ರೈಲು ಟಿಕೆಟ್ ಬುಕ್ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಿ: ಹರಿದಾಡುತ್ತಿದೆ ಫೇಕ್ ಆ್ಯಪ್​ಗಳು

IRCTC Fake App: ರೈಲು ಟಿಕೆಟ್ ಬುಕ್ಕಿಂಗ್ ಬಗ್ಗೆ ದೊಡ್ಡ ಮಟ್ಟದ ದುರುದ್ದೇಶಪೂರಿತ ಮೊಬೈಲ್ ಅಪ್ಲಿಕೇಶನ್ ಪ್ರಚಾರ ನಡೆಯುತ್ತಿದೆ. ವಂಚಕರು ಫಿಶಿಂಗ್ ಲಿಂಕ್‌ಗಳನ್ನು ಕಳುಹಿಸುವ ಮೂಲಕ ನಕಲಿ IRCTC ರೈಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಜನರನ್ನು ಕೇಳುತ್ತಿದ್ದಾರೆ.

ರೈಲು ಟಿಕೆಟ್ ಬುಕ್ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಿ: ಹರಿದಾಡುತ್ತಿದೆ ಫೇಕ್ ಆ್ಯಪ್​ಗಳು
IRCTC Fake App
Follow us
Vinay Bhat
|

Updated on: Aug 06, 2023 | 12:14 PM

ನೀವು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ (Smartphone) ಆ್ಯಪ್ ಮೂಲಕ ರೈಲು ಟಿಕೆಟ್‌ಗಳನ್ನು ಬುಕ್ ಮಾಡುತ್ತೀರಿ ಎಂದಾದರೆ ಮೊದಲಿಗಿಂತ ಈಗ ಹೆಚ್ಚು ಜಾಗರೂಕರಾಗಿರಬೇಕು. ಯಾಕೆಂದರೆ ಜನರನ್ನು ಬಲೆಗೆ ಬೀಳಿಸಲು ವಂಚಕರು IRCTC ಯ ನಕಲಿ ಅಪ್ಲಿಕೇಶನ್‌ಗಳನ್ನು ತಯಾರಿಸಿದ್ದಾರೆ. ಇಂತಹ ನಕಲಿ ಮೊಬೈಲ್ ಆ್ಯಪ್​ಗಳ ಬಗ್ಗೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಜನರಿಗೆ ಎಚ್ಚರಿಕೆ ನೀಡಿದೆ. IRCTC ತನ್ನ ಟ್ವಿಟ್ಟರ್ (Twitter) ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಜಾಗರೂಕರಾಗಿ ಇರುವಂತೆ ಹೇಳಿದೆ.

”ರೈಲು ಟಿಕೆಟ್ ಬುಕ್ಕಿಂಗ್ ಬಗ್ಗೆ ದೊಡ್ಡ ಮಟ್ಟದ ದುರುದ್ದೇಶಪೂರಿತ ಮೊಬೈಲ್ ಅಪ್ಲಿಕೇಶನ್ ಪ್ರಚಾರ ನಡೆಯುತ್ತಿದೆ. ವಂಚಕರು ಫಿಶಿಂಗ್ ಲಿಂಕ್‌ಗಳನ್ನು ಕಳುಹಿಸುವ ಮೂಲಕ ನಕಲಿ IRCTC ರೈಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಜನರನ್ನು ಕೇಳುತ್ತಿದ್ದಾರೆ. ಜನರನ್ನು ವಂಚಿಸುವುದೇ ವಂಚಕರ ಉದ್ದೇಶವಾಗಿದೆ. ಈ ನಕಲಿ ಮೊಬೈಲ್ ಅಪ್ಲಿಕೇಶನ್‌ನಿಂದ ದೂರವಿರಿ,” ಎಂದು IRCTC ಜನರಿಗೆ ಎಚ್ಚರಿಕೆ ನೀಡಿದೆ.

ಭಾರತಕ್ಕೆ ಬರುತ್ತಿದೆ ಟೆಕ್ನೋ ಪೋವಾ 5 ಸರಣಿ: ಈ ಫೋನಿನ ಬ್ಯಾಕ್ ಪ್ಯಾನಲ್ ಹೇಗಿದೆ ನೋಡಿ

ಇದನ್ನೂ ಓದಿ
Image
ಮೊದಲ ದಿನವೇ ದಾಖಲೆಯ ಮಾರಾಟ ಕಂಡ ರೆಡ್ಮಿ 12 ಸರಣಿ: ಸೇಲ್ ಆಗಿದ್ದು ಎಷ್ಟು ಫೋನ್ ಗೊತ್ತೇ?
Image
Lava Yuva 2: ದೇಸಿ ಕಂಪನಿ ಖ್ಯಾತಿಯ ಲಾವಾ ಬಿಡುಗಡೆ ಮಾಡಿದೆ ಹೊಸ ಲಾವಾ ಫೋನ್
Image
ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ಆಫರ್: ಪೈಪೋಟಿಗೆ ಬಿದ್ದಂತೆ ಮೊಬೈಲ್​ಗಳ ಮೇಲೆ ಡಿಸ್ಕೌಂಟ್
Image
ಭಾರತದಲ್ಲಿ ಕಡಿಮೆ ಬೆಲೆಗೆ ಮತ್ತೊಂದು 5G ಸ್ಮಾರ್ಟ್​ಫೋನ್ ಲಾಂಚ್: ಕೇವಲ 10,999 ರೂ.

IRCTC ಯ ಸಲಹೆಯನ್ನು ಅನುಸರಿಸಿ:

ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಐಫೋನ್ ಬಳಕೆದಾರರ ಆ್ಯಪ್ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಮಾತ್ರ ಅಧಿಕೃತ IRCTC ರೈಲು ಕನೆಕ್ಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು IRCTC ಜನರಿಗೆ ಸಲಹೆ ನೀಡಿದೆ. ಇದರರ್ಥ ಯಾರಾದರೂ ನಿಮಗೆ ಲಿಂಕ್ ಕಳುಹಿಸಿದರೆ ಮತ್ತು ರೈಲ್ ಕನೆಕ್ಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಕೇಳಿದರೆ, ಆ ಲಿಂಕ್ ತೆರೆಯದೆ ಅವರನ್ನು ಬ್ಲಾಕ್ ಮಾಡಿಬಿಡಿ.

ತಿಂಗಳುಗಳ ಹಿಂದೆ, ವಂಚಕರು ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಅನ್ನು ಸಿದ್ಧಪಡಿಸಿದ್ದಾರೆ ಎಂದು IRCTC ಜನರಿಗೆ ಎಚ್ಚರಿಕೆ ನೀಡಿತ್ತು. ಈ ನಕಲಿ ಆ್ಯಪ್ ಮತ್ತು ಸೈಟ್ ಮೂಲಕ ಜನರ ವೈಯಕ್ತಿಕ ಮಾಹಿತಿ ಪಡೆಯಲಾಗುತ್ತಿದೆ. ನಕಲಿ ಅಪ್ಲಿಕೇಶನ್‌ನ ಹೆಸರು APK, irctcconnect.apk ಎಂದು ಡೌನ್‌ಲೋಡ್ ಆಗುತ್ತಿತ್ತು. ಈ ಎಪಿಕೆ ಲಿಂಕ್ ಅನ್ನು ವಾಟ್ಸ್​ಆ್ಯೊ್ ಮತ್ತು ಟೆಲಿಗ್ರಾಂನಲ್ಲಿ ಸೆಂಡ್ ಮಾಡಲಾಗುತ್ತಿದೆ.

ವಂಚಕರು ಏನು ಮಾಡುತ್ತಾರೆ?:

ವಂಚಕರು ನಿಮ್ಮ ಬ್ಯಾಂಕಿಂಗ್ ವಿವರಗಳು, UPI ವಿವರಗಳು, ಬ್ಯಾಂಕ್ ಕಾರ್ಡ್ ವಿವರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಕಲಿ ಅಪ್ಲಿಕೇಶನ್‌ಗಳು ಮತ್ತು ಸೈಟ್‌ಗಳನ್ನು ರಚಿಸುವ ಮೂಲಕ ಕದಿಯುತ್ತಾರೆ. ನಂತರ ನಿಮ್ಮ ಬ್ಯಾಂಕ್ ಖಾತೆಯಿಂದ ನೀವು ಸಂಪಾದಿಸಿದ ಹಣವನ್ನು ಕದಿಯುತ್ತಾರೆ. ಹೀಗಾಗಿ ಎಚ್ಚರದಿಂದಿರಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್