Google I/O virtual event 2021: ಗೂಗಲ್ನಿಂದ ಮ್ಯಾಜಿಕ್ ವಿಂಡೋ 3D ವಿಡಿಯೋ ಕಾಲ್ ವೈಶಿಷ್ಟ್ಯದ ಪರಿಚಯ
ಗೂಗಲ್ ಕಂಪೆನಿಯ I/O ವಾರ್ಷಿಕ ಡೆವಪರ್ ಸಮಾವೇಶದಲ್ಲಿ ವಿವಿಧ ಪ್ರಾಡಕ್ಟ್ಗಳಿಗೆ ಹೊಸ ಫೀಚರ್ಗಳನ್ನು ಸೇರ್ಪಡೆ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಅದರಲ್ಲಿ ಈ 3D ವಿಡಿಯೋ ಚಾಟ್ ಆಸಕ್ತಿಕರವಾಗಿದೆ.
ಗೂಗಲ್ನ ವರ್ಚುವಲ್ I/O 2021ರ ಕಾರ್ಯಕ್ರಮದಲ್ಲಿ ಅದರ ವಿವಿಧ ಪ್ರಾಡಕ್ಟ್ಗಳಿಗೆ ಹೊಸ ವೈಶಿಷ್ಟ್ಯಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ಮ್ಯಾಪ್ಸ್, ಫೋಟೋಸ್, ಸರ್ಚ್, ವೇರ್OS ಮತ್ತು ವರ್ಕ್ಸ್ಪೇಸಸ್ ಇತರ ಪ್ರಾಡಕ್ಟ್ಗಳಿಗೆ ಹೊಸ ಫೀಚರ್ಗಳನ್ನು ಸೇರ್ಪಡೆ ಮಾಡಿದೆ. ಅದರಲ್ಲಿ ಹುಸಿ- ವಿಡಿಯೋ ಚಾಟ್ ತಂತ್ರಜ್ಞಾನ ಇದ್ದು, ಅದಕ್ಕೆ ಪ್ರಾಜೆಕ್ಟ್ ಸ್ಟಾರ್ಲೈನ್ ಎಂದು ಹೆಸರಿಸಲಾಗಿದೆ. ಈ ತಂತ್ರಜ್ಞಾನದ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಲೈಫ್ ಸೈಜ್ನಲ್ಲಿ ಮತ್ತು ಮೂರು ಆಯಾಮದಲ್ಲಿ (ತ್ರೀಡಿ) ನೋಡಬಹುದು ಎಂದು ಗೂಗಲ್ ಹೇಳಿದೆ.
ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಮಾತನಾಡಿ, ಪ್ರಾಜೆಕ್ಟ್ ಸ್ಟಾರ್ಲೈನ್ ಎಂಬುದು ತಂತ್ರಜ್ಞಾನ ಪ್ರಾಜೆಕ್ಟ್. ಅದರಲ್ಲಿ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ಗಳಲ್ಲಿ ಆಧುನಿಕತೆ ಕಾಣಬಹುದು. ಜನರು ದೂರವಿದ್ದರೂ ಹತ್ತಿರ ಇದ್ದಂತೆ ಅನುಭವವಾಗುತ್ತದೆ. ಇದೊಂದು ಪ್ರಯೋಗಾತ್ಮಕವಾದ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ವ್ಯವಸ್ಥೆಯಾಗಿದ್ದು, ಕಂಪ್ಯೂಟರ್ ಸೈನ್ಸ್ ನಿಯಂತ್ರಿತವಾಗಿ ಕೆಲಸ ಮಾಡುತ್ತದೆ. ಹೈ ರೆಸಲ್ಯೂಷನ್ ಕ್ಯಾಮೆರಾಗಳು ಮತ್ತು ಡೆಪ್ತ್ ಸೆನ್ಸರ್ಗಳು ಜನರ ವಿಡಿಯೋ ಕಾನ್ಫರೆನ್ಸಿಂಗ್ಗೆ ರಿಯಲ್ ಟೈಮ್ 3D ಮಾಡೆಲ್ಗಳು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
ಪ್ರತಿ ವರ್ಷವೂ ಗೂಗಲ್ ಕಂಪೆನಿಯಿಂದ I/O ವಾರ್ಷಿಕ ಡೆವಪರ್ ಸಮಾವೇಶವನ್ನು ಆಯೋಜಿಸಲಾಗುತ್ತದೆ. ಇದು ಪ್ರತಿ ವರ್ಷದ ಕಾರ್ಯಕ್ರಮವಾದರೂ ಬಹಳ ಮುಖ್ಯವಾದ ಸಮಾವೇಶ. ಈ ವರ್ಷದ ಕಾರ್ಯಕ್ರಮ ವರ್ಚುವಲಿ ನಡೆಯುತ್ತಿದ್ದು, ಗುರುವಾರದ ತನಕ ಮುಂದುವರಿಯಲಿದೆ.
Imagine a magic window, and through that window you see another person, life-size and in three dimensions.
Project Starline is a technology project that combines advances in hardware and software to help people feel like they’re together, even when they’re apart. #GoogleIO pic.twitter.com/2yNJrXoQcx
— Google (@Google) May 18, 2021
ಇದನ್ನೂ ಓದಿ: ಗೂಗಲ್ ಪೇ ಬಳಕೆದಾರರಿಗೊಂದು ಗುಡ್ನ್ಯೂಸ್; ಯುಎಸ್ನಲ್ಲಿದ್ದುಕೊಂಡು, ಭಾರತದಲ್ಲಿದ್ದವರಿಗೂ ಹಣ ವರ್ಗಾವಣೆ ಮಾಡಬಹುದು !
(Google company unveils various new features to it’s products and also 3D video call window in annual event)