ತನ್ನ ಬಳಕೆದಾರರಿಗೆ ಕಾಲಕ್ಕೆ ತಕ್ಕಂತೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ (WhatsApp) ಮುಂದಿನ ದಿನಗಳಲ್ಲಿ ಸಾಲು ಸಾಲು ಹೊಸ ಫೀಚರ್ಗಳು ಬರಲು ಕ್ಯೂ ನಿಂತಿದೆ. ಇದಕ್ಕೆ ಪ್ರಮುಖವಾಗಿ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದು ಕಾರಣ. ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವಂತೆ ವಾಟ್ಸ್ಆ್ಯಪ್ನಲ್ಲಿ ಯಾರಿಗಾದರೂ ಮೆಸೇಜ್ (WhatsApp Message) ಕಳುಹಿಸಲು ಬಯಸಿದರೆ ಅವರ ನಂಬರ್ ಸೇವ್ ಮಾಡುವುದು ಅವಶ್ಯಕ. ಯಾಕಂದ್ರೆ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡದೇ ಆ ಸಂಖ್ಯೆಗೆ ಸಂದೇಶವನ್ನು ಕಳುಹಿಸಲು ವಾಟ್ಸ್ಆ್ಯಪ್ನಲ್ಲಿ ಯಾವುದೇ ನೇರ ಆಯ್ಕೆಗಳಿಲ್ಲ. ಆದರೆ, ಈ ಟ್ರಿಕ್ ಮೂಲಕ ನಂಬರ್ ಸೇವ್ ಮಾಡದೆ, ಬಳಕೆದಾರರು ಸಂಪರ್ಕವನ್ನು ಉಳಿಸದೆ ಯಾರೊಂದಿಗಾದರೂ ಚಾಟ್ (Chat) ಮಾಡಬಹುದು.
ಹೌದು, ವಾಸ್ತವವಾಗಿ ಯಾರಿಗಾದರೂ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕಿದ್ದರೆ, ಮೊದಲನೆಯ ಮಾನದಂಡ ಎಂದರೆ ಅವರು ಕೂಡ ವಾಟ್ಸ್ಆ್ಯಪ್ ಖಾತೆ ಹೊಂದಿರಬೇಕು. ಮೂಲತಃ ಅವರ ಫೋನ್ ಸಂಖ್ಯೆಯನ್ನು ನಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಂಡರಬೇಕು. ಇದು ಮೆಸೇಜ್ ಕಳಿಸುವ ತುಂಬಾ ಸುಲಭ ಮತ್ತು ಸರಳ ವಿಧಾನ. ಆದರೆ ಈ ಸರಳ ವಿಧಾನ ಕಠಿಣವಾಗುವುದು ಮತ್ತು ಕಾಂಟ್ಯಾಕ್ಟ್ನಲ್ಲಿ ಅನವಶ್ಯಕ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುವಂತೆ ಮಾಡುವುದು ಯಾವಾಗವೆಂದರೆ, ಯಾರಿಗೂ ಅಪರಿಚಿತ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಪರಿಚಿತವಾಗಿ ಯಾವುದೋ ಪ್ರಮುಖ ಮೆಸೇಜ್ ಒಂದನ್ನು ಕಳುಹಿಸಬೇಕು ಎಂದಾಗ. ಆಗ ಏನ ಮಾಡಬೇಕು.
ವ್ಯಕ್ತಿಯೊಬ್ಬರ ನಂಬರ್ ನಮಗೆ ಮುಂದೆಂದೂ ಅಗತ್ಯ ಬೀಳುವುದಿಲ್ಲ ಅಥವಾ ಅನಗತ್ಯ ಎಂದಾದರೆ, ಆ ಸಂಖ್ಯೆಯನ್ನು ಫೋನ್‌ನಲ್ಲಿ ಸೇವ್ ಮಾಡದೆಯೇ ಅವರಿಗೆ ಸಂದೇಶ ಕಳುಹಿಸಬಹುದು. ಇದು ತೀರಾ ಸುಲಭವಿದೆ.
ಇದಕ್ಕಾಗಿ ಮೊದಲು ನೀವು ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ (ಡೇಟಾ) ಆನ್ ಮಾಡಿ. ಅದರಲ್ಲಿರುವ ಬ್ರೌಸರ್ ಆ್ಯಪ್‌ನ (ಉದಾ. ಕ್ರೋಮ್) ಅಡ್ರೆಸ್ ಬಾರ್‌ನಲ್ಲಿ https://wa.me/91 ಅಂತ ಬರೆದು, ಬಳಿಕ ಆ ವ್ಯಕ್ತಿಯ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು (ಸ್ಪೇಸ್ ಇಲ್ಲದೆ) ದಾಖಲಿಸಿ.
ಇಷ್ಟಾಗಿ ಎಂಟರ್ ಕೊಟ್ಟ ನಂತರ ಅದು ನೇರವಾಗಿ ಫೋನ್‌ನಲ್ಲಿರುವ ವಾಟ್ಸ್ಆ್ಯಪ್‌ಗೆ ಸಂಪರ್ಕಗೊಳ್ಳುತ್ತದೆ ಮತ್ತು ಈ ನಂಬರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕೇ ಅಂತ ಕೇಳುತ್ತದೆ. ‘ಮೆಸೇಜ್’ ಎಂಬುದನ್ನು ಕ್ಲಿಕ್ ಮಾಡಿದರೆ ವಾಟ್ಸ್ಆ್ಯಪ್ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ಸಂದೇಶವನ್ನು ಅಲ್ಲೇ ಟೈಪ್ ಮಾಡಿ ಕಳುಹಿಸಬಹುದು ಇಲ್ಲವೇ ಯಾವುದೇ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಶೇರ್ ಮಾಡಬಹುದು.
ನಂಬರ್ ಸೇವ್ ಮಾಡದೆ ವಾಟ್ಸ್ಆ್ಯಪ್ ಗ್ರೂಪ್‌ಗೆ ಇನ್ವೈಟ್ ಮಾಡೊದು ಹೇಗೆ?
Vivo Y15s: ಬಜೆಟ್ ಪ್ರಿಯರು ಫುಲ್ ಶಾಕ್: ಅತಿ ಕಡಿಮೆ ಬೆಲೆಗೆ ವಿವೋದಿಂದ ಹೊಸ ಸ್ಮಾರ್ಟ್ಫೋನ್ ರಿಲೀಸ್