Google Maps: ಇಂಟರ್ನೆಟ್ ಇಲ್ಲದೇ ಗೂಗಲ್ ಮ್ಯಾಪ್ ಬಳಸಬಹುದು?: ಇಲ್ಲಿದೆ ನೋಡಿ ಟ್ರಿಕ್

ಗೂಗಲ್ ಮ್ಯಾಪ್ ಆಫ್ ಲೈನ್ ಫೀಚರ್ ಸಹಾಯದಿಂದಾಗಿ ನೀವು ಗೂಗಲ್ ಮ್ಯಾಪ್ ಅನ್ನು ಆಫ್ ಲೈನ್ ನಲ್ಲಿ ಬಳಸಬಹುದು. ಒಮ್ಮೆ ನೀವು ಮ್ಯಾಪ್ ಡೌನ್ ಲೋಡ್ ಮಾಡಿದ ನಂತರ ನೀವು ಅಂತರ್ಜಾಲದ ಸಹಾಯವಿಲ್ಲದೆ ದಾರಿಯ ಹುಡುಕಾಟ ನಡೆಸಬಹುದು ಮತ್ತು ಆಫ್ ಲೈನ್​​ನಲ್ಲಿ ಇದನ್ನು ಬಳಸಬಹುದು.

Google Maps: ಇಂಟರ್ನೆಟ್ ಇಲ್ಲದೇ ಗೂಗಲ್ ಮ್ಯಾಪ್ ಬಳಸಬಹುದು?: ಇಲ್ಲಿದೆ ನೋಡಿ ಟ್ರಿಕ್
Google Maps
Follow us
TV9 Web
| Updated By: Vinay Bhat

Updated on:Feb 19, 2022 | 2:46 PM

ಗೂಗಲ್ (Google) ನೀಡಿರುವ ಬಹುಮುಖ್ಯ ಸೇವೆಗಳಲ್ಲಿ ಮ್ಯಾಪ್ ಕೂಡ ಒಂದು. ನಮಗೆ ಪರಿಚಯ ಇರದ ಸ್ಥಳಗಳಿಗೆ ಗೂಗಲ್ ಮ್ಯಾಪ್ ಯಾವುದೇ ಅಡೆತಡೆ ಇಲ್ಲದೆ ಕರೆದೊಯ್ಯುತ್ತದೆ. ಹೊಸದಾಗಿ ದೊಡ್ಡ ದೊಡ್ಡ ಪಟ್ಟಣಗಳಿಗೆ ಭೇಟಿ ನೀಡಲಿ ಅಥವಾ ಗುರುತು ಪರಿಚಯವಿಲ್ಲದ ಊರಾಗಲಿ, ಗೂಗಲ್ ಮ್ಯಾಪ್ (Google Map) ಇದ್ದರೆ ಯಾವ ಜಾಗಕ್ಕೆ ಬೇಕಾದರೂ ತಲುಪಬಹುದು. ಆದರೆ ಒಂದು ವೇಳೆ ಬಳಕೆದಾರನ ಬಳಿ ಮೊಬೈಲ್ ಡಾಟಾ ಖಾಲಿಯಾಗಿದ್ದರೆ ಅಥವಾ ಸರಿಯಾದ ನೆಟ್ ವರ್ಕ್ ಲಭ್ಯವಿಲ್ಲದಿದ್ದರೆ ತೊಂದರೆಯಾಗುತ್ತದೆ. ಈಗ ಮಾಡುವುದಾದರೂ ಏನು? ಗೂಗಲ್ ಮ್ಯಾಪ್‌ ನೋಡಬೇಕಿತ್ತು, ಆದರೆ ಇಂಟರ್‌ನೆಟ್‌ (Internet) ಇಲ್ಲ ಎಂದು ಬೇಸರಿಸಬೇಡಿ, ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್‌ ಬಳಸಬಹುದು. ಅದು ಹೇಗೆಂದು ತಿಳಿಯಲು ಈ ಸ್ಟೋರಿಯನ್ನು ಓದಿ.

ಗೂಗಲ್ ಮ್ಯಾಪ್ ಆಫ್ ಲೈನ್ ಫೀಚರ್ ಸಹಾಯದಿಂದಾಗಿ ನೀವು ಗೂಗಲ್ ಮ್ಯಾಪ್ ಅನ್ನು ಆಫ್ ಲೈನ್ ನಲ್ಲಿ ಬಳಸಬಹುದು. ಒಮ್ಮೆ ನೀವು ಮ್ಯಾಪ್ ಡೌನ್ ಲೋಡ್ ಮಾಡಿದ ನಂತರ ನೀವು ಅಂತರ್ಜಾಲದ ಸಹಾಯವಿಲ್ಲದೆ ದಾರಿಯ ಹುಡುಕಾಟ ನಡೆಸಬಹುದು ಮತ್ತು ಆಫ್ ಲೈನ್​​ನಲ್ಲಿ ಇದನ್ನು ಬಳಸಬಹುದು.

ಇದಕ್ಕಾಗಿ ನೀವು ನಿಮ್ಮ ಆಂಡ್ರಾಯ್ಡ್ ಡಿವೈಸ್​​ನಲ್ಲಿ ಗೂಗಲ್ ಮ್ಯಾಪ್ ಆಪ್ ಅನ್ನು ತೆರೆಯಿರಿ. ನೀವು ತಲುಪಬೇಕಿರುವ ಸ್ಥಳವನ್ನು ಹುಡುಕಾಡಿ. ಡೈರೆಕ್ಷನ್ ಅನ್ನು ಟ್ಯಾಪ್ ಮಾಡಿ. ಅದು ನಿಮ್ಮ ಸ್ಕ್ರೀನಿನ ಕೆಳಭಾಗದ ಎಡದಲ್ಲಿರುತ್ತದೆ. ನೀವು ಯಾವ ರೀತಿ ಪ್ರಯಾಣ ಬೆಳೆಸಲು ಇಚ್ಛಿಸುತ್ತೀರಿ ಅದನ್ನು ಆಯ್ಕೆ ಮಾಡಿ. ನಂತರ ಬಿಳಿ ಬಾರ್ ಅನ್ನು ಟ್ಯಾಪ್ ಮಾಡಿ. ಇದು ಸ್ಕ್ರೀನಿನ ಕೆಳಭಾಗದಲ್ಲಿರುತ್ತದೆ. ಇದೀಗ ಸೇವ್ ಆಫ್ ಲೈನ್ ಅನ್ನು ಟ್ಯಾಪ್ ಮಾಡಿದರೆ ಆಯಿತು.

ಇನ್ನು ಇತ್ತೀಷೆಗಷ್ಟೆ ಗೂಗಲ್ ತನ್ನ ಮ್ಯಾಪ್ ಬಳಕೆದಾರರಿಗೆ ವಿಶೇಷ ಫೀಚರ್ ಒಂದನ್ನು ಪರಚಿಯಿಸಿತ್ತು. ಬಳಕೆದಾರರು ತಮ್ಮ ಮನೆಯ ನಿಖರ ವಿಳಾಸಗಳನ್ನು ಉಳಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುವಂತಹ ಹೊಸ ವೈಶಿಷ್ಟ್ಯವನ್ನು ಗೂಗಲ್ ಬಿಡುಗಡೆಗೊಳಿಸಿತ್ತು. ಇದರಿಂದ ತಮ್ಮ ಮನೆಯ ವಿಳಾಸಗಳನ್ನು ಸೇವ್ ಮಾಡುವಾಗ ಮತ್ತು ಶೇರ್ ಮಾಡುವಾಗ ‘ಪ್ಲಸ್ ಕೋಡ್​ಗಳನ್ನು’ ಸಾಮಾನ್ಯ ಬಳಕೆದಾರರು ಬಳಸಲು ಅನುಮತಿಸುತ್ತದೆ. ಈ ಪ್ಲಸ್ ಕೋಡ್​ಗಳ ಮೂಲಕ ನೀವು ನಿಮ್ಮ ಮನೆಯ ವಿಳಾಶಕ್ಕೆ ಕೋಡ್ ಅನ್ನು ಸೆಟ್ ಮಾಡಬಹುದಾಗಿದೆ.

ಪ್ಲಸ್ ಕೋಡ್​​ಗಳು ಉಚಿತ ಡಿಜಿಟಲ್ ವಿಳಾಸಗಳಾಗಿವೆ. ಅದು ಭೂಮಿಯ ಮೇಲಿನ ಯಾವುದೇ ಸ್ಥಳಕ್ಕೆ ಸರಳ ಮತ್ತು ನಿಖರವಾದ ವಿಳಾಸಗಳನ್ನು ಒದಗಿಸುತ್ತದೆ. ಮಾತ್ರವಲ್ಲದೆ ನಿಖರವಾದ ಔಪಚಾರಿಕ ವಿಳಾಸಗಳನ್ನು ಹೊಂದಿರದ ಸ್ಥಳಗಳನ್ನು ಸಹ ಒಳಗೊಂಡಿದೆ. ನೀವು ನಿರ್ದಿಷ್ಟ ವಿಳಾಸಕ್ಕಾಗಿ ಪಟ್ಟಣ ಅಥವಾ ನಗರಗಳ ಹೆಸರಿನೊಂದಿಗೆ 6 ಅಥವಾ 7 ಅಕ್ಷರಗಳ ಗುಂಪನ್ನು ಸೇರಿಸಬಹುದಾಗಿದೆ. ಇದು ರಸ್ತೆ ಮತ್ತು ಪ್ರದೇಶದ ಹೆಸರುಗಳನ್ನು ಅವಲಂಬಿಸಿಲ್ಲ. ಬದಲಿಗೆ ಅಕ್ಷಾಂಶಗಳು ಮತ್ತು ರೇಖಾಂಶಗಳನ್ನು ಬಳಸಬಹುದಾಗಿದೆ.

WhatsApp: ವಾಟ್ಸ್​ಆ್ಯಪ್​ನಿಂದ ಹೊಸ ಅಪ್ಡೇಟ್: ಚಾಟ್ ಬಾಕ್ಸ್​​ನಲ್ಲಿರುವ ಆಯ್ಕೆಯಲ್ಲಿ ನೂತನ ಫೀಚರ್

WhatsApp: ಕಾಂಟೆಕ್ಸ್​ ಲಿಸ್ಟ್​ನಲ್ಲಿ ನಂಬರ್ ಸೇವ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವುದು ಹೇಗೆ?

Published On - 2:46 pm, Sat, 19 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ