ಗೂಗಲ್ ಕಂಪೆನಿಯು 2021ರ I/O ಡೆವಲಪರ್ ಸಮಾವೇಶದಲ್ಲಿ ಘೋಷಣೆ ಮಾಡಿರುವ ಪ್ರಕಾರ, ಬಿಎಂಡಬ್ಲ್ಯು ಮತ್ತು ಇತರ ವಾಹನ ತಯಾರಿಕೆ ಕಂಪೆನಿಗಳ ಜತೆ ಕಾರ್ಯ ನಿರ್ವಹಿಸುತ್ತಿದ್ದು; ಆಂಡ್ರಾಯಿಡ್ ಸ್ಮಾರ್ಟ್ಫೋನ್ ಮೂಲಕ ಡಿಜಿಟಲ್ ಕೀ ಬಳಸಿ, ಕಾರು ಮಾಲೀಕರು ಲಾಕ್ ಮಾಡುವುದಕ್ಕೆ, ಅನ್ಲಾಕ್ಗೆ ಅಥವಾ ಸ್ಟಾರ್ಟ್ ಮಾಡುವುದಕ್ಕೆ ಬಳಸಬಹುದು ಎಂದು ತಿಳಿಸಲಾಗಿದೆ. ಈ ಹೊಸ ಫೀಚರ್ ಬಗ್ಗೆ ಇನ್ನಷ್ಟು ಆಳವಾದ ಮಾಹಿತಿ ಹಾಗೂ ವಾಸ್ತವದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ವಿವರಗಳನ್ನು ನೀಡಬೇಕಿದೆ. ಅಲ್ಟ್ರಾ- ವೈಡ್ಬ್ಯಾಂಡ್ (UWB) ಟೆಕ್ನಾಲಜಿ ಬಳಸಿ ಡಿಜಿಟಲ್ ಕೀ ಕಾರ್ಯ ನಿರ್ವಹಿಸುತ್ತದೆ. ಈ ತಂತ್ರಜ್ಞಾನವು ರೇಡಿಯೋ ಟ್ರಾನ್ಸ್ಮಿಷನ್ನ ಒಂದು ಬಗೆಯಾಗಿದೆ. ಅದಕ್ಕೆ ರಾಡಾರ್ ರೀತಿಯಲ್ಲಿ ಸಿಗ್ನಲ್ಗೆ ಸೆನ್ಸರ್ ದಿಕ್ಕನ್ನು ಹೇಳುತ್ತದೆ. UWB ಟ್ರಾನ್ಸ್ಮಿಟರ್ಗಳ ಜತೆ ಇರುವ ವಸ್ತುಗಳನ್ನು ಗುರುತಿಸಲು ಮತ್ತು ಪತ್ತೆ ಹಚ್ಚುವುದಕ್ಕೆ ಸ್ಮಾರ್ಟ್ಫೋನ್ ಆಂಟೆನಾ ಅವಕಾಶ ಮಾಡಿಕೊಡುತ್ತದೆ.
ಆಂಡ್ರಾಯಿಡ್ ಬಳಕೆದಾರರು ತಮ್ಮ ಫೋನ್ ಅನ್ನು ಆಚೆಯೇ ತೆಗೆಯದೆ ತಮ್ಮ ವಾಹನಗಳನ್ನು ಲಾಕ್/ಅನ್ಲಾಕ್ ಮಾಡಬಹುದು. ಅಷ್ಟೇ ಅಲ್ಲ, ಕಾರಿನಲ್ಲಿ ಇರುವ ಎನ್ಎಫ್ಸಿ ತಂತ್ರಜ್ಞಾನ ಅಥವಾ ನಿಯರ್ ಫೀಲ್ಡ್ ಕಮ್ಯುನಿಕೇಷನ್ ಬಳಸಿಕೊಂಡು, ಕಾರಿನ ಬಾಗಿಲ ಹ್ಯಾಂಡಲ್ ಬಳಿ ಫೋನ್ ಅನ್ನು ಒತ್ತಿದರೆ ಕಾರಿನ ಬಾಗಿಲು ತೆರೆದುಕೊಳ್ಳುತ್ತದೆ. ಒಂದು ವೇಳೆ ಮತ್ತೊಬ್ಬರಿಂದ ತಾತ್ಕಾಲಿಕವಾಗಿ ಕಾರನ್ನು ಪಡೆದುಕೊಂಡಿದ್ದಲ್ಲಿ ಡಿಜಿಟಲ್ ಕಾರು ಕೀ ಮತ್ತೊಬ್ಬ ವ್ಯಕ್ತಿ ಜತೆಗೆ ರಿಮೋಟ್ಲಿ ಮತ್ತು ಸುರಕ್ಷಿತವಾಗಿ ಹಂಚಿಕೊಳ್ಳಬಹುದು.
ಡಿಜಿಟಲ್ ಕೀ ಫೀಚರ್ ಹಗುರವಾಗಿ ಬರುತ್ತದೆ. ಸಾಂಪ್ರದಾಯಿಕ ಕೀಗಳಿಗಿಂತ ಪಾಕೆಟ್ಗೆ ಭಾರವಿರುವುದಿಲ್ಲ. ಆದರೆ ಇದು ಎಲ್ಲರಿಗೂ ದೊರೆಯುವುದಿಲ್ಲ. ಆರಂಭದಲ್ಲಿ ಈ ಡಿಜಿಟಲ್ ಕೀ ಅನ್ನು ಹೈ ಎಂಡ್ ಸಾಧನಗಳಾದ ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿಯಂಥ ಸ್ಮಾರ್ಟ್ಫೋನ್ಗಳಲ್ಲಿ ಬಳಸಬಹುದು. ಈ ಫೀಚರ್ ಅನ್ನು ಪರಿಚಯಿಸುವುದಕ್ಕೆ ಕಾರು ತಯಾರಕರು ಪ್ರೀಮಿಯಂ ವಿಧಿಸುತ್ತಾರೆ. ಗೂಗಲ್ ತಿಳಿಸಿರುವಂತೆ, ಗ್ರಾಹಕರ ಬದುಕಿನ ಪ್ರಮಖ ಭಾಗವಾಗಿ ಸ್ಮಾರ್ಟ್ಫೋನ್ಗಳನ್ನು ಉತ್ತೇಜಿಸುವ ಉದ್ದೇಶದಿಂದ ಡಿಜಿಟಲ್ ಕಾರು ಕೀ ಫೀಚರ್ ತಂದಿದೆ. ಆದ್ದರಿಂದ ಕಾರುಗಳಲ್ಲಿ ಸೇರ್ಪಡೆ ಮಾಡದೆ ಗುರಿ ಈಡೇರುವುದಿಲ್ಲ.
ಈಗಿನ ದಿನಮಾನಗಳಲ್ಲಿ ಫೋನ್ಗಳನ್ನು ಮಾತ್ರ ಖರೀದಿಸುತ್ತಿಲ್ಲ. ಆದರೆ ಅದರ ಜತೆ ಸಂಪೂರ್ಣ ಎಕೋಸಿಸ್ಟಮ್ ಬರುತ್ತದೆ. ಟಿವಿ, ಲ್ಯಾಪ್ಟಾಪ್, ಕಾರುಗಳು ಮತ್ತು ವೇರಬಲ್ಗಳಾದ ಸ್ಮಾರ್ಟ್ ವಾಚ್ಗಳು ಅಥವಾ ಫಿಟ್ನೆಸ್ ಟ್ರ್ಯಾಕರ್ಗಳು ಈ ಎಲ್ಲವೂ ಇದರೊಟ್ಟಿಗೆ ಕಾರ್ಯ ನಿರ್ವಹಿಸುತ್ತವೆ ಎಂದು ಗೂಗಲ್ ಎಂಜಿನಿಯರಿಂಗ್ನ ಉಪಾಧ್ಯಕ್ಷ ಎರಿಕ್ ಕೇ ಈಚಿನ ಘೋಷಣೆ ನಂತರ ಬ್ಲಾಗ್ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಈಗಿನ ತಂತ್ರಜ್ಞಾನದಿಂದ ಯಾವ ನಿರ್ದಿಷ್ಟ ಕಾರಿನ ಮಾಡೆಲ್ಗಳು ಅನುಕೂಲ ಪಡೆಯುತ್ತವೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಸಹಭಾಗಿತ್ವದ ಬಗ್ಗೆ ಬಿಎಂಡಬ್ಲ್ಯು ಖಾತ್ರಿಪಡಿಸಿದೆ. ಆದ್ದರಿಂದ ಶೀಘ್ರವೇ 2022ರಿಂದ ಈ ಫೀಚರ್ ಇರಲಿದೆ ಎನ್ನಲಾಗಿದೆ.
#Android12 is all about giving you simple, powerful controls for very sensitive data like your microphone, camera and location. #GoogleIO pic.twitter.com/25vigegV1s
— Android (@Android) May 18, 2021
ಇದನ್ನೂ ಓದಿ: Google I/O virtual event 2021: ಗೂಗಲ್ನಿಂದ ಮ್ಯಾಜಿಕ್ ವಿಂಡೋ 3D ವಿಡಿಯೋ ಕಾಲ್ ವೈಶಿಷ್ಟ್ಯದ ಪರಿಚಯ
(Digital car key announced in Google I/O conference 2021. Here are the features of digital car key)