AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಾರ್ಟ್​ಫೋನ್ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ: ಮೊಬೈಲ್ ಹಾಳಾಗಬಹುದು

Tech Tips: ಸ್ಮಾರ್ಟ್‌ಫೋನ್ ಅನ್ನು ತಪ್ಪಾಗಿ ಚಾರ್ಜ್ ಮಾಡುವುದರಿಂದ ಬ್ಯಾಟರಿಗೆ ಸಾಕಷ್ಟು ಹಾನಿಯಾಗುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಆದ್ದರಿಂದ ಬ್ಯಾಟರಿಯನ್ನು ಚಾರ್ಜ್ ಮಾಡುವಾಗ ಇದನ್ನು ನೆನಪಿನಲ್ಲಿಡಿ.

ಸ್ಮಾರ್ಟ್​ಫೋನ್ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ: ಮೊಬೈಲ್ ಹಾಳಾಗಬಹುದು
Mobile Charging
Follow us
Vinay Bhat
|

Updated on: Aug 07, 2023 | 1:25 PM

ಸ್ಮಾರ್ಟ್​ಫೋನ್ (Smartohone) ಇಂದು ನಮ್ಮ ಜೀವನದ ಪ್ರಮುಖ ಭಾಗವಾಗಿ ಬಿಟ್ಟಿದೆ. ನಾವು ದಿನದ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌ನೊಂದಿಗೆ ಕಳೆಯುವಾಗ, ಮೊಬೈಲ್​ನ ಬ್ಯಾಟರಿ (Mobile Battery) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಚಾರ್ಜ್ ಇಲ್ಲ ಎಂದಾದರೆ ಫೋನ್ ಇದ್ದರೂ ವೇಸ್ಟ್. ಹೀಗಾಗಿ ಸ್ಮಾರ್ಟ್​ಫೋನ್ ಚಾರ್ಜ್ ಮಾಡಬೇಕಾಗಿರುವುದು ಬಹುಮುಖ್ಯ. ಆದರೆ ಸ್ಮಾರ್ಟ್‌ಫೋನ್ ಅನ್ನು ತಪ್ಪಾಗಿ ಚಾರ್ಜ್ ಮಾಡುವುದರಿಂದ ಬ್ಯಾಟರಿಗೆ ಸಾಕಷ್ಟು ಹಾನಿಯಾಗುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಆದ್ದರಿಂದ ಬ್ಯಾಟರಿಯನ್ನು ಚಾರ್ಜ್ (Charge) ಮಾಡುವಾಗ ಇದನ್ನು ನೆನಪಿನಲ್ಲಿಡಿ.

ರಾತ್ರಿಯಿಡೀ ಫೋನ್ ಅನ್ನು ಚಾರ್ಜ್ ಮಾಡಬೇಡಿ:

ಅನೇಕ ಜನರು ತಮ್ಮ ಸ್ಮಾರ್ಟ್​ಫೋನನ್ನು ರಾತ್ರಿ ಇಡೀ ಚಾರ್ಜ್​ಗೆ ಹಾಕಿರುತ್ತಾರೆ. ಮಲಗುವಾಗ ಚಾರ್ಜ್​ಗೆ ಹಾಕಿದರೆ ಅದನ್ನು ತೆಗೆಯುವುದು ಬೆಳಗ್ಗೆ ಏಳುವಾಗ. ತಪ್ಪಿಯೂ ಹೀಗೆ ಮಾಡಬೇಡಿ. ಹೀಗೆ ಮಾಡುವುದರಿಂದ ಆಗುವ ಅಪಾಯ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಫೋನ್ ಅನ್ನು ಚಾರ್ಜ್ ಮಾಡಲು ಬಿಡುವುದರಿಂದ ಬ್ಯಾಟರಿಯು ಹೆಚ್ಚು ಬಿಸಿ ಆಗಲು ಮತ್ತು ಸ್ಫೋಟಗೊಳ್ಳಲು ಕಾರಣವಾಗಬಹುದು. ಜೊತೆಗೆ ಫೋನ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

ರೈಲು ಟಿಕೆಟ್ ಬುಕ್ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಿ: ಹರಿದಾಡುತ್ತಿದೆ ಫೇಕ್ ಆ್ಯಪ್​ಗಳು

ಇದನ್ನೂ ಓದಿ
Image
ಬಹುನಿರೀಕ್ಷಿತ ಒನ್​ಪ್ಲಸ್ ಏಸ್ 2 ಪ್ರೊ ಬಿಡುಗಡೆಗೆ ದಿನಾಂಕ ಫಿಕ್ಸ್: ಏನಿದೆ ಫೀಚರ್ಸ್ ನೋಡಿ
Image
ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಕರ್‌ಬರ್ಗ್ ಕೇಜ್ ಫೈಟ್: ಎಕ್ಸ್‌ನಲ್ಲಿ ಪ್ರಸಾರ
Image
ಒಂದು ಸಿಮ್​ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಲು ಸಾಧ್ಯ?; ಈ ಬಗ್ಗೆ ಟ್ರಾಯ್ ನಿಯಮ ಏನು ಹೇಳುತ್ತೆ?
Image
ಅಮೆಜಾನ್ ಸೇಲ್: ಕೇವಲ 10,000 ರೂ. ಒಳಗೆ ಸಿಗುತ್ತಿರುವ ಟಾಪ್ 5 ಸ್ಮಾರ್ಟ್​ಫೋನ್ಸ್ ನೋಡಿ

ನಕಲಿ ಚಾರ್ಜರ್‌ ಬಳಸಬೇಡಿ:

ಪ್ರತಿಯೊಂದು ಸ್ಮಾರ್ಟ್​ಫೋನ್ ಕಂಪನಿ ಕೂಡ ತನ್ನ ಫೋನ್‌ಗೆ ವಿಶೇಷ ಚಾರ್ಜರ್ ಅನ್ನು ತಯಾರಿಸುತ್ತವೆ ಎಂಬುದು ತಿಳಿದಿರಲಿ. ಜನರು ಒರಿಜಿನಲ್ ಚಾರ್ಜರ್ ಬದಲಿಗೆ ಯಾವುದಾದರೂ ಬೇರೆ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡುತ್ತಾರೆ. ನೀವು ಅದೇ ರೀತಿ ಮಾಡಿದರೆ, ಸ್ಮಾರ್ಟ್‌ಫೋನ್ ಬ್ಯಾಟರಿ ಮತ್ತು ಫೋನ್ ಎರಡಕ್ಕೂ ಹಾನಿಯಾಗಬಹುದು. ಇಂದು ಕೆಲ ಫೋನುಗಳ ಬಾಕ್ಸ್​ನಲ್ಲಿ ಚಾರ್ಜರ್ ಬರುವುದಿಲ್ಲ. ಆದರೆ, ಆ ಮೊಬೈಲ್​ಗೆ ಚಾರ್ಜರ್ ಅನ್ನು ಕಂಪನಿ ಬಿಡುಗಡೆ ಮಾಡಿಯೇ ಇರುತ್ತದೆ.

ಬ್ಯಾಕ್ ಕವರ್ ತೆಗೆದುಹಾಕಿ ಫೋನ್ ಚಾರ್ಜ್ ಮಾಡಿ:

ಅನೇಕ ಬಾರಿ ಜನರು ಬ್ಯಾಕ್ ಕವರ್ ಹಾಕಿ ಫೋನ್ ಅನ್ನು ಚಾರ್ಜ್ ಮಾಡುತ್ತಾರೆ. ಆದರೆ, ಹೀಗೆ ಮಾಡಬಾರದು. ನೀವು ಫೋನ್ ಅನ್ನು ಕವರ್ ಹಾಕಿ ಚಾರ್ಜ್ ಮಾಡಿದರೆ, ಬ್ಯಾಟರಿ ಹೆಚ್ಚು ಬಿಸಿಯಾಗಬಹುದು ಮತ್ತು ಬ್ಯಾಟರಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

ಪವರ್ ಬ್ಯಾಂಕ್‌ನೊಂದಿಗೆ ಚಾರ್ಜ್ ಮಾಡುವಾಗ ಫೋನ್ ಬಳಸಬೇಡಿ:

ಅನೇಕ ಬಾರಿ ಜನರು ಸಮಯದ ಅಭಾವದಿಂದ ಫೋನ್ ಅನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್ ಅನ್ನು ಬಳಸುತ್ತಾರೆ. ಇದರ ಜೊತೆಗೆ ಚಾರ್ಜ್ ಮಾಡುವಾಗ ಫೋನ್ ಅನ್ನು ಕೂಡ ಬಳಸುತ್ತಾರೆ. ಈ ಸಂದರ್ಭ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಏಕಕಾಲದಲ್ಲಿ ನಡೆಯುವುದರಿಂದ ಹಾನಿಗೊಳಗಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ