ಸ್ಮಾರ್ಟ್​ಫೋನ್ ಚಾರ್ಜರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಸರ್ಕಾರ..!

| Updated By: ಝಾಹಿರ್ ಯೂಸುಫ್

Updated on: Aug 10, 2022 | 4:23 PM

ಕಂಪೆನಿಗಳು ಯುರೋಪ್ ಮತ್ತು ಯುಎಸ್‌ಎನಲ್ಲಿ ಈ ರೀತಿಯ ಸೇವೆ ನೀಡುವುದಾದರೆ, ಭಾರತದಲ್ಲಿ ಏಕೆ ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ? ಎಂಬುದೇ ಇಲ್ಲಿ ಪ್ರಶ್ನೆ.

ಸ್ಮಾರ್ಟ್​ಫೋನ್ ಚಾರ್ಜರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಸರ್ಕಾರ..!
ಸಾಂದರ್ಭಿಕ ಚಿತ್ರ
Follow us on

ಸ್ಮಾರ್ಟ್​ಫೋನ್ ಬಳಕೆದಾರರ ಅತೀ ದೊಡ್ಡ ಸಮಸ್ಯೆಯೆಂದರೆ ವಿಭಿನ್ನ ಚಾರ್ಜರ್…ಅಂದರೆ ಒಂದು ಮೊಬೈಲ್ ಚಾರ್ಜರ್ ಟೈಪ್-ಸಿ ಪಿನ್ ಪೋರ್ಟ್​ ಹೊಂದಿದ್ದರೆ, ಮತ್ತೊಂದು ಮೈಕ್ರೋ ಯುಎಸ್​ಬಿ ಪಿನ್ ಹೊಂದಿರುತ್ತದೆ. ಇನ್ನು ಕೆಲವು ಮೊಬೈಲ್​ಗಳಲ್ಲಿ ಟೈಪ್ ಎ ಮತ್ತು ಟೈಪ್ ಬಿ ಪಿನ್​ ಚಾರ್ಜರ್​ಗಳನ್ನು ನೀಡಲಾಗಿರುತ್ತದೆ. ಇದಲ್ಲದೆ ಐಫೋನ್ ಹಾಗೂ ಅಂಡ್ರಾಯ್ಡ್ ಚಾರ್ಜರ್​ಗಳು ಕೂಡ ವಿಭಿನ್ನ. ಅತ್ತ ಸ್ಮಾರ್ಟ್​ಫೋನ್ ಹಾಗೂ ಟ್ಯಾಬ್ಲೆಟ್​ಗಳಲ್ಲೂ ವಿಭಿನ್ನ ಪಿನ್ ಪೊರ್ಟ್​ ಹೊಂದಿರುತ್ತವೆ. ಇದರಿಂದ ಸ್ಮಾರ್ಟ್​ಫೋನ್-ಟ್ಯಾಬ್ಲೆಟ್​ ಬಳಕೆದಾರರು ಒಂದೇ ಸಮಯದಲ್ಲಿ ವಿಭಿನ್ನ ಚಾರ್ಜರ್​ಗಳನ್ನು ಹೊಂದಿರಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಣಲು ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ. ಅದು ಕೂಡ ಎಲ್ಲಾ ಡಿವೈಸ್​ಗಳಿಗೂ ಸಾಮಾನ್ಯ ಚಾರ್ಜರ್ ಅಳವಡಿಸಿಕೊಳ್ಳುವ ಪ್ರಸ್ತಾವನೆಯ ಮೂಲಕ ಎಂಬುದು ವಿಶೇಷ.

ಈ ಬಗ್ಗೆ ಚರ್ಚಿಸಲು ಟೆಕ್ ಕಂಪೆನಿಗಳೊಂದಿಗೆ ಆಗಸ್ಟ್ 17 ರಂದು ವಿಶೇಷ ಸಭೆ ಕರೆಯಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂದರೆ ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್​ಫೋನ್ ಹಾಗೂ ಟ್ಯಾಬ್ಲೆಟ್​ಗಳಿಗೆ ಏಕ ಮಾದರಿಯ ಚಾರ್ಜರ್ ಪಿನ್​ ಪೋರ್ಟ್​ಗಳನ್ನು ಅಳವಡಿಸುವ ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದಕ್ಕೆ ಎಲ್ಲಾ ಕಂಪೆನಿಗಳು ಸಮ್ಮತಿ ಸೂಚಿಸಿದರೆ, ಮುಂಬರುವ ಸ್ಮಾರ್ಟ್​ಫೋನ್ ಹಾಗೂ ಟ್ಯಾಬ್ಲೆಟ್​ಗಳಿಗೆ ಒಂದೇ ಮಾದರಿಯ ಚಾರ್ಜರ್ ಪಿನ್​ಗಳಿರಲಿವೆ. ಇದರಿಂದ ನೀವು ಒಂದು ಚಾರ್ಜರ್ ಹೊಂದಿದ್ದರೂ ಸಾಕು.

ಯಾಕಾಗಿ ಈ ನಿರ್ಧಾರ?
ಭಾರತದಲ್ಲಿ ಬಹು ಚಾರ್ಜರ್​ಗಳ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಈ ಬಗ್ಗೆ ಸಭೆ ಕರೆದಿದೆ. ಇಲ್ಲಿ ಚಾರ್ಜರ್​ಗೂ ಸರ್ಕಾರಕ್ಕೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿದ್ದರೆ, ಸಿಗುವ ಉತ್ತರ ಇ-ತಾಜ್ಯ. ಅಂದರೆ ನೀವು 2 ವಿಭಿನ್ನ ಸ್ಮಾರ್ಟ್​ಫೋನ್ ಬಳಸುವಾಗ 2 ಬೇರೆ ಚಾರ್ಜರ್​ಗಳನ್ನು ಬಳಸುತ್ತಿರುತ್ತೀರಿ. ವರ್ಷಗಳ ಕಳೆದ ಬಳಿಕ ನೀವು ಸ್ಮಾರ್ಟ್​ಫೋನ್ ಬದಲಿಸಿದರೆ ಚಾರ್ಜರ್ ಕೂಡ ಬದಲಾಗಿರುತ್ತದೆ. ಇದರಿಂದ ಹಳೆಯ ಚಾರ್ಜರ್​ಗಳು ಎಲೆಕ್ಟ್ರಿಕ್ ತ್ಯಾಜ್ಯವಾಗಿ ಮೂಲೆಗುಂಪಾಗಿರುತ್ತದೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದೀಗ ಇಂತಹ ಇ-ತ್ಯಾಜವನ್ನು ತಡೆಗಟ್ಟುವುದರ ಜೊತೆಗೆ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೆಲ ಕಂಪೆನಿಗಳು ಸ್ಮಾರ್ಟ್​ಫೋನ್ ಜೊತೆ ಚಾರ್ಜರ್​ ಅನ್ನು ಉಚಿತವಾಗಿ ನೀಡುತ್ತಿಲ್ಲ. ಒಂದು ವೇಳೆ ಏಕ ಸ್ವರೂಪದ ಚಾರ್ಜರ್ ನಿಯಮ ಜಾರಿದರೆ ನೀವು ಯಾವುದೇ ಸ್ಮಾರ್ಟ್​ಫೋನ್ ಅಥವಾ ಟ್ಯಾಬ್ಲೆಟ್ ಖರೀದಿಸಿದರೂ ಒಂದೇ ಚಾರ್ಜರ್ ಬಳಸಬಹುದಾಗಿದೆ. ಇದರಿಂದ ಪ್ರತಿ ಬಾರಿ ಚಾರ್ಜರ್ ಖರೀದಿಸುವ ಗ್ರಾಹಕರ ಮೇಲಿನ ಹೊರೆ ಕೂಡ ಕಡಿಮೆಯಾಗುತ್ತದೆ.

ಹಲವು ದೇಶಗಳಲ್ಲಿದೆ ಚಾರ್ಜರ್ ನಿಯಮ:
ಈಗಾಗಲೇ ಏಕಸ್ವರೂಪದ ಚಾರ್ಜರ್ ಪಿನ್ ನಿಯಮಗಳನ್ನು ಹಲವು ದೇಶಗಳಲ್ಲಿ ಜಾರಿಗೆ ತರಲಾಗಿದೆ. ಅದರಲ್ಲೂ ಇತ್ತೀಚೆಗೆ, ಯುರೋಪಿಯನ್ ಯೂನಿಯನ್ ದೇಶಗಳು 2024 ರ ವೇಳೆಗೆ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ USB-C ಪೋರ್ಟ್ ಸಾಮಾನ್ಯ ಚಾರ್ಜಿಂಗ್ ಮಾನದಂಡವನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದೆ. ಅಂದರೆ ಯುರೋಪಿಯನ್ ದೇಶಗಳಲ್ಲಿ ಈಗಾಗಲೇ ಸ್ಮಾರ್ಟ್​ಫೋನ್ ಸೇರಿದಂತೆ ಸಣ್ಣ ಎಲೆಕ್ಟ್ರಾನಿಕ್ ಡೈವಿಸ್​ಗಳಿಗೆ ಒಂದೇ ಮಾದರಿಯ ಚಾರ್ಜರ್ ಪಿನ್ ಪೋರ್ಟ್ ನೀಡಲಾಗುತ್ತಿದೆ. ಹಾಗೆಯೇ ಇಂತಹದ್ದೇ ನಿಯಮ ಅಮೆರಿಕದಲ್ಲೂ ಇದೆ. ಇದೇ ಮಾದರಿಯಲ್ಲೇ ಇದೀಗ ಭಾರತ ಕೂಡ ಡಿವೈಸ್​ಗಳಿಗೆ ಒಂದೇ ಮಾದರಿಯ ಪಿನ್ ಪೋರ್ಟ್ ನೀಡುವಂತೆ ಕಂಪೆನಿಗಳಿಗೆ ಸೂಚಿಸಲು ಮುಂದಾಗಿದೆ.

ಕಂಪೆನಿಗಳು ಯುರೋಪ್ ಮತ್ತು ಯುಎಸ್‌ಎನಲ್ಲಿ ಈ ರೀತಿಯ ಸೇವೆ ನೀಡುವುದಾದರೆ, ಭಾರತದಲ್ಲಿ ಏಕೆ ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ?. ಇದೇ ಮಾನದಂಡವನ್ನು ಮುಂದಿಟ್ಟು ಭಾರತದಲ್ಲೂ ಏಕರೂಪದ ಚಾರ್ಜರ್​ ಪಿನ್ ಪೋರ್ಟ್​ಗಳನ್ನು ಅಳವಡಿಸಲು ಕಂಪೆನಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಕಂಪೆನಿಗಳು ಸಮ್ಮತಿ ಸೂಚಿಸಿದರೆ ಮುಂಬರುವ ದಿನಗಳಲ್ಲಿ ಭಾರತದಲ್ಲೂ ಏಕರೂಪ ಚಾರ್ಜರ್ ಪಿನ್ ಸ್ಮಾರ್ಟ್​ಫೋನ್-ಟ್ಯಾಬ್ಲೆಟ್​ಗಳು ಬಿಡುಗಡೆಯಾಗಲಿದೆ.

 

Published On - 4:22 pm, Wed, 10 August 22