ಇಂದು ಮೊಬೈಲ್ (Mobile) ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಬೆಳಗ್ಗೆ ಎದ್ದ ತಕ್ಷಣ ಫೋನ್ ಬೇಕೇ ಬೇಕು ಎನ್ನುವಷ್ಟರ ಮಟ್ಟಿಗೆ ಜನರು ಸ್ಮಾರ್ಟ್ಫೋನ್ಗೆ ಅಡಿಕ್ಟ್ ಆಗಿದ್ದಾರೆ. ಅಷ್ಟೇ ಅಲ್ಲ, ಊಟ ಮಾಡುವಾಗ, ಮಲಗುವಾಗಲೂ ಜನರು ಫೋನ್ ಬಿಟ್ಟಿರುವುದಿಲ್ಲ. ಇದನ್ನು ಮೊಬೈಲ್ ಚಟ ಎನ್ನುವುದರಲ್ಲಿ ತಪ್ಪಿಲ್ಲ. ಆದರೆ ಈ ರೀತಿಯ ಅಭ್ಯಾಸ ತುಂಬಾ ಅಪಾಯಕಾರಿ. ಕೆಲವರಿಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಬಹುದು.
ಮಲಗುವಾಗ ಮೊಬೈಲ್ ಅನ್ನು ಎಷ್ಟು ದೂರ ಇರಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹತ್ತಿರದಲ್ಲಿ ಮೊಬೈಲ್ ಇಟ್ಟುಕೊಂಡು ಮಲಗುವ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. WHO ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ. ಪ್ಯೂನ ವರದಿಯ ಪ್ರಕಾರ, 90 ಪ್ರತಿಶತ ಹದಿಹರೆಯದವರು ಮತ್ತು 68 ಪ್ರತಿಶತ ವಯಸ್ಕರು ತಮ್ಮ ದಿಂಬಿನ ಪಕ್ಕದಲ್ಲಿ ಮೊಬೈಲ್ ಫೋನ್ ಅನ್ನು ಇಟ್ಟುಕೊಂಡು ಮಲಗುತ್ತಾರೆ.
ಗೂಗಲ್ ಪಿಕ್ಸೆಲ್ 8, 8 ಪ್ರೊ ಬಿಡುಗಡೆ ದಿನಾಂಕ ಬಹಿರಂಗ: ಭಾರತಕ್ಕೆ ಬರುತ್ತಿದೆ ಪವರ್ಫುಲ್ ಸ್ಮಾರ್ಟ್ಫೋನ್
ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವುದರಿಂದ ಅನೇಕ ಸಮಸ್ಯೆ ಕಾಡಬಹುದು. ಮೊಬೈಲ್ ಫೋನ್‌ನಿಂದ ಹೊರಬರುವ ವಿಕಿರಣವನ್ನು ತಪ್ಪಿಸಲು ಮಲಗುವ ಸಮಯದಲ್ಲಿ ಸ್ಮಾರ್ಟ್ಫೋನನ್ನು ದೂರವಿಡುವುದು ಉತ್ತಮ. ಸಾಧ್ಯವಾದರೆ, ಮಲಗುವಾಗ ಮೊಬೈಲ್ ಫೋನ್‌ಗಳನ್ನು ಕನಿಷ್ಠ 3 ಅಡಿ ದೂರದಲ್ಲಿಡಿ. ಹೀಗೆ ಮಾಡುವುದರಿಂದ ಮೊಬೈಲ್ ಹೊರಸೂಸುವ ರೇಡಿಯೋ ಫ್ರೀಕ್ವೆನ್ಸಿ ಎಲೆಕ್ಟ್ರೋಮ್ಯಾಗ್ನೆಟಿಕ್ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ನೀವು ವಿಕಿರಣದಿಂದ ಬಳಲುವುದಿಲ್ಲ. ಹಾಗಾಗಿ ದಿಂಬಿನ ಕೆಳಗೆ ಫೋನ್ ಇಟ್ಟು ಮಲಗಬೇಡಿ.
WHO, ಮೊಬೈಲ್ ಫೋನ್ ಪಕ್ಕದಲ್ಲಿಟ್ಟು ಮಲಗುವ ಜನರಿಗೆ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. WHO ಪ್ರಕಾರ, ಮೊಬೈಲ್ ಫೋನ್‌ನಿಂದ ಹೊರಬರುವ ವಿಕಿರಣವು ಸ್ನಾಯು ನೋವುಗಳು, ತಲೆನೋವಿಗೆ ದಾರಿ ಮಾಡಿಕೊಡುತ್ತದೆ. ಮೊಬೈಲ್ ಫೋನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ಪ್ರಚೋದಿಸುವ ಹಾರ್ಮೋನುಗಳ ಸಮತೋಲನವನ್ನು ಸಹ ಅಡ್ಡಿಪಡಿಸುತ್ತದೆ. ಇದು ನಿದ್ರೆಗೆ ತೊಂದರೆ ಉಂಟುಮಾಡುತ್ತದೆ ಎಂದು ಹೇಳಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ