AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Forbes 30 Under 30 List: ಫೋರ್ಬ್ಸ್ ಪಟ್ಟಿಯಲ್ಲಿ ಮಿಂಚುತ್ತಿರುವ ಭಾರತೀಯ ಯುವ ಉದ್ಯಮಿಗಳು

Indians doninate Forbes list of Asia: ಕ್ರೀಡೆ, ಮನರಂಜನೆ, ಉದ್ಯಮ ಇತ್ಯಾದಿ ವಿಭಾಗಗಳಲ್ಲಿ ಏಷ್ಯಾದ 30 ವರ್ಷದೊಳಗಿನ 30 ಮಂದಿಯ ಫೋರ್ಬ್ಸ್ ಪಟ್ಟಿಗಳಲ್ಲಿ ಭಾರತೀಯ ಯುವಜನರು ವಿಜೃಂಬಿಸಿದ್ದಾರೆ. ಹಲವು ಪಟ್ಟಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹೆಸರು ಭಾರತೀಯರದ್ದೇ ಆಗಿದೆ. 18 ಮತ್ತು 19 ವರ್ಷದ ಭಾರತೀಯರೂ ಈ ಪಟ್ಟಿಯಲ್ಲಿದ್ದಾರೆ. ಬೆಂಗಳೂರಿನ ಹಲವು ಸ್ಟಾರ್ಟಪ್​ಗಳ ಸ್ಥಾಪಕರಿದ್ದಾರೆ. ಉದ್ಯಮ ಕ್ಷೇತ್ರಗಳಲ್ಲಿ ಸಂಚಲನ ಮೂಡಿಸಲು ಅಣಿಯಾಗಿರುವ ಈ ಯುವ ಸಮುದಾಯ ಭಾರತದ ಭವಿಷ್ಯದ ಉದ್ಯಮಪತಿಗಳಾಗಬಹುದು.

Forbes 30 Under 30 List: ಫೋರ್ಬ್ಸ್ ಪಟ್ಟಿಯಲ್ಲಿ ಮಿಂಚುತ್ತಿರುವ ಭಾರತೀಯ ಯುವ ಉದ್ಯಮಿಗಳು
ರಾಘವ್ ಅರೋರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2024 | 11:19 AM

Share

ನವದೆಹಲಿ, ಮೇ 17: ಭಾರತ ಆರ್ಥಿಕವಾಗಿ ಬೆಳೆಯಲು ಇಲ್ಲಿನ ಉದ್ಯಮಗಳು ಕಾರಣ. ಯುವಜನರ ಉದ್ಯಮಶೀಲತಾ ಮನೋಭಾವವು ಭಾರತದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಏರಿಸುತ್ತಿದೆ. ಫೋರ್ಬ್ಸ್​ನ 30 ವರ್ಷದೊಳಗಿನ ವಿವಿಧ ಏಷ್ಯನ್ ಸಾಧಕರ ಪಟ್ಟಿಗಳೇ (forbes list) ಇದಕ್ಕೆ ಸಾಕ್ಷಿಯಾಗಿವೆ. ಎಂಟರ್ಪ್ರೈಸ್ ಟೆಕ್ನಾಲಜಿಯಿಂದ ಹಿಡಿದು ಮ್ಯಾನುಫ್ಯಾಕ್ಚರಿಂಗ್, ಕನ್ಸೂಮರ್ ಟೆಕ್​ವರೆಗೆ ವಿವಿಧ ವಿಭಾಗಗಳ ಪಟ್ಟಿಯಲ್ಲಿ ಭಾರತೀಯ ಯುವ ಉದ್ಯಮಿಗಳ ಹೆಸರೇ ಹೆಚ್ಚು ತುಂಬಿವೆ. ಬೆಂಗಳೂರಿನ ಸ್ಟಾರ್ಟಪ್ ಸ್ಥಾಪಕರೂ ಇದರಲ್ಲಿದ್ದಾರೆ. ಪ್ರತೀ ಪಟ್ಟಿಯಲ್ಲೂ 30 ಸಂಸ್ಥೆಗಳು ಅಥವಾ ವ್ಯಕ್ತಿಗಳ ಹೆಸರನ್ನು ಫೋರ್ಬ್ಸ್ ಸೇರಿಸಿದೆ. ಇದರಲ್ಲಿ ಅರ್ಧ ಅಥವಾ ಅದಕ್ಕಿಂತ ಹೆಚ್ಚು ಭಾಗ ಭಾರತೀಯರೇ ಇದ್ದಾರೆ. ಅದೂ 30 ವರ್ಷದೊಳಗಿನ ಹುಡುಗರು ಇವರು. 22 ವರ್ಷದೊಳಗಿನ ಮೂವರು ಯುವಕರೂ ಈ ಪಟ್ಟಿಗಳಲ್ಲಿದ್ದಾರೆ. ಉದ್ಯಮ, ತಯಾರಿಕೆ, ಇಂಧನ, ಹಾಗೂ ಎಂಟರ್ಪ್ರೈಸಿಂಗ್ ಟೆಕ್ನಾಲಜಿ ವಿಭಾಗಗಳಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯರ ಹೆಸರು ಇಲ್ಲಿದೆ.

ಫೋರ್ಬ್ಸ್ ಅಂಡರ್ 30: ಉದ್ಯಮ, ತಯಾರಿಕೆ, ಇಂಧನ ಕ್ಷೇತ್ರ

  1. ರಾಘವ್ ಅರೋರಾ, 28 ವರ್ಷ: ಸ್ಟಾಟಿಕ್ (Statiq) ಸಹ-ಸಂಸ್ಥಾಪಕರು
  2. ಅಕ್ಷಿತ್ ಬನ್ಸಾಲ್, 29 ವರ್ಷ: ಸ್ಟಾಟಿಕ್ (Statiq) ಸಹ-ಸಂಸ್ಥಾಪಕರು
  3. ಆವನಿ ಅಗರ್ವಾಲ್, 29 ವರ್ಷ: ಸಿಕ್ಸ್​ಸೆನ್ಸ್ ಸಂಸ್ಥಾಪಕರು
  4. ಆಯುಷ್ ಆನಂದ್, 29 ವರ್ಷ: ಶಿಪ್ ಗ್ಲೋಬಲ್ ಎಕ್ಸ್​ಪ್ರೆಸ್ ಸಹ-ಸಂಸ್ಥಾಪಕರು
  5. ನಾರಾಯಣ್ ಲಾಲ್ ಗುರ್ಜರ್, 25 ವರ್ಷ: ಇಎಫ್ ಪಾಲಿಮರ್ ಕಂಪನಿಯ ಸಂಸ್ಥಾಪಕರು
  6. ಅಂಕಿತ್ ಜೈನ್, 26 ವರ್ಷ: ಇಎಫ್ ಪಾಲಿಮರ್ ಕಂಪನಿಯ ಸಂಸ್ಥಾಪಕರು
  7. ಚಿರಾಗ್ ಜೈನ್, 29 ವರ್ಷ: ಎಂಡ್ಯೂರ್​ಏರ್ ಸಿಸ್ಟಮ್ಸ್ ಕಂಪನಿಯ ಸಹ-ಸಂಸ್ಥಾಪಕರು
  8. ರಾಮಕೃಷ್ಣ ಮೇಂಟು, 26 ವರ್ಷ: ಎಂಡ್ಯೂರ್​ಏರ್ ಸಿಸ್ಟಮ್ಸ್ ಕಂಪನಿಯ ಸಹ-ಸಂಸ್ಥಾಪಕರು
  9. ರಾಹಿಲ್ ಗುಪ್ತಾ, 28 ವರ್ಷ: ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯ ಸಹ-ಸಂಸ್ಥಾಪಕರು
  10. ಅಂಕಿತ್ ಜೈಪುರಿಯಾ, 26 ವರ್ಷ: ZYOD ಕಂಪನಿಯ ಸಹ-ಸಂಸ್ಥಾಪಕರು
  11. ಅಂಕಿತ್ ಅಲೋಕ್ ಬಗಾರಿಯಾ, 28 ವರ್ಷ: ಲೂಪ್​ವರ್ಮ್ ಸಹ-ಸಂಸ್ಥಾಪಕರು
  12. ಅಭಿ ಗಾವ್ರಿ, 27 ವರ್ಷ: ಲೂಪ್​ವರ್ಮ್ ಸಹ-ಸಂಸ್ಥಾಪಕರು
  13. ಪ್ರಣವ್ ಮನಪುರಿಯಾ, 29 ವರ್ಷ: ಫ್ಲಕ್ಸ್ ಆಟೊ ಕಂಪನಿಯ ಸಹ-ಸಂಸ್ಥಾಪಕರು
  14. ಗೌತಮ್ ಮಹೇಶ್ವರನ್, 27 ವರ್ಷ: ರೇಸ್ ಎನರ್ಜಿ ಕಂಪನಿ ಸಹ-ಸಂಸ್ಥಾಪಕರು
  15. ಅರುಣ್ ಶ್ರೇಯಸ್, 28 ವರ್ಷ: ರೇಸ್ ಎನರ್ಜಿ ಕಂಪನಿ ಸಹ-ಸಂಸ್ಥಾಪಕರು
  16. ಕಾರ್ತಿಕೇಯನ್ ಆದಿಕೇಶವನ್, 28 ವರ್ಷ: ರಾಪ್​ಟೀ ಎನರ್ಜಿ ಕಂಪನಿ ಸಹ-ಸಂಸ್ಥಾಪಕರು
  17. ಪುನೀತ್ ಕುಮಾರ್, 27 ವರ್ಷ: ರಾಪ್​ಟೀ ಎನರ್ಜಿ ಕಂಪನಿ ಸಹ-ಸಂಸ್ಥಾಪಕರು
  18. ಕೀರ್ತಿವಾಸನ್ ರವಿ, 27 ವರ್ಷ: ರಾಪ್​ಟೀ ಎನರ್ಜಿ ಕಂಪನಿ ಸಹ-ಸಂಸ್ಥಾಪಕರು
  19. ದಿನೇಶ್ ರಾಮಕುಮಾರ್ ವೆಂಕಟಸ್ವಾಮಿ, 28 ವರ್ಷ: ರಾಪ್​ಟೀ ಎನರ್ಜಿ ಕಂಪನಿ ಸಹ-ಸಂಸ್ಥಾಪಕರು

ಇದನ್ನೂ ಓದಿ: ಈ ಹಣಕಾಸು ವರ್ಷದಲ್ಲೇ 4 ಟ್ರಿಲಿಯನ್ ಡಾಲರ್ ಆರ್ಥಿಕತೆ; ಶೀಘ್ರದಲ್ಲೇ ಜಪಾನ್ ಹಿಂದಿಕ್ಕಲಿದೆ ಭಾರತ: ಸಂಜೀವ್ ಸಾನ್ಯಾಲ್

ಫೋರ್ಬ್ಸ್ ಅಂಡರ್ 30: ಎಂಟರ್ಪ್ರೈಸ್ ಟೆಕ್ನಾಲಜಿ ವಿಭಾಗ

  1. ಕುನಾಲ್ ಅಗರ್ವಾಲ್, 27 ವರ್ಷ: ಕ್ರೆಡ್​ಫ್ಲೋ ಕಂಪನಿ ಸಹ-ಸಂಸ್ಥಾಕರು
  2. ಮುಕುಲ್ ಆನಂದ್, 26 ವರ್ಷ: ರೀಹುಕ್ ಡಾಟ್ ಎಐ ಕಂಪನಿಯ ಸಹ-ಸಂಸ್ಥಾಪಕರು
  3. ಗೌರವ್ ಪಿಯುಶ್, 26 ವರ್ಷ: ಬ್ಲಿಟ್ಜ್ ಕಂಪನಿ ಸಹ-ಸಂಸ್ಥಾಪಕರು
  4. ಯಶ್ ಶರ್ಮಾ, 27 ವರ್ಷ: ಬ್ಲಿಟ್ಜ್ ಕಂಪನಿ ಸಹ-ಸಂಸ್ಥಾಪಕರು
  5. ಮಯಂಕ್ ವರ್ಷನಿ, 29 ವರ್ಷ: ಬ್ಲಿಟ್ಜ್ ಕಂಪನಿ ಸಹ-ಸಂಸ್ಥಾಪಕರು
  6. ಅರ್ಚಿತ್ ಚೌಹಾಣ್, 27 ವರ್ಷ: ಕ್ರಿಬ್ ಕಂಪನಿ ಸಹ-ಸಂಸ್ಥಾಪಕರು
  7. ಸನ್ನಿ ಗರ್ಗ್, 26 ವರ್ಷ: ಕ್ರಿಬ್ ಕಂಪನಿ ಸಹ-ಸಂಸ್ಥಾಪಕರು
  8. ಶೇಫಾಲಿ ಜೈನ್, 26 ವರ್ಷ: ಕ್ರಿಬ್ ಕಂಪನಿ ಸಹ-ಸಂಸ್ಥಾಪಕರು
  9. ಆದಿತ್ಯ ದಾದಿಯಾ, 25 ವರ್ಷ: ಆಲ್​ರೈಟ್ ಕಂಪನಿಯ ಸಂಸ್ಥಾಪಕರು
  10. ಆಯುಶ್ ಪಾಠಕ್, 19 ವರ್ಷ: ಇಂಡ್ಯೂಸ್ಡ್ ಕಂಪನಿ ಸಹ-ಸಂಸ್ಥಾಪಕರು
  11. ಆರ್ಯನ್ ಶರ್ಮಾ, 18 ವರ್ಷ: ಇಂಡ್ಯೂಸ್ಡ್ ಕಂಪನಿ ಸಹ-ಸಂಸ್ಥಾಪಕರು.
  12. ರಿಷಭ್ ಜೈನ್, 27 ವರ್ಷ: ಲೋಕೇಲ್ ಡಾಟ್ ಎಐ ಕಂಪನಿ ಸಹ-ಸಂಸ್ಥಾಪಕರು
  13. ಆದಿತಿ ಸಿನ್ಹಾ, 28 ವರ್ಷ: ಲೋಕೇಲ್ ಡಾಟ್ ಎಐ ಕಂಪನಿ ಸಹ-ಸಂಸ್ಥಾಪಕರು
  14. ಹರ್ಷಿತ್ ಮಿಟ್ಟಲ್, 29 ವರ್ಷ: ಸಪ್ಲೈನೋಟ್ ಕಂಪನಿ ಸಹ-ಸಂಸ್ಥಾಪಕರು
  15. ಈಶ ಮಣಿದೀಪ್ ದಿಣ್ಣೆ, 21 ವರ್ಷ: GIGAML ಕಂಪನಿ ಸಹ-ಸಂಸ್ಥಾಪಕರು
  16. ವರುಣ್ ವುಮ್ಮಡಿ, 22 ವರ್ಷ: GIGAML ಕಂಪನಿ ಸಹ-ಸಂಸ್ಥಾಪಕರು
  17. ಅಂಕಿತ್ ಬನ್ಸಾಲ್, 29 ವರ್ಷ: ಶಾಪ್​ಫ್ಲೋ ಕಂಪನಿ ಸಹ-ಸಂಸ್ಥಾಪಕರು
  18. ಇಶಾನ್ ರಕ್ಷಿತ್, 29 ವರ್ಷ: ಶಾಪ್​ಫ್ಲೋ ಕಂಪನಿ ಸಹ-ಸಂಸ್ಥಾಪಕರು
  19. ಪ್ರಿಯ್ ರಂಜನ್, 27 ವರ್ಷ: ಶಾಪ್​ಫ್ಲೋ ಕಂಪನಿ ಸಹ-ಸಂಸ್ಥಾಪಕರು
  20. ಸಮರ್ಥ್​ವೀರ್ ಸಿದಾನ, 28 ವರ್ಷ: ಹೈರ್​ಕೋಶಂಟ್ ಕಂಪನಿ ಸಹ-ಸಂಸ್ಥಾಪಕರು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ