ಸ್ವಿಟ್ಜರ್​ಲೆಂಡ್​ನಲ್ಲಿರುವ ನೆಸ್ಲೆ ಇಂಡಿಯಾದ ಮಾತೃಸಂಸ್ಥೆಗೆ ರಾಯಲ್ಟಿ ಹೆಚ್ಚಳಕ್ಕೆ ಷೇರುದಾರರ ವಿರೋಧ; ಏನು ಕಾರಣ?

Nestle India Shareholders Reject Proposal to Hike Royalty to Parent company: ಸ್ವಿಟ್ಜರ್​ಲೆಂಡ್​ನಲ್ಲಿರುವ ತನ್ನ ಮಾತೃಸಂಸ್ಥೆಗೆ ನೀಡಲಾಗುತ್ತಿರುವ ರಾಯಲ್ಟಿ ಹಣವನ್ನು ಹೆಚ್ಚಿಸುವ ಪ್ರಸ್ತಾಪಕ್ಕೆ ನೆಸ್ಲೆ ಇಂಡಿಯಾದ ಷೇರುದಾರರು ತಿರಸ್ಕರಿಸಿದ್ದಾರೆ. ಸದ್ಯ ನೀಡಲಾಗುತ್ತಿರುವ ಶೇ. 4.5ರಷ್ಟು ರಾಯಧನವನ್ನು ಶೇ. 5.25ಕ್ಕೆ ಹೆಚ್ಚಿಸುವ ನಿರ್ಣಯವನ್ನು ಷೇರುದಾರರ ಮುಂದಿಡಲಾಗಿತ್ತು. ಶೇ. 50ಕ್ಕಿಂತ ಹೆಚ್ಚು ಷೇರುದಾರರು ಈ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದಾರೆ. ಮೇ 17ರಂದು ಇ ವೋಟಿಂಗ್ ನಡೆಸಲಾಗಿತ್ತು.

ಸ್ವಿಟ್ಜರ್​ಲೆಂಡ್​ನಲ್ಲಿರುವ ನೆಸ್ಲೆ ಇಂಡಿಯಾದ ಮಾತೃಸಂಸ್ಥೆಗೆ ರಾಯಲ್ಟಿ ಹೆಚ್ಚಳಕ್ಕೆ ಷೇರುದಾರರ ವಿರೋಧ; ಏನು ಕಾರಣ?
ನೆಸ್ಲೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2024 | 12:41 PM

ನವದೆಹಲಿ, ಮೇ 19: ನೆಸ್ಲೆ ಇಂಡಿಯಾ ತನ್ನ ಮಾತೃಸಂಸ್ಥೆಯಾದ ನೆಸ್ಲೆ ಸಂಸ್ಥೆಗೆ (Nestle S.A.) ನೀಡುವ ರಾಯಲ್ಟಿ ಹಣವನ್ನು ಹೆಚ್ಚಿಸುವ ಪ್ರಸ್ತಾವವನ್ನು ಷೇರುದಾರರು ತಿರಸ್ಕರಿಸಿದ್ದಾರೆ. ನೆಸ್ಲೆ ಸಂಸ್ಥೆ ಸ್ವಿಟ್ಜರ್​ಲೆಂಡ್ ಮೂಲದ್ದು. ಭಾರತದ ಬಿಸಿನೆಸ್ ನೋಡಿಕೊಳ್ಳುವ ನೆಸ್ಲೆ ಇಂಡಿಯಾ ಸಂಸ್ಥೆ ತನ್ನ ನಿವ್ವಳ ಮಾರಾಟದಲ್ಲಿ (Net Sales) ಶೇ. 4.5ರಷ್ಟು ರಾಯಲ್ಟಿ (Royalty money) ನೀಡುತ್ತಿದೆ. ಈ ಮೊತ್ತವನ್ನು ಹಂತ ಹಂತವಾಗಿ ಶೇ. 5.25ಕ್ಕೆ ಹೆಚ್ಚಿಸಲು ನೆಸ್ಲೆ ಇಂಡಿಯಾದ ಮಂಡಳಿ ಪ್ರಸ್ತಾಪಿಸಿದೆ. ರಾಯಲ್ಟಿ ಹಣವನ್ನು ದಿಢೀರ್ ಆಗಿ ಹೆಚ್ಚಿಸದೆ ವರ್ಷಕ್ಕೆ 15 ಪ್ರತಿಶತದಂತೆ ಐದು ವರ್ಷ ಕಾಲ ಹೆಚ್ಚಿಸುವ ಪ್ರಸ್ತಾಪವನ್ನು ಷೇರುದಾರರ ಮುಂದಿಡಲಾಗಿತ್ತು. ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಸಲ್ಲಿಸಿರುವ ಮಾಹಿತಿ ಪ್ರಕಾರ ಈ ನಿರ್ಣಯದ ಮೇಲೆ ಮೇ 17ರಂದು ನಡೆದ ಇವೋಟಿಂಗ್​ನಲ್ಲಿ ಶೇ. 57.17ರಷ್ಟು ಷೇರುದಾರರು ಪ್ರಸ್ತಾಪದ ವಿರುದ್ಧ ಮತ ಚಲಾಯಿಸಿದ್ದಾರೆ. ಶೇ. 21ರಷ್ಟು ಷೇರುಪಾಲು ಹೊಂದಿರುವ ಶೇ. 71ರಷ್ಟು ದೊಡ್ಡ ಹೂಡಿಕೆದಾರರು ಈ ಪ್ರಸ್ತಾಪದ ವಿರುದ್ಧ ವೋಟಿಂಗ್ ಮಾಡಿದ್ದಾರೆ.

ನೆಸ್ಲೆ ಇಂಡಿಯಾ ಸಂಸ್ಥೆಯಲ್ಲಿ ಮಾತೃಸಂಸ್ಥೆಯಾದ ನೆಸ್ಲೆ ಎಸ್.ಎ. ಶೇ. 34.28ರಷ್ಟು ಷೇರುಪಾಲು ಹೊಂದಿದೆ. ಮ್ಯಾಗಿ ಎಂಟರ್ಪ್ರೈಸಸ್ ಶೇ. 28.48ರಷ್ಟು ಷೇರು ಪಾಲು ಹೊಂದಿದೆ. ಎರಡೂ ಕೂಡ ಪ್ರೊಮೋಟರ್ಸ್ ಸಂಸ್ಥೆ. ಹೀಗಾಗಿ, ಮಾಲೀಕರ ಒಟ್ಟಾರೆ ಷೇರುಪಾಲು ಶೇ. 62.76ರಷ್ಟಿದೆ. ದೊಡ್ಡ ಹೂಡಿಕೆದಾರರ ಬಳಿ ಶೇ. 21ರಷ್ಟು ಷೇರು ಪಾಲಿದೆ. ಇನ್ನುಳಿದ ಶೇ. 16ರಷ್ಟು ಷೇರುಪಾಲು ರೀಟೇಲ್ ಮತ್ತಿತರ ಹೂಡಿಕೆದಾರರಿಗೆ ಸೇರಿದೆ.

ಇದನ್ನೂ ಓದಿ: ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನಕ್ಕೆ ಷೇರುದಾರರ ಸಮ್ಮತಿ

ನೆಸ್ಲೆ ಇಂಡಿಯಾ ನೀಡುವ ರಾಯಧನ ಹೆಚ್ಚಳವು ರಿಲೇಟೆಡ್ ಪಾರ್ಟಿ ವಹಿವಾಟು ಎಂದು ಪರಿಗಣಿಸಲಾಗುತ್ತದೆ. ಈ ಸಂಬಂಧ ವೋಟಿಂಗ್ ನಡೆಯುವಾಗ ಕಂಟ್ರೋಲಿಂಗ್ ಅಥವಾ ನಿಯಂತ್ರಕ ಷೇರುದಾರರು ವೋಟಿಂಗ್ ನಡೆಸುವಂತಿಲ್ಲ. ಹೀಗಾಗಿ, ನೆಸ್ಲೆ ಎಸ್​.ಎ. ಸಂಸ್ಥೆ ಈ ವೋಟಿಂಗ್​ನಲ್ಲಿ ಭಾಗವಹಿಸಿರಲಿಲ್ಲ. ಇನ್ನುಳಿದ ಷೇರುದಾರರ ವೋಟಿಂಗ್​ನಲ್ಲಿ ಅರ್ಧಕ್ಕಿಂತ ಹೆಚ್ಚು ಷೇರುದಾರರು ನಿರ್ಣಯ ತಿರಸ್ಕರಿಸಿದ್ದಾರೆ.

ಇಲ್ಲಿ ಕಂಟ್ರೋಲಿಂಗ್ ಷೇರ್​ಹೋಲ್ಡರ್ ಎಂದರೆ ಶೇ. 30ಕ್ಕಿಂತ ಹೆಚ್ಚು ಷೇರುಪಾಲು ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆಯಾಗಿರುತ್ತದೆ.

ರಾಯಧಾನ ಹೆಚ್ಚಳಕ್ಕೆ ಯಾಕೆ ವಿರೋಧ?

ನೆಸ್ಲೆ ಇಂಡಿಯಾದಿಂದ ಅದರ ಮಾತೃಸಂಸ್ಥೆಯಾದ ನೆಸ್ಲೆ ಎಸ್.ಎ.ಗೆ ನೀಡಲಾಗುವ ರಾಯಲ್ಟಿ ಹಣ ಹೆಚ್ಚಾಗಬೇಕು ಎಂದು ಶಿಫಾರಸು ನೀಡಿದ್ದು ಮೆಕಿನ್ಸೀ ಅಂಡ್ ಕಂಪನಿ ಎಂಬ ಕನ್ಸಲ್ಟೆಂಟ್ ಸಂಸ್ಥೆ. ಆದರೆ, ಯೂರೋಪ್​ನ ಎರಡು ಪ್ರಮುಖ ಇನ್ವೆಸ್ಟ್​ಮೆಂಟ್ ಬ್ಯಾಂಕ್​ಗಳು ಈ ನಿರ್ಧಾರವನ್ನು ವಿರೋಧಿಸಿವೆ.

ಇದನ್ನೂ ಓದಿ: ಸಮಾಜವಾದಿ ಸೋಗಿನಲ್ಲಿ 4 ವರ್ಷ ಕಾಲ ಆದಾಯ ತೆರಿಗೆಯನ್ನು ಶೇ 97.5 ಕ್ಕೆ ಏರಿಸಿದ್ದ ಪ್ರಧಾನಿ ಇಂದಿರಾ! ಏನಾಯ್ತು ಆಗ?

ಮಾತೃಸಂಸ್ಥೆಯಿಂದ ಆರ್ ಅಂಡ್ ಡಿಗೆ ಆಗುತ್ತಿರುವ ವೆಚ್ಚವು ರಾಯಲ್ಟಿ ಹೆಚ್ಚಿಸುವಷ್ಟು ಇಲ್ಲ ಎಂಬುದು ಒಂದು ಕಾರಣವಾಗಿದೆ. ಹಾಗೆಯೇ, ನಿವ್ವಳ ಆದಾಯದಲ್ಲಿ ರಾಯಲ್ಟಿ ಕೊಡುವ ಬದಲು ನಿವ್ವಳ ಲಾಭದಲ್ಲಿ ರಾಯಲ್ಟಿ ಕೊಡುತ್ತಿರುವುದೂ ಸರಿಯಲ್ಲ. ಇದು ನೆಸ್ಲೆ ಇಂಡಿಯಾದ ಷೇರುದಾರರಿಗೆ ದ್ರೋಹ ಮಾಡಿದಂತಾಗುತ್ತದೆ ಎಂಬುದು ಇನ್ನೊಂದು ಅಭಿಪ್ರಾಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ