ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜಗತ್ತಿನಲ್ಲಿ ಪ್ರಸಿದ್ಧ ಗೂಗಲ್ ಸಂಸ್ಥೆ ಒಂದು ಹೆಜ್ಜೆ ಮುಂದೆ ಹೋಗಿದೆ. ಇಂದು ಕಂಪನಿಯು ತನ್ನ ಅತ್ಯಂತ ಶಕ್ತಿಶಾಲಿ AI ಮಾದರಿ ಜೆಮಿನಿ AI ಅನ್ನು ಪರಿಚಯಿಸಿದೆ. ಅಮೇರಿಕನ್ ಸರ್ಚ್ ಇಂಜಿನ್ ಕಂಪನಿಯು, ಇದುವರೆಗಿನ ತನ್ನ ಅತಿದೊಡ್ಡ ಮತ್ತು ಅತ್ಯಂತ ಸಮರ್ಥ AI ಮಾದರಿಯಾಗಿದೆ ಎಂದು ಹೇಳಿಕೊಂಡಿದೆ. ಈ ಮೂಲಕ AI ಪ್ರಪಂಚದಲ್ಲಿ, OpenAI ನ ChatGPT ಮತ್ತು Metaದ Llama 2 ನೊಂದಿಗೆ ನೇರ ಸ್ಪರ್ಧೆಗೆ ಇಳಿದಿದೆ.
ಗೂಗಲ್ನ ಮೂಲ ಕಂಪನಿ ಆಲ್ಫಾಬೆಟ್ AI ಸಂಶೋಧನಾ ಘಟಕ ಡೀಪ್‌ಮೈಂಡ್ ಮತ್ತು ಗೂಗಲ್ ಬ್ರೈನ್ ಅನ್ನು ವಿಲೀನಗೊಳಿಸಿ ಗೂಗಲ್ ಡೀಪ್‌ಮೈಂಡ್ ಘಟಕವನ್ನು ರಚಿಸಿದ್ದು, ಜೆಮಿನಿ AI ಈ ಘಟಕದ ಮೊದಲ AI ಮಾದರಿಯಾಗಿದೆ. ಈ ಮಾದರಿಯನ್ನು ವಿಶೇಷ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಅನೇಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಬಹುಮಾದರಿಯಂತಿದೆ.
ಜೆಮಿನಿ AI ಅನ್ನು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಲು ಅಭಿವೃದ್ಧಿಪಡಿಸಲಾಗಿದೆ. ಇದು ಒಂದೇ ಸಮಯದಲ್ಲಿ ಪಠ್ಯ, ಕೋಡ್, ಆಡಿಯೋ, ಫೋಟೋ ಮತ್ತು ವಿಡಿಯೋದಂತಹ ವಿವಿಧ ರೀತಿಯ ಮಾಹಿತಿಯಲ್ಲಿ ಕೆಲಸ ಮಾಡುತ್ತದೆ.
Tech Tips: ಹೊಸ ಮೊಬೈಲ್ ಖರೀದಿಸುವ ಮುನ್ನ ಏನೆಲ್ಲ ಚೆಕ್ ಮಾಡಬೇಕು?: ಇಲ್ಲಿದೆ ಮಾಹಿತಿ
ಜೆಮಿನಿ AIಯು ಜೆಮಿನಿ ಅಲ್ಟ್ರಾ, ಜೆಮಿನಿ ಪ್ರೊ ಮತ್ತು ಜೆಮಿನಿ ನ್ಯಾನೋ ಎಂಬ ಮೂರು ಗಾತ್ರಗಳಲ್ಲಿ ಲಭ್ಯವಿರುತ್ತದೆ. MMLU (ಮಾಸ್ಸಿವ್ ಮಲ್ಟಿಟಾಸ್ಕ್ ಲ್ಯಾಂಗ್ವೇಜ್ ಅಂಡರ್‌ಸ್ಟ್ಯಾಂಡಿಂಗ್) ಬೆಂಚ್‌ಮಾರ್ಕ್‌ನಲ್ಲಿ ಮಾನವ ತಜ್ಞರನ್ನು ಮೀರಿಸುವ ಮೊದಲ ಮಾದರಿ ಇದಾಗಿದೆ. ಇದು ಗಣಿತ, ಭೌತಶಾಸ್ತ್ರ, ಇತಿಹಾಸ, ಕಾನೂನು, ವೈದ್ಯಕೀಯ ಮತ್ತು ನೈತಿಕತೆಯಂತಹ 57 ವಿಷಯಗಳ ಸಂಯೋಜನೆಯನ್ನು ವಿಶ್ವದ ಜ್ಞಾನ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಪರೀಕ್ಷಿಸಲು ಬಳಸುಲಾಗುತ್ತದೆ.
ಜೆಮಿನಿ ಪ್ರೊ ಆರಂಭದಲ್ಲಿ ಪಠ್ಯ-ಆಧಾರಿತ ಪ್ರಾಂಪ್ಟ್‌ಗಳನ್ನು ಬೆಂಬಲಿಸುತ್ತದೆ, ಮಲ್ಟಿಮೋಡಲ್ ಬೆಂಬಲವು ನಂತರ ಬರುತ್ತದೆ. ಹೊಸ ಮಾದರಿಯು 170 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ. ಭವಿಷ್ಯದಲ್ಲಿ ಯುರೋಪ್‌ನಂತಹ ಹೆಚ್ಚಿನ ಭಾಷೆಗಳನ್ನು ಇದಕ್ಕೆ ಸೇರಿಸಲಾಗುತ್ತದಂತೆ.
ಹೊಸ ವರ್ಷದಲ್ಲಿ, ಜೆಮಿನಿ ಅಲ್ಟ್ರಾ ಬೆಂಬಲವು ಗೂಗಲ್ ಬರ್ಡ್‌ನಲ್ಲಿ ಲಭ್ಯವಿರುತ್ತದೆ. ಪಠ್ಯ, ಚಿತ್ರಗಳು, ಆಡಿಯೋ, ವಿಡಿಯೋ ಮತ್ತು ಕೋಡ್‌ನಂತಹ ವಿವಿಧ ರೀತಿಯ ಡೇಟಾವನ್ನು ನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಜೆಮಿನಿ ಅಲ್ಟ್ರಾ ವಿಶ್ವದ ಅತ್ಯಂತ ಜನಪ್ರಿಯ ಕೋಡಿಂಗ್ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ಕೋಡ್ ಅನ್ನು ಅರ್ಥಮಾಡಿಕೊಳ್ಳಬಹುದು ಮತ್ತು ರಚಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ