ಮೊದಲ ದಿನವೇ ದಾಖಲೆಯ ಮಾರಾಟ ಕಂಡ ರೆಡ್ಮಿ 12 ಸರಣಿ: ಸೇಲ್ ಆಗಿದ್ದು ಎಷ್ಟು ಫೋನ್ ಗೊತ್ತೇ?
Redmi 12 Series: ರೆಡ್ಮಿ 12 ಸರಣಿಯು ಪ್ರೀಮಿಯಂ ಸ್ಮಾರ್ಟ್‌ಫೋನ್ ಅನುಭವವನ್ನು ಒದಗಿಸುತ್ತದೆ. ಕ್ರಿಸ್ಟಲ್ ಗ್ಲಾಸ್ ಬ್ಯಾಕ್ ವಿನ್ಯಾಸ ಮತ್ತು ಅಸಾಧಾರಣ ಕಾರ್ಯಕ್ಷಮತೆಯನ್ನು ಹೊಂದಿರುವ ಈ ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.
ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪನಿ ಇತ್ತೀಚೆಗೆ ಭಾರತದಲ್ಲಿ ತನ್ನ ರೆಡ್ಮಿ 12 ಸರಣಿಯ ಸ್ಮಾರ್ಟ್ಫೋನನ್ನು ಅನಾವರಣ ಮಾಡಿತ್ತು. ಇದರಲ್ಲಿ ರೆಡ್ಮಿ 12 4G (Redmi 12 4G) ಮತ್ತು ರೆಡ್ಮಿ 12 5G ಎಂಬ ಎರಡು ಫೋನ್ ಇದೆ. ಶುಕ್ರವಾರ ಈ ಮೊಬೈಲ್ ದೇಶದಲ್ಲಿ ತನ್ನ ಮಾರಾಟವನ್ನು ಆರಂಭಿಸಿದೆ. ಇದೀಗ ಈ ಫೋನಿನ ಬಗ್ಗೆ ಶವೋಮಿ ಮಹತ್ವದ ವಿಚಾರ ಹಂಚಿಕೊಂಡಿದೆ. ಸೇಲ್ ಪ್ರಾರಂಭವಾದ ಮೊದಲ ದಿನದಲ್ಲಿ ರೆಡ್ಮಿ 12 ಸರಣಿಯ (Redmi 12 Series) ಫೋನುಗಳು ಬರೋಬ್ಬರಿ 300,000 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಎರಡೂ ಸ್ಮಾರ್ಟ್ಫೋನ್ಗಳಿಗೆ ಮಧ್ಯಮ ಶ್ರೇಣಿಯ ಖರೀದಿದಾರರಿಂದ ಉತ್ತಮವಾಗಿ ಪ್ರತಿಕ್ರಿಯೆ ಕೇಳಿಬಂದಿದೆ.
ರೆಡ್ಮಿ 12 ಸರಣಿಯು ಪ್ರೀಮಿಯಂ ಸ್ಮಾರ್ಟ್‌ಫೋನ್ ಅನುಭವವನ್ನು ಒದಗಿಸುತ್ತದೆ. ಕ್ರಿಸ್ಟಲ್ ಗ್ಲಾಸ್ ಬ್ಯಾಕ್ ವಿನ್ಯಾಸ ಮತ್ತು ಅಸಾಧಾರಣ ಕಾರ್ಯಕ್ಷಮತೆಯನ್ನು ಹೊಂದಿರುವ ಈ ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ರೆಡ್ಮಿ 12 5G ಯ ಪ್ರಮುಖ ಅಂಶವೆಂದರೆ ಇದು ಸ್ನಾಪ್ಡ್ರಾಗನ್ 4 Gen 2 5G ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಪ್ರೊಸೆಸರ್ 4nm ಆರ್ಕಿಟೆಕ್ಚರ್ ಅನ್ನು ಹೊಂದಿದೆ.
ಅತಿ ಕಡಿಮೆ ಬೆಲೆಯ ಜಿಯೋಬುಕ್ ಲ್ಯಾಪ್ಟಾಪ್ ಇಂದಿನಿಂದ ಖರೀದಿಗೆ ಲಭ್ಯ: ಏನೆಲ್ಲ ಫೀಚರ್ಸ್ ಇದೆ ನೋಡಿ
ಬೆಲೆ ಮತ್ತು ಲಭ್ಯತೆ:
ರೆಡ್ಮಿ 12 4G ಮತ್ತು ರೆಡ್ಮಿ 12 5G ಈಗ ಆಕರ್ಷಕ ಬೆಲೆಗಳಲ್ಲಿ ಅದ್ಭುತ ಕೊಡುಗೆಗಳೊಂದಿಗೆ ಲಭ್ಯವಿದೆ. ರೆಡ್ಮಿ 12 4G 4GB+128GB ರೂಪಾಂತರಕ್ಕೆ ರೂ 8,999 ಮತ್ತು 6GB+ 128GB ರೂಪಾಂತರಕ್ಕೆ ರೂ 10,499 ಆಗಿದೆ. ನೀವು Mi.com, ಫ್ಲಿಪ್ಕಾರ್ಟ್, Mi Home, Mi Studio ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಈ ಫೋನನ್ನು ಪಡೆದುಕೊಳ್ಳಬಹುದು.
5G ಅನುಭವವನ್ನು ಬಯಸುವವರಿಗೆ, ರೆಡ್ಮಿ 12 5G ಫೋನ್ ಖರೀದಿಸಬಹುದು. ಇದರ 4GB+128GB ರೂಪಾಂತರಕ್ಕೆ 10,999 ರೂ., 6GB+128GB ರೂಪಾಂತರಕ್ಕೆ 12,499 ರೂ. ಮತ್ತು 8GB+256GB ರೂಪಾಂತರಕ್ಕೆ 14,999 ರೂ. ನಿಗದಿ ಮಾಡಲಾಗಿದೆ. ಈ ಅದ್ಭುತ ಕೊಡುಗೆಗಳು Mi.com, ಅಮೆಜಾನ್, Mi Home, Mi Studio ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿವೆ.
ಇದರ ಜೊತೆಗೆ ಬಂಪರ್ ಆಫರ್ಗಳನ್ನು ಕೂಡ ಘೋಷಣೆ ಮಾಡಲಾಗಿದೆ. ನೀವು ICICI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ರೆಡ್ಮಿ 12 4G ಅಥವಾ ರೆಡ್ಮಿ 12 5G ಯ 4GB ರೂಪಾಂತರದ ಖರೀದಿಯ ಮೇಲೆ 1000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ರೆಡ್ಮಿ 12 4G ಯ 6GB ರೂಪಾಂತರ ಅಥವಾ ರೆಡ್ಮಿ 12 5G ಯ 8GB ರೂಪಾಂತರವನ್ನು ಆರಿಸಿದರೆ, ನೀವು 1000 ರೂಗಳ ರಿಯಾಯಿತಿಯನ್ನು ಪಡೆಯಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ