AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್ ದೊರೆ ಚಾರ್ಲ್ಸ್​ಗಿಂತಲೂ ಹೆಚ್ಚು ಶ್ರೀಮಂತರಾದ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕುಟುಂಬ

Rishi Sunak, Akshata Murthy wealth surges: ಗೋಪಿ ಹಿಂದೂಜಾ ಮತ್ತವರ ಕುಟುಂಬವು ಬ್ರಿಟನ್ ದೇಶದ ಅತೀ ಶ್ರೀಮಂತ ಎಂಬ ದಾಖಲೆ ಮುಂದುವರಿಸಿದೆ. ಐಟಿವಿ ಬಿಡುಗಡೆ ಮಾಡಿದ ಪಟ್ಟಿ ಪ್ರಕಾರ ಕಿಂಗ್ ಚಾರ್ಲ್ಸ್ ಅವರಿಗಿಂತಲೂ ಪ್ರಧಾನಿ ರಿಷಿ ಸುನಕ್ ಕುಟುಂಬದ ಶ್ರೀಮಂತಿಕೆ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ರಿಷಿ ಸುನಕ್ ಮತ್ತವರ ಪತ್ನಿ ಅಕ್ಷತಾ ಮೂರ್ತಿ ಸಂಪತ್ತು ಬಹಳಷ್ಟು ಏರಿದೆ. ಇನ್ಫೋಸಿಸ್​ನಲ್ಲಿ ಅಕ್ಷತಾ ಮೂರ್ತಿ ಶೇ. 1ಕ್ಕಿಂತ ತುಸು ಹೆಚ್ಚು ಷೇರುಪಾಲು ಹೊಂದಿರುವ ಹಿನ್ನೆಲೆಯಲ್ಲಿ ಸಂಪತ್ತು ಹೆಚ್ಚಳವಾಗಿದೆ.

ಬ್ರಿಟನ್ ದೊರೆ ಚಾರ್ಲ್ಸ್​ಗಿಂತಲೂ ಹೆಚ್ಚು ಶ್ರೀಮಂತರಾದ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕುಟುಂಬ
ರಿಷಿ ಸುನಕ್ ದಂಪತಿ ಮತ್ತು ಕಿಂಗ್ ಚಾರ್ಲ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 19, 2024 | 2:06 PM

ಲಂಡನ್, ಮೇ 19: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರಿಬ್ಬರ ಸಂಪತ್ತು (Rishi Sunak, Akshata Murthy net assets) ಒಂದು ವರ್ಷದಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಕಿಂಗ್ ಚಾರ್ಲ್ಸ್ (UK Kink Charles) ಅವರಿಗಿಂತಲೂ ಹೆಚ್ಚು ಶ್ರೀಮಂತಿಕೆ ಹೊಂದಿದ್ದಾರೆ. ಬ್ರಿಟನ್ ದೇಶದಲ್ಲಿ ಸದ್ಯ ಆರ್ಥಿಕ ಪರಿಸ್ಥಿತಿ ಇನ್ನೂ ಡೋಲಾಯಮಾನವಾಗಿಯೇ ಇದೆ. ಅಲ್ಲಿನ ಬಿಲಿಯನೇರ್​ಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇಂಥ ಹೊತ್ತಿನಲ್ಲಿ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿಯ ಸಂಪತ್ತು ಕಳೆದ ಒಂದು ವರ್ಷದಲ್ಲಿ 1,291 ಕೋಟಿ ರೂನಷ್ಟು ಹೆಚ್ಚಳವಾಗಿದೆ. ಇದು ಅಲ್ಲಿನ ಜನರಿಗೆ ಅಚ್ಚರಿ ಮೂಡಿಸಿದೆ.

ಐಟಿವಿ ವಾಹಿನಿಯ ವರದಿ ಪ್ರಕಾರ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಅವರಿಬ್ಬರ ಸಂಪತ್ತು ವರ್ಷದ ಹಿಂದೆ 5,598 ಕೋಟಿ ರೂ ಇದ್ದದ್ದು ಈಗ 6,889 ಕೋಟಿ ರೂಗೆ (730 ಮಿಲಿಯನ್ ಪೌಂಡ್) ಏರಿದೆ. ಇದೇ ವೇಳೆ, ಯುನೈಟೆಡ್ ಕಿಂಗ್ಡಂನ ರಾಜ ಚಾರ್ಲಸ್ ಅವರ ಸಂಪತ್ತು ಒಂದು ವರ್ಷದಲ್ಲಿ ಕೇವಲ 100 ಕೋಟಿ ರೂನಷ್ಟು ಹೆಚ್ಚಾಗಿದೆ. ಸದ್ಯ ಕಿಂಗ್ ಚಾರ್ಲ್ಸ್ ಅವರ ಸಂಪತ್ತು 6,431 ಕೋಟಿ ರೂನಷ್ಟಿದೆ.

ಇದನ್ನೂ ಓದಿ: ಸ್ವಿಟ್ಜರ್​ಲೆಂಡ್​ನಲ್ಲಿರುವ ನೆಸ್ಲೆ ಇಂಡಿಯಾದ ಮಾತೃಸಂಸ್ಥೆಗೆ ರಾಯಲ್ಟಿ ಹೆಚ್ಚಳಕ್ಕೆ ಷೇರುದಾರರ ವಿರೋಧ; ಏನು ಕಾರಣ?

ರಿಷಿ ಸುನಕ್ ಆಸ್ತಿ ಇಷ್ಟೊಂದು ಏರಲು ಏನು ಕಾರಣ?

ರಿಷಿ ಸುನಕ್ ಆಸ್ತಿ ಇಷ್ಟೊಂದು ಏರಿಕೆ ಆಗಲು ಅವರ ಪತ್ನಿ ಅಕ್ಷತಾ ಮೂರ್ತಿ ಕಾರಣ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮಗಳಾದ ಅಕ್ಷತಾ ಮೂರ್ತಿ ಇನ್ಫೋಸಿಸ್​ನಲ್ಲಿ ಶೇ. 1.07ರಷ್ಟು ಷೇರು ಪಾಲು ಹೊಂದಿದ್ದಾರೆ. ಸುಮಾರು 3.9 ಕೋಟಿ ಷೇರುಗಳನ್ನು ಅವರು ಹೊಂದಿದ್ದಾರೆ. ಇದರಿಂದ ಬರುವ ಡಿವಿಡೆಂಡ್​ಗಳ ಮೊತ್ತವೇ ಕೋಟ್ಯಂತರ ರೂನಷ್ಟಿದೆ. ಇನ್ಫೋಸಿಸ್ ಈ ವರ್ಷ ಪ್ರತೀ ಷೇರಿಗೆ 28 ರೂನಷ್ಟು ಲಾಭಾಂಶ ಅಥವಾ ಡಿವಿಡೆಂಡ್ ಪ್ರಕಟಿಸಿದೆ. ಇದು ಅಕ್ಷತಾ ಮೂರ್ತಿ ಆದಾಯದಲ್ಲಿ ಹೆಚ್ಚಳವಾಗಲು ಕಾರಣ.

ಇದನ್ನೂ ಓದಿ: ಮೇ 10ರ ವಾರದಲ್ಲಿ ಭಾರತದ ಫಾರೆಕ್ಸ್ ನಿಧಿ ಎರಡೂವರೆ ಬಿಲಿಯನ್ ಡಾಲರ್​ನಷ್ಟು ಏರಿಕೆ

ಬ್ರಿಟನ್ ಬಿಲಿಯನೇರ್​ಗಳ ಸಂಖ್ಯೆ ಇಳಿಮುಖ

ಭಾರತ ಮೊದಲಾದ ದೇಶಗಳಲ್ಲಿ ಬಿಲಿಯನೇರ್​ಗಳ ಸಂಖ್ಯೆ ಹೆಚ್ಚುತ್ತಿದ್ದರೆ ಬ್ರಿಟನ್​ನಲ್ಲಿ ಕಡಿಮೆ ಆಗುತ್ತಿದೆ. ಬ್ರಿಟನ್​ನಲ್ಲಿ 2022ರಲ್ಲಿ 177 ಇದ್ದ ಕುಬೇರರ ಸಂಖ್ಯೆ ಈಗ 165ಕ್ಕೆ ಇಳಿದಿದೆ. ಕುತೂಹಲ ಎಂದರೆ ಬ್ರಿಟನ್​ನ ಅತಿ ಶ್ರೀಮಂತ ವ್ಯಕ್ತಿ ಎಂದರೆ ಭಾರತ ಮೂಲದ ಗೋಪಿ ಹಿಂದೂಜಾ ಮತ್ತವರ ಕುಟುಂಬ. ಇವರ ಬಳಿಕ 37.2 ಬಿಲಿಯನ್ ಪೌಂಡ್ ಸಂಪತ್ತು ಇದೆ. ಈ ದೇಶದ 350 ಅತಿ ಶ್ರೀಮಂತರ ಬಳಿ ಒಟ್ಟು ಇರುವ ಸಂಪತ್ತು 800 ಬಿಲಿಯನ್ ಪೌಂಡ್ ಸಮೀಪ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Sun, 19 May 24

ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?