Google I/O conference 2021: ಗೂಗಲ್ I/O ಸಮಾವೇಶದಲ್ಲಿ ಕಾರುಗಳಿಗೆ ಡಿಜಿಟಲ್ ಕೀ ಘೋಷಣೆ; ಏನಿದರ ವೈಶಿಷ್ಟ್ಯ?

Google I/O conference 2021ರಲ್ಲಿ ಕಾರಿನ ಡಿಜಿಟಲ್ ಕೀ ಪರಿಚಯಿಸಿದೆ. ಏನು ಈ ಡಿಜಿಟಲ್ ಕೀ ವೈಶಿಷ್ಟ್ಯ ಹಾಗೂ ಇದು ಹೇಗೆ ಕೆಲಸ ಮಾಡುತ್ತದೆ ಎಂಬುದರ ವಿವರ ಇಲ್ಲಿದೆ.

Google I/O conference 2021: ಗೂಗಲ್ I/O ಸಮಾವೇಶದಲ್ಲಿ ಕಾರುಗಳಿಗೆ ಡಿಜಿಟಲ್ ಕೀ ಘೋಷಣೆ; ಏನಿದರ ವೈಶಿಷ್ಟ್ಯ?
ಚಿತ್ರಕೃಪೆ: ಗೂಗಲ್
Follow us
Srinivas Mata
|

Updated on: May 20, 2021 | 1:19 PM

ಗೂಗಲ್ ಕಂಪೆನಿಯು 2021ರ I/O ಡೆವಲಪರ್ ಸಮಾವೇಶದಲ್ಲಿ ಘೋಷಣೆ ಮಾಡಿರುವ ಪ್ರಕಾರ, ಬಿಎಂಡಬ್ಲ್ಯು ಮತ್ತು ಇತರ ವಾಹನ ತಯಾರಿಕೆ ಕಂಪೆನಿಗಳ ಜತೆ ಕಾರ್ಯ ನಿರ್ವಹಿಸುತ್ತಿದ್ದು; ಆಂಡ್ರಾಯಿಡ್ ಸ್ಮಾರ್ಟ್​ಫೋನ್ ಮೂಲಕ ಡಿಜಿಟಲ್ ಕೀ ಬಳಸಿ, ಕಾರು ಮಾಲೀಕರು ಲಾಕ್ ಮಾಡುವುದಕ್ಕೆ, ಅನ್​ಲಾಕ್​ಗೆ ಅಥವಾ ಸ್ಟಾರ್ಟ್ ಮಾಡುವುದಕ್ಕೆ ಬಳಸಬಹುದು ಎಂದು ತಿಳಿಸಲಾಗಿದೆ. ಈ ಹೊಸ ಫೀಚರ್​ ಬಗ್ಗೆ ಇನ್ನಷ್ಟು ಆಳವಾದ ಮಾಹಿತಿ ಹಾಗೂ ವಾಸ್ತವದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ವಿವರಗಳನ್ನು ನೀಡಬೇಕಿದೆ. ಅಲ್ಟ್ರಾ- ವೈಡ್​ಬ್ಯಾಂಡ್ (UWB) ಟೆಕ್ನಾಲಜಿ ಬಳಸಿ ಡಿಜಿಟಲ್ ಕೀ ಕಾರ್ಯ ನಿರ್ವಹಿಸುತ್ತದೆ. ಈ ತಂತ್ರಜ್ಞಾನವು ರೇಡಿಯೋ ಟ್ರಾನ್ಸ್​ಮಿಷನ್​ನ ಒಂದು ಬಗೆಯಾಗಿದೆ. ಅದಕ್ಕೆ ರಾಡಾರ್ ರೀತಿಯಲ್ಲಿ​ ಸಿಗ್ನಲ್​ಗೆ ಸೆನ್ಸರ್​ ದಿಕ್ಕನ್ನು ಹೇಳುತ್ತದೆ. UWB ಟ್ರಾನ್ಸ್​ಮಿಟರ್​ಗಳ ಜತೆ ಇರುವ ವಸ್ತುಗಳನ್ನು ಗುರುತಿಸಲು ಮತ್ತು ಪತ್ತೆ ಹಚ್ಚುವುದಕ್ಕೆ ಸ್ಮಾರ್ಟ್​ಫೋನ್ ಆಂಟೆನಾ ಅವಕಾಶ ಮಾಡಿಕೊಡುತ್ತದೆ.

ಆಂಡ್ರಾಯಿಡ್​ ಬಳಕೆದಾರರು ತಮ್ಮ ಫೋನ್​ ಅನ್ನು ಆಚೆಯೇ ತೆಗೆಯದೆ ತಮ್ಮ ವಾಹನಗಳನ್ನು ಲಾಕ್/ಅನ್​ಲಾಕ್ ಮಾಡಬಹುದು. ಅಷ್ಟೇ ಅಲ್ಲ, ಕಾರಿನಲ್ಲಿ ಇರುವ ಎನ್​ಎಫ್​ಸಿ ತಂತ್ರಜ್ಞಾನ ಅಥವಾ ನಿಯರ್ ಫೀಲ್ಡ್ ಕಮ್ಯುನಿಕೇಷನ್ ಬಳಸಿಕೊಂಡು, ಕಾರಿನ ಬಾಗಿಲ ಹ್ಯಾಂಡಲ್ ಬಳಿ ಫೋನ್​ ಅನ್ನು ಒತ್ತಿದರೆ ಕಾರಿನ ಬಾಗಿಲು ತೆರೆದುಕೊಳ್ಳುತ್ತದೆ. ಒಂದು ವೇಳೆ ಮತ್ತೊಬ್ಬರಿಂದ ತಾತ್ಕಾಲಿಕವಾಗಿ ಕಾರನ್ನು ಪಡೆದುಕೊಂಡಿದ್ದಲ್ಲಿ ಡಿಜಿಟಲ್ ಕಾರು ಕೀ ಮತ್ತೊಬ್ಬ ವ್ಯಕ್ತಿ ಜತೆಗೆ ರಿಮೋಟ್ಲಿ ಮತ್ತು ಸುರಕ್ಷಿತವಾಗಿ ಹಂಚಿಕೊಳ್ಳಬಹುದು.

ಡಿಜಿಟಲ್ ಕೀ ಫೀಚರ್ ಹಗುರವಾಗಿ ಬರುತ್ತದೆ. ಸಾಂಪ್ರದಾಯಿಕ ಕೀಗಳಿಗಿಂತ ಪಾಕೆಟ್​ಗೆ ಭಾರವಿರುವುದಿಲ್ಲ. ಆದರೆ ಇದು ಎಲ್ಲರಿಗೂ ದೊರೆಯುವುದಿಲ್ಲ. ಆರಂಭದಲ್ಲಿ ಈ ಡಿಜಿಟಲ್ ಕೀ ಅನ್ನು ಹೈ ಎಂಡ್ ಸಾಧನಗಳಾದ ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿಯಂಥ ಸ್ಮಾರ್ಟ್​ಫೋನ್​ಗಳಲ್ಲಿ ಬಳಸಬಹುದು. ಈ ಫೀಚರ್ ಅನ್ನು ಪರಿಚಯಿಸುವುದಕ್ಕೆ ಕಾರು ತಯಾರಕರು ಪ್ರೀಮಿಯಂ ವಿಧಿಸುತ್ತಾರೆ. ಗೂಗಲ್ ತಿಳಿಸಿರುವಂತೆ, ಗ್ರಾಹಕರ ಬದುಕಿನ ಪ್ರಮಖ ಭಾಗವಾಗಿ ಸ್ಮಾರ್ಟ್​ಫೋನ್​ಗಳನ್ನು ಉತ್ತೇಜಿಸುವ ಉದ್ದೇಶದಿಂದ ಡಿಜಿಟಲ್ ಕಾರು ಕೀ ಫೀಚರ್ ತಂದಿದೆ. ಆದ್ದರಿಂದ ಕಾರುಗಳಲ್ಲಿ ಸೇರ್ಪಡೆ ಮಾಡದೆ ಗುರಿ ಈಡೇರುವುದಿಲ್ಲ.

ಈಗಿನ ದಿನಮಾನಗಳಲ್ಲಿ ಫೋನ್​ಗಳನ್ನು ಮಾತ್ರ ಖರೀದಿಸುತ್ತಿಲ್ಲ. ಆದರೆ ಅದರ ಜತೆ ಸಂಪೂರ್ಣ ಎಕೋಸಿಸ್ಟಮ್ ಬರುತ್ತದೆ. ಟಿವಿ, ಲ್ಯಾಪ್​ಟಾಪ್, ಕಾರುಗಳು ಮತ್ತು ವೇರಬಲ್​ಗಳಾದ ಸ್ಮಾರ್ಟ್​ ವಾಚ್​ಗಳು ಅಥವಾ ಫಿಟ್​ನೆಸ್​ ಟ್ರ್ಯಾಕರ್​ಗಳು ಈ ಎಲ್ಲವೂ ಇದರೊಟ್ಟಿಗೆ ಕಾರ್ಯ ನಿರ್ವಹಿಸುತ್ತವೆ ಎಂದು ಗೂಗಲ್ ಎಂಜಿನಿಯರಿಂಗ್​ನ ಉಪಾಧ್ಯಕ್ಷ ಎರಿಕ್ ಕೇ ಈಚಿನ ಘೋಷಣೆ ನಂತರ ಬ್ಲಾಗ್​ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ಈಗಿನ ತಂತ್ರಜ್ಞಾನದಿಂದ ಯಾವ ನಿರ್ದಿಷ್ಟ ಕಾರಿನ ಮಾಡೆಲ್​ಗಳು ಅನುಕೂಲ ಪಡೆಯುತ್ತವೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಸಹಭಾಗಿತ್ವದ ಬಗ್ಗೆ ಬಿಎಂಡಬ್ಲ್ಯು ಖಾತ್ರಿಪಡಿಸಿದೆ. ಆದ್ದರಿಂದ ಶೀಘ್ರವೇ 2022ರಿಂದ ಈ ಫೀಚರ್ ಇರಲಿದೆ ಎನ್ನಲಾಗಿದೆ.

ಇದನ್ನೂ ಓದಿ: Google I/O virtual event 2021: ಗೂಗಲ್​ನಿಂದ ಮ್ಯಾಜಿಕ್ ವಿಂಡೋ 3D ವಿಡಿಯೋ ಕಾಲ್ ವೈಶಿಷ್ಟ್ಯದ ಪರಿಚಯ

(Digital car key announced in Google I/O conference 2021. Here are the features of digital car key)

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್