನು ಅಪ್‌ಲೋಡ್ ಮಾಡಿದ ನಂತರ ನೀವು Google ಡ್ರೈವ್ ಅಪ್ಲಿಕೇಶನ್‌ನಲ್ಲಿ ಫೈಲ್ ಅನ್ನು ಕಾಣಬಹುದಾಗಿದೆ. ಫೈಲ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ. ಕಾಪಿ ಲಿಂಕ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಕಾಪಿ ಮಾಡಿದ ಬಳಿಕ ನೀವು ವಾಟ್ಸ್ಆ್ಯಪ್ ತೆರೆಯಿರಿ. ನೀವು ಲಿಂಕ್ ಹಂಚಿಕೊಳ್ಳಲು ಬಯಸುವ ಸಂಪರ್ಕದ ಹೆಸರನ್ನು ಟ್ಯಾಪ್ ಮಾಡಿ ದೀರ್ಘವಾಗಿ ಒತ್ತಿ ನಂತರ ಪೇಸ್ಟ್ ಆಯ್ಕೆಯನ್ನು ಒತ್ತಿರಿ. ಮೆಸೇಜ್ ಬಾಕ್ಸ್ ನಲ್ಲಿ ನೀವು Google ಡ್ರೈವ್ ಫೈಲ್‌ನ ಹಂಚಿಕೊಳ್ಳಬಹುದಾದ ಲಿಂಕ್ ಅನ್ನು ನೋಡುತ್ತೀರಿ. ಕಳುಹಿಸಲು ಟ್ಯಾಪ್ ಮಾಡಿ. ಹೀಗೆ ಮಾಡುವುದರಿಂದ 100mbಗಿಂತ ಗಾತ್ರದಲ್ಲಿ ದೊಡ್ಡದಾದ ಫೈಲ್‌ಗಳನ್ನು ವಾಟ್ಸ್ಆ್ಯಪ್ ಮೂಲಕ ನಿಮ್ಮ ಸ್ನೇಹಿತರಿಗೆ ಇಲ್ಲವೇ ಯಾರಿಗೆ ಸಂಬಂದಿಸಿದೆಯೋ ಅವರಿಗೆ ಕಳುಹಿಸಬಹುದಾಗಿದೆ.
ಹಾಗೆಯೇ ವಾಟ್ಸ್ಆ್ಯಪ್ನಲ್ಲಿ ನೀವು ಹೈ ಕ್ವಾಲಿಟಿ ಫೋಟೋ ಕಳುಹಿಸಬೇಕಾದರೆ ವಾಟ್ಸ್ಆ್ಯಪ್ನಲ್ಲಿ ಚಾಟ್ ವಿಂಡೋ ಓಪನ್ ಮಾಡಿ, ಮೆಸೇಜ್ ಮಾಡುವ ಪಕ್ಕದಲ್ಲಿರುವ ಅಟಾಚ್ಮೆಂಟ್ ಬಟನ್ ಕ್ಲಿಕ್ ಮಾಡಿ. ಅಲ್ಲಿ ಡಾಕ್ಯುಮೆಂಟ್ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿದ ನಂತರ ಫೈಲ್ ಮ್ಯಾನೇಜರ್ ತೆರೆದುಕೊಳ್ಳೊತ್ತದೆ. ಆಗ ನಿಮಗೆ ಬೇಕಾದ ಫೋಟೋವನ್ನು ಸೆಲೆಕ್ಟ್ ಮಾಡಿ ಓಕೆ ಬಟನ್ ಒತ್ತಿ. ನೀವು ಕಳುಹಿಸಿರುವ ಇಮೇಜ್ ಅಥವಾ ವಿಡಿಯೋ ಡಾಂಕ್ಯುಮೆಂಟ್ ರೂಪದಲ್ಲಿ ಸೆಂಡ್ ಆಗಿರುತ್ತದೆ. ಇದು ವರಿಜಿನ್ ಕ್ವಾಲಿಟಿಯನ್ನು ಕಾಪಾಡುತ್ತದೆ.
Vodafone Idea: ಬಳಕೆದಾರರನ್ನು ಹೆಚ್ಚಿಸುತ್ತಿರುವ ವೊಡಾಫೋನ್ ಐಡಿಯಾ: ಇದಕ್ಕೆ ಕಾರಣ ಈ ಪ್ಲಾನ್ಗಳು
iQOO 9 SE: ವಿದೇಶದಲ್ಲಿ ಭರ್ಜರಿ ಸೇಲ್: ಭಾರತದಲ್ಲಿ ಒಂದೇ ಬಾರಿಗೆ 3 ಫೋನ್ ರಿಲೀಸ್ ಮಾಡಲಿದೆ ಐಕ್ಯೂ