ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನಕ್ಕೆ ಷೇರುದಾರರ ಸಮ್ಮತಿ

IDFC and IDFC First Bank Merger proposal: ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ವಿಲೀನ ಪ್ರಸ್ತಾವಕ್ಕೆ ಷೇರುದಾರರು ಸಮ್ಮತಿ ನೀಡಿದ್ದಾರೆ. ಎನ್​ಸಿಎಲ್​ಟಿ ಮೊನ್ನೆ (ಮೇ 17) ನಡೆಸಿದ ಇವೋಟಿಂಗ್​ನಲ್ಲಿ ಶೇ. 99.95ರಷ್ಟು ಷೇರುದಾರರು ಮರ್ಜ್ ಸ್ಕೀಮ್​ಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿದೆ. ಈ ಪ್ರಕ್ರಿಯೆಯಲ್ಲಿ ಮೊದಲಿಗೆ ಐಡಿಎಫ್​ಸಿ ಜೊತೆ ಐಡಿಎಫ್​ಸಿ ಐಎಚ್​ಎಸ್​ಸಿ ವಿಲೀನಗೊಳ್ಳಲಿದೆ. ಅದಾದ ಬಳಿಕ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಜೊತೆ ಐಡಿಎಫ್​ಸಿ ವಿಲೀನಗೊಳ್ಳುತ್ತದೆ. ಐಡಿಎಫ್​ಸಿಯ ಷೇರುದಾರರಿಗೆ ಪ್ರತೀ 100 ಷೇರಿಗೆ 155 ಬ್ಯಾಂಕ್ ಷೇರು ಸಿಗುತ್ತದೆ.

ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನಕ್ಕೆ ಷೇರುದಾರರ ಸಮ್ಮತಿ
ಐಡಿಎಫ್​ಸಿ ಫಸ್ಟ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2024 | 10:52 AM

ನವದೆಹಲಿ, ಮೇ 19: ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​ಗಳು ವಿಲೀನಗೊಂಡ ರೀತಿಯಲ್ಲೇ ಎರಡು ಐಡಿಎಫ್​ಸಿ ಸಂಸ್ಥೆಗಳು ಸೇರಲಿವೆ. ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನಗೊಳಿಸುವ ಪ್ರಸ್ತಾವಕ್ಕೆ (IDFC First Bank merger proposal) ಷೇರುದಾರರು ಸಮ್ಮತಿಸಿದ್ದಾರೆ. ಕಾನೂನು ಪ್ರಕ್ರಿಯೆಯಾಗಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಟಿ) ಮೇ 17ರಂದು ವಿಡಿಯೋ ಕಾನ್ಫರೆನ್ಸ್ ಮತ್ತಿತರ ಆನ್ಲೈನ್ ಮೂಲಕ ಷೇರುದಾರರು ಹಾಗು ಎಲ್ಲಾ ಹಕ್ಕುದಾರರ ಸಭೆ ನಡೆಸಿತು. ಈ ವೇಳೆ ವಿಲೀನ ಪ್ರಸ್ತಾವಕ್ಕೆ ಹೆಚ್ಚೂಕಡಿಮೆ ನೂರಕ್ಕೆ ನೂರರಷ್ಟು ಅನುಮೋದನೆ ಸಿಕ್ಕಿದೆ. ಇದರೊಂದಿಗೆ ಐಡಿಎಫ್​ಸಿ ಸಂಸ್ಥೆ ತನ್ನ ಅಂಗಸಂಸ್ಥೆಯಾದ ಐಡಿಎಫ್​ಸಿ ಬ್ಯಾಂಕ್​ನೊಂದಿಗೆ ವಿಲೀನವಾಗಲಿದೆ.

‘ವಿಲೀನಗೊಳಿಸುವ ಈ ಯೋಜನೆಗೆ ಒಪ್ಪಿಗೆ ಬೇಡುವ ನಿರ್ಣಯಕ್ಕೆ ಶೇ. 99.95ರಷ್ಟು ಬಹುಮತದೊಂದಿಗೆ ಈಕ್ವಿಟಿ ಷೇರುದಾರರು ಒಪ್ಪಿಗೆ ಕೊಟ್ಟಿದ್ದಾರೆ’ ಎಂದು ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಆಡಳಿತ ಮಂಡಳಿ ತಿಳಿಸಿದೆ.

ಸಭೆಯಲ್ಲಿ ಇ-ವೋಟಿಂಗ್ ಮೂಲಕ ನಿರ್ಣಯ ಪಾಸ್ ಆಗಿದೆ. ಬ್ಯಾಂಕ್​ನ ಶೇ. 75ಕ್ಕೂ ಮೌಲ್ಯದ ಷೇರುಗಳನ್ನು ಹೊಂದಿರುವ ಈಕ್ವಿಟಿ ಷೇರುದಾರು ಈ ವೋಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಇದರೊಂದಿಗೆ ಅಧಿಕೃತವಾಗಿ ಐಡಿಎಫ್​ಸಿ ಮತ್ತು ಐಡಿಎಫ್​ಸಿ ಬ್ಯಾಂಕ್ ವಿಲೀನಕ್ಕೆ ಒಪ್ಪಿಗೆ ಮುದ್ರೆ ಸಿಕ್ಕಂತಾಗಿದೆ. ನಾನ್ ಕನ್ವರ್ಟಿಬಲ್ ಡಿಬಂಚರ್ ಅಥವಾ ಎನ್​ಸಿಡಿಗಳನ್ನು ಹೊಂದಿರುವ ಹೂಡಿಕೆದಾರರೂ ಈ ಸ್ಕೀಮ್​ಗೆ ಸಮ್ಮತಿಸಿದ್ದಾರೆ.

ಇದನ್ನೂ ಓದಿ: Sundar Pichai: AI ಆತಂಕ ಬೇಡ, ಅರ್ಥ ಮಾಡಿಕೊಳ್ಳಿ: ಭಾರತದ ಯುವ ಟೆಕ್ಕಿಗಳಿಗೆ ಸುಂದರ ಸಲಹೆ ನೀಡಿದ ಪಿಚೈ!

ಐಡಿಎಫ್​ಸಿ ಸಂಸ್ಥೆ 1997ರಲ್ಲಿ ಆರಂಭವಾಗಿದೆ. 2015ರಲ್ಲಿ ಆರ್​ಬಿಐ ಲೈಸೆನ್ಸ್ ಪಡೆದು ಬ್ಯಾಂಕ್ ಸ್ಥಾಪಿಸಿದೆ. 2018ರಲ್ಲಿ ಕ್ಯಾಪಿಟಲ್ ಫಸ್ಟ್ ಎಂಬ ಬ್ಯಾಂಕೇತರ ಸಂಸ್ಥೆಯನ್ನು ಖರೀದಿಸಿತು. ಐಡಿಎಫ್​ಸಿ ಬ್ಯಾಂಕ್ ಹೆಸರು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಎಂದು ಬದಲಾಯಿತು.

ಈಗ ಬ್ಯಾಂಕ್ ಜೊತೆ ಮಾತೃ ಸಂಸ್ಥೆ ವಿಲೀನವಾಗುತ್ತಿದೆ. ಮೊದಲಿಗೆ ಐಡಿಎಫ್​ಸಿ ಜೊತೆ ಐಡಿಎಫ್​ಸಿ ಎಫ್​ಎಚ್​ಎಸ್​ಎಲ್ ಸೇರ್ಪಡೆ ಆಗುತ್ತದೆ. ಬಳಿಕ ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನವಾಗುತ್ತದೆ. ಅಂತಿಮವಾಗಿ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಉಳಿಯಲಿದೆ.

ಇದನ್ನೂ ಓದಿ: Forbes 30 Under 30 List: ಫೋರ್ಬ್ಸ್ ಪಟ್ಟಿಯಲ್ಲಿ ಮಿಂಚುತ್ತಿರುವ ಭಾರತೀಯ ಯುವ ಉದ್ಯಮಿಗಳು

ಎರಡು ಸಂಸ್ಥೆಗಳ ಷೇರುದಾರರಿಗೆ ಏನು ಸಿಗುತ್ತೆ?

ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಎರಡೂ ಕೂಡ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಸಂಸ್ಥೆಗಳಾಗಿವೆ. ಐಡಿಎಫ್​ಸಿ ಸಂಸ್ಥೆಯ ಷೇರುದಾರರಿಗೆ ಪ್ರತೀ 100 ಷೇರಿಗೆ ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ 155 ಷೇರುಗಳು ಸಿಗಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ