ನವದೆಹಲಿ, ಮೇ 20: ವಿಶ್ವದ ಅಗ್ರಮಾನ್ಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿ ಎನಿಸಿರುವ ಓಪನ್ಎಐ ಸಂಸ್ಥೆ (OpenAI) ಕೆಲ ವಾರಗಳ ಹಿಂದೆ ಚಾಟ್ಜಿಪಿಟಿ-4ಒ (GPT- 4o) ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇಲ್ಲಿ ಒ ಎಂದರೆ ಓಪನ್ಎಐನ ಓಮ್ನಿ ತಂಡ. ಈ ಓಮ್ನಿ ತಂಡದಿಂದ ಚಾಟ್ಜಿಪಿಟಿ-4ನ ಹೊಸ ಸುಧಾರಿತ ಅವತಾರ (model) ರೂಪಿಸಲಾಗಿದೆ. ಹೀಗಾಗಿ, ಇದಕ್ಕೆ 4ಒ ಎಂದು ಹೆಸರಿಡಲಾಗಿದೆ. ಈ ಓಮ್ನಿ ಟೀಮ್ನ ಪ್ರಮುಖ ವ್ಯಕ್ತಿಗಳಲ್ಲಿ ಭಾರತ ಮೂಲದ ಪ್ರಫುಲ್ಲಾ ಧರಿವಾಲ್ (Prafulla Dariwal) ಅವರಿದ್ದಾರೆ. ಚಾಟ್ಜಿಪಿಟಿ-4ಒ ಅನ್ನು ಬಿಡುಗಡೆ ಮಾಡುವ ವೇಳೆ ಸ್ಯಾಮ್ ಆಲ್ಟ್ಮ್ಯಾನ್ ಅವರು ಪ್ರಫುಲ್ಲಾರ ಹೆಸರು ಪ್ರಸ್ತಾಪಿಸಿದ್ದರು.
ಪ್ರಫುಲ್ಲಾ ಧರಿವಾಲ ಅವರ ಪ್ರತಿಭೆ, ದೃಷ್ಟಿಕೋನ, ಹಾಗೂ ದೀರ್ಘಕಾಲದ ಅವರ ಬದ್ಧತೆ ಇಲ್ಲದೇ ಹೋಗಿದ್ದರೆ ಜಿಪಿಟಿ-4ಒ ಬೆಳಕು ಕಾಣುತ್ತಿರಲಿಲ್ಲ. ನಾವು ಕಂಪ್ಯೂಟರ್ ಅನ್ನು ಬಳಸುವ ರೀತಿಯಲ್ಲೇ ಇದು ಹೊಸ ಕ್ರಾಂತಿ ಸೃಷ್ಟಿಸುತ್ತದೆ ಎಂದು ಸ್ಯಾಮ್ ಆಲ್ಟ್ಮ್ಯಾನ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: AI ಆತಂಕ ಬೇಡ, ಅರ್ಥ ಮಾಡಿಕೊಳ್ಳಿ: ಭಾರತದ ಯುವ ಟೆಕ್ಕಿಗಳಿಗೆ ಸುಂದರ ಸಲಹೆ ನೀಡಿದ ಪಿಚೈ!
ಪ್ರಫುಲ್ಲಾ ಧರಿವಾಲ್ ಅವರೂ ಜಿಪಿಟಿ 4ಒ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇದು ಓಮ್ನಿ ಟೀಮ್ನಿಂದ ಹೊರತರಲಾಗಿರುವ ಮೊದಲ ಮಾಡಲ್ ಎಂದಿದ್ದಾರೆ.
ಸ್ಯಾಮ್ ಆಲ್ಟ್ಮ್ಯಾನ್ ಮಾಡಿದ ಎಕ್ಸ್ ಪೋಸ್ಟ್
GPT-4o would not have happened without the vision, talent, conviction, and determination of @prafdhar over a long period of time. that (along with the work of many others) led to what i hope will turn out to be a revolution in how we use computers. https://t.co/f3TdQT03b0
— Sam Altman (@sama) May 15, 2024
ಪುಣೆಯವರಾದ ಪ್ರಫುಲ್ಲಾ ಧರಿವಾಲ 2009ರಲ್ಲಿ ನ್ಯಾಷನಲ್ ಟ್ಯಾಲಂಟ್ ಸರ್ಚ್ ಸ್ಕಾಲರ್ಶಿಪ್ ಯೋಜನೆಯಲ್ಲಿ ಗೆಲುವು ಸಾಧಿಸಿದ್ದರಲ್ಲದೇ ಚೀನಾದಲ್ಲಿ ನಡೆದ ಇಂಟರ್ನ್ಯಾಷನಲ್ ಆಸ್ಟ್ರಾನಮಿ ಒಲಿಂಪಿಯಾಡ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು.
ಇದನ್ನೂ ಓದಿ: ಬ್ರಿಟನ್ ದೊರೆ ಚಾರ್ಲ್ಸ್ಗಿಂತಲೂ ಹೆಚ್ಚು ಶ್ರೀಮಂತರಾದ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕುಟುಂಬ
ಅಮೆರಿಕದ ಪ್ರತಿಷ್ಠಿತ ಎಂಐಟಿಯಲ್ಲಿ 2017ರಲ್ಲಿ ಪದವಿ ಪಡೆದಿದ್ದಾರೆ. ಅದಕ್ಕೆ ಮುನ್ನವೇ 2016ರಲ್ಲಿ ಓಪನ್ಎಐ ಸಂಸ್ಥೆ ಪ್ರಫುಲ್ಲಾರನ್ನು ರಿಸರ್ಚ್ ಇಂಟರ್ನ್ ಆಗಿ ಸೇರಿಸಿಕೊಂಡಿತು. ಹಂತ ಹಂತರವಾಗಿ ಮೇಲೇರಿದ ಪ್ರಫುಲ್ಲಾ ಈಗ ಓಪನ್ಎಐನ ಕೋರ್ ಟೀಮ್ನ ಭಾಗವಾಗಿದ್ದಾರೆ. ಜಿಪಿಟಿ 4ಒ ಅಭಿವೃದ್ಧಿಯಲ್ಲಿ ಮಾತ್ರವಲ್ಲದೇ DALL-E 2 ಎಂಬ ಇಮೇಜ್ ಸೃಷ್ಟಿಸುವ ಆ್ಯಪ್ ಇತ್ಯಾದಿ ಕೆಲ ಪ್ರಮುಖ ಸಾಧನಗಳ ಹಿಂದಿನ ಶಕ್ತಿ ಅವರಾಗಿದ್ದಾರೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ