2.5 ಬಿಲಿಯನ್ ಅಂದರೆ 250 ಕೋಟಿ ಬಳಕೆದಾರರ ಜಿಮೇಲ್ ಖಾತೆಗಳನ್ನು ಎಐ ಮೂಲಕ ಹ್ಯಾಕ್ ಮಾಡಬಹುದು ಎಂದು ಗೂಗಲ್ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಸೈಬರ್ ಅಪರಾಧಿಗಳು ಗೂಗಲ್ ಬೆಂಬಲದ ಹೆಸರಿನಲ್ಲಿ ಬಳಕೆದಾರರಿಗೆ ಕರೆ ಮಾಡುವ ಮೂಲಕ ಈ ದೊಡ್ಡ ವಂಚನೆ ಮಾಡುತ್ತಿದ್ದಾರೆ. ಇಂತಹ ಯಾವುದೇ ಫೇಕ್ ಕಾಲ್ ಅನ್ನು ನಂಬಬೇಡಿ ಮತ್ತು ಕೂಡಲೇ ತಮ್ಮ ಜಿಮೇಲ್ ಖಾತೆಯ ಪಾಸ್ ವರ್ಡ್ ರೀಸೆಟ್ ಮಾಡಿ ಎಂದು ಗೂಗಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಫೋರ್ಬ್ಸ್ ವರದಿಯ ಪ್ರಕಾರ, ಸೈಬರ್ ಅಪರಾಧಿಗಳು ಗೂಗಲ್ ಬೆಂಬಲದ ಹೆಸರಿನಲ್ಲಿ ಕರೆ ಮಾಡುತ್ತಿದ್ದಾರೆ ಎಂದು ಗೂಗಲ್ ಲಕ್ಷಾಂತರ ಜಿಮೇಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅವರು ಬಳಸಿದ ಕಾಲರ್ ಐಡಿ ಸಂಪೂರ್ಣವಾಗಿ ನೈಜವಾಗಿ ಕಾಣುತ್ತದೆ, ಇದರಿಂದಾಗಿ ಬಳಕೆದಾರರು ಅವರ ಬಲೆಗೆ ಸುಲಭವಾಗಿ ಬೀಳುತ್ತಾರೆ. ಹ್ಯಾಕರ್‌ಗಳು ಜಿಮೇಲ್ ಬಳಕೆದಾರರಿಗೆ ಗೂಗಲ್ ಬೆಂಬಲ ಏಜೆಂಟ್ ಹೆಸರಿನಲ್ಲಿ ಕರೆ ಮಾಡುತ್ತಾರೆ ಮತ್ತು ‘ನಿಮ್ಮ ಖಾತೆಹ್ಯಾಕ್ ಆಗಿದೆ, ಇಮೇಲ್‌ನಲ್ಲಿ ಸ್ವೀಕರಿಸಿದ ಕೋಡ್ ಅನ್ನು ಬಳಸಿಕೊಂಡು ಖಾತೆಯನ್ನು ಮರುಪಡೆಯಿರಿ’ ಎಂದು ಅವರು ತಿಳಿಸುತ್ತಾರೆ. ಅಷ್ಟೇ ಅಲ್ಲ, ಹ್ಯಾಕರ್‌ಗಳು ಕಳುಹಿಸಿರುವ ಇ-ಮೇಲ್ ಮತ್ತು ರಿಕವರಿ ಕೋಡ್ ಕೂಡ ಅಸಲಿ ಎನಿಸುತ್ತಿದೆ.
ಈ ಕೆಲಸವನ್ನು ತಕ್ಷಣ ಮಾಡಿ:
Tech Tips: ಭಾರತದಲ್ಲಿ ಮೊಬೈಲ್ ನಂಬರ್ ಮೊದಲು 91 ಎಂದು ಇರುವುದು ಏಕೆ?, ಇದರ ಹಿಂದಿನ ರಹಸ್ಯವೇನು?
ಜಿಮೇಲ್ ಪಾಸ್ವರ್ಡ್ ಅನ್ನು ಮರುಹೊಂದಿಸುವುದು ಹೇಗೆ?:
ನಿಮ್ಮ ಜಿಮೇಲ್ ಖಾತೆಯ ಪಾಸ್‌ವರ್ಡ್ ನಿಮಗೆ ತಿಳಿದಿಲ್ಲದಿದ್ದರೆ, ಫರ್ಗೆಟ್ ಪಾಸ್ವರ್ಡ್ ಆಯ್ಕೆಯನ್ನು ಟ್ಯಾಪ್ ಮಾಡಿ. ಇದರ ನಂತರ ಡಿಸ್ಪ್ಲೇ ಮೇಲೆ ನೀಡಲಾದ ಸೂಚನೆಗಳನ್ನು ಅನುಸರಿಸಿ ಮತ್ತು ಭದ್ರತಾ ಪ್ರಶ್ನೆಗಳಿಗೆ ಉತ್ತರಿಸಿ. ಇದರ ನಂತರ ನೀವು ನಿಮ್ಮ ಜಿಮೇಲ್ ಖಾತೆಯ ಪಾಸ್ವರ್ಡ್ ಅನ್ನು ಬದಲಾಯಿಸಲು ಸಾಧ್ಯವಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:16 am, Tue, 4 February 25