Google Pixel 6 Pro 5G: 1 ಲಕ್ಷದ ಈ ಫೋನನ್ನು ಕೇವಲ 49,999 ರೂ. ಗೆ ಖರೀದಿಸಿ: ಅಮೆಜಾನ್ನಿಂದ ಹಿಂದೆಂದೂ ನೀಡದ ಆಫರ್
Amazon Offer: ಕಳೆದ ವರ್ಷ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಗೂಗಲ್ ಪಿಕ್ಸೆಲ್ 6 ಪ್ರೊ 5ಜಿ (Google Pixel 6 Pro 5G) ಸ್ಮಾರ್ಟ್‌ಫೋನ್ ಆಕರ್ಷಕ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿದೆ. ಶೇ. 54 ರಷ್ಟು ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್ ಆಕರ್ಷಕ ಫೀಚರ್ಗಳೊಂದಿಗೆ ಗ್ರಾಹಕರನ್ನು ಸೆಳೆದಿದೆ.
Google Pixel 6 Pro
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ (Amazon) ಯಾವುದೇ ಮೇಳ ಆಯೋಜಿಸಿಲ್ಲವಾದರೂ ಸ್ಮಾರ್ಟ್ಫೋನ್ಗಳು ಬಂಪರ್ ಡಿಸ್ಕೌಂಟ್ಗೆ ಮಾರಾಟ ಆಗುತ್ತಿದೆ. ಮುಖ್ಯವಾಗಿ ಕಳೆದ ವರ್ಷ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಗೂಗಲ್ ಪಿಕ್ಸೆಲ್ 6 ಪ್ರೊ 5ಜಿ (Google Pixel 6 Pro 5G) ಸ್ಮಾರ್ಟ್‌ಫೋನ್ ಆಕರ್ಷಕ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿದೆ. ಶೇ. 54 ರಷ್ಟು ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್ ಆಕರ್ಷಕ ಫೀಚರ್ಗಳೊಂದಿಗೆ ಗ್ರಾಹಕರನ್ನು ಸೆಳೆದಿದೆ. ಮುಖ್ಯವಾಗಿ ತನ್ನ ಕ್ಯಾಮೆರಾ (Camera) ಮೂಲಕವೇ ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿತ್ತು. ಹಾಗಾದರೆ ಗೂಗಲ್ ಪಿಕ್ಸಲ್ 6 ಪ್ರೊ ಈಗ ಎಷ್ಟು ರೂಪಾಯಿಗೆ ಮಾರಾಟ ಆಗುತ್ತಿದೆ?, ಇದರ ವಿಶೇಷತೆ ಏನೇನು ಎಂಬುದನ್ನು ನೋಡೋಣ.
- ಗೂಗಲ್ ಪಿಕ್ಸಲ್ 6 ಸ್ಮಾರ್ಟ್ಫೋನ್ನ ಮೂಲಬೆಲೆ 1,09,000 ರೂ. ಆದರೀಗ ಫ್ಲಿಪ್ಕಾರ್ಟ್ನಲ್ಲಿ ಶೇ. 54 ರಷ್ಟು ಡಿಸ್ಕೌಂಟ್ ಪಡೆದುಕೊಂಡು ಕೇವಲ 49,999 ರೂ. ಗೆ ಮಾರಾಟ ಆಗುತ್ತಿದೆ.
- ಇದರ ಜೊತೆಗೆ ಆಯ್ದ ಕೆಲ ಬ್ಯಾಂಕ್‌ಗಳಿಂದ ಆಕರ್ಷಕ ರಿಯಾಯಿತಿ ಕೊಡುಗೆಗಳು ಸಿಗಲಿದೆ.
- ಗೂಗಲ್ ಪಿಕ್ಸಲ್ 6 ಪ್ರೊ 5G ಸ್ಮಾರ್ಟ್‌ಫೋನ್ 12GB RAM + 128GB ಸ್ಟೋರೇಜ್‌ನ ವೇರಿಯಂಟ್ ಮೇಲೆ ಈ ಆಫರ್ ನೀಡಲಾಗಿದೆ. ಅಲ್ಲದೆ ನೋ ಕಾಸ್ಟ್ ಇಎಮ್‌ಐ ಆಯ್ಕೆ ಸಹ ಲಭ್ಯವಾಗುತ್ತಿದೆ.
- ಈ ಸ್ಮಾರ್ಟ್‌ಫೋನ್ 1,440 x 3,120 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7-ಇಂಚಿನ ಎಲ್‌ಟಿಪಿಒ ಡಿಸ್‌ಪ್ಲೇ ಹೊಂದಿದೆ. 120Hz ವರೆಗಿನ ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ.
- ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಿಸಲಾಗಿದೆ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಹೊಂದಿದೆ.
- ಗೂಗಲ್ ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್ ಗೂಗಲ್ ಟೆನ್ಸರ್ SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಟೆನ್ಸರ್ 20-ಕೋರ್ ಜಿಪಿಯು ಹೊಂದಿದ್ದು, ಉತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ.
- ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದು 150% ಹೆಚ್ಚು ಬೆಳಕನ್ನು ಸೆರೆಹಿಡಿಯುತ್ತದೆ.
- ಎರಡನೇ ಕ್ಯಾಮೆರಾ 48MP ಟೆಲಿಫೋಟೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. 11.1 ಮೆಗಾಫಿಕ್ಸೆಲ್ನ ಅದ್ಭುತವಾದ ಸೆಲ್ಫೀ ಕ್ಯಾಮೆರಾ ಅಳವಡಿಸಲಾಗಿದೆ.
- ದೀರ್ಘ ಸಮಯ ಬಾಳಿಕೆ ಬರುವ 5,003mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 23W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ