ಭಾರತದಲ್ಲೀಗ ಅತಿ ಕಡಿಮೆ ಬೆಲೆಯ ರೆಡ್ಮಿ 12 4G ಮತ್ತು 5G ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯ

Redmi 12 4G and 5G: ಅತಿ ಕಡಿಮೆ ಬೆಲೆಗೆ ಲಭ್ಯವಿರುವ ರೆಡ್ಮಿ 12 4G ಮತ್ತು 5G ಸ್ಮಾರ್ಟ್​ಫೋನ್ ಬಜೆಟ್ ಪ್ರಿಯರನ್ನು ದಂಗಾಗಿಸಿದೆ. ಇದೀಗ ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮೂಲಕ ಮಾರಾಟ ಕಾಣುತ್ತಿದೆ.

Vinay Bhat
|

Updated on: Aug 04, 2023 | 3:43 PM

ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ ಇತ್ತೀಚೆಗಷ್ಟೆ ಭಾರತದಲ್ಲಿ ರೆಡ್ಮಿ 12 ಫೋನನ್ನು ಅನಾವರಣ ಮಾಡಿತ್ತು. ವಿಶೇಷ ಎಂದರೆ ಈ ಫೋನನ್ನು ಶವೋಮಿ 4G ಮತ್ತು 5G ಎಂಬ ಎರಡು ಆವೃತ್ತಿಯಲ್ಲಿ ಪರಿಚಯಿಸಿದೆ.

1 / 8
ಅತಿ ಕಡಿಮೆ ಬೆಲೆಗೆ ಲಭ್ಯವಿರುವ ರೆಡ್ಮಿ 12 4G ಮತ್ತು 5G ಸ್ಮಾರ್ಟ್​ಫೋನ್ ಬಜೆಟ್ ಪ್ರಿಯರನ್ನು ದಂಗಾಗಿಸಿದೆ. ಇದೀಗ ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮೂಲಕ ಮರಾಟ ಕಾಣುತ್ತಿದೆ.

2 / 8
ರೆಡ್ಮಿ 12 4G ಎರಡು ರೂಪಾಂತರಗಳಲ್ಲಿ ಬಿಡುಗಡೆ ಆಗಿದೆ. ಇದರ 4GB RAM ಮತ್ತು 128 GB ಸಂಗ್ರಹಕ್ಕೆ ಕೇವಲ 8,999 ರೂ. ಇದೆ. ಅಂತೆಯೆ ಇನ್ನೊಂದು 6GB RAM ಮತ್ತು 128 GB ರೂಪಾಂತರಕ್ಕೆ 10,499 ರೂ. ನಿಗದಿ ಮಾಡಲಾಗಿದೆ. ಕಂಪನಿಯ ಅಧಿಕೃತ ವೆಬ್​ಸೈಟ್ ಮೂಲಕವೂ ಖರೀದಿಸಬಹುದು.

3 / 8
ಅಂತೆಯೆ ರೆಡ್ಮಿ 12 5G ಸ್ಮಾರ್ಟ್​ಫೋನ್ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 4GB RAM ಮತ್ತು 128 GB ಸ್ಟೋರೇಜ್ ರೂಪಾಂತರದ ಬೆಲೆ 10,999 ರೂ. ಆಗಿದ್ದರೆ, 6GB + 128GB ರೂಪಾಂತರಕ್ಕೆ 12,499 ರೂ. ಇದೆ. ಅಂತೆಯೆ 8GB + 256 GB ಸ್ಟೋರೇಜ್ ಆಯ್ಕೆಗೆ 1,000 ರೂ. ಬ್ಯಾಂಕ್ ಕೊಡುಗೆಯೊಂದಿಗೆ 14,999 ರೂ. ಗೆ ಖರೀದಿಸಬಹುದು.

4 / 8
ರೆಡ್ಮಿ 12 4G ಗ್ಲಾಸ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬರುತ್ತದೆ. ಇದು ಪ್ರೀಮಿಯಂ ಲುಕ್ ಮತ್ತು ಅನುಭವವನ್ನು ನೀಡುತ್ತದೆ. ಮೇಲ್ಭಾಗದಲ್ಲಿ, ಕ್ಯಾಮೆರಾ ಲೆನ್ಸ್‌ಗಳನ್ನು ಸುತ್ತುವರೆದಿರುವ ಸಿಲ್ವರ್ ಮೆಟಾಲಿಕ್ ರಿಮ್‌ ಇದೆ. ಈ ಫೋನ್ MIUI 14 (ಆಂಡ್ರಾಯ್ಡ್ 13 ಆಧಾರಿತ) ನಿಂದ ಚಾಲಿತವಾಗಿದೆ ಮತ್ತು MIUI ಡಯಲರ್‌ನೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹಿಲಿಯೊ G88 ಪ್ರೊಸೆಸರ್‌ನಿಂದ ಚಾಲಿತವಾಗಿದೆ.

5 / 8
90Hz ರಿಫ್ರೆಶ್ ದರದೊಂದಿಗೆ 6.79-ಇಂಚಿನ FHD+ ಡಿಸ್ ಪ್ಲೇ ಇದೆ. ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿದೆ. 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ.

6 / 8
ರೆಡ್ಮಿ 12 5G ನಲ್ಲಿ ರೆಡ್ಮಿ 12 4G ಯಂತೆ ಫೀಚರ್​ಗಳಿವೆ. ಎರಡು ಫೋನ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಚಿಪ್‌ಸೆಟ್ ಮತ್ತು 5G ತಂತ್ರಜ್ಞಾನ. ರೆಡ್ಮಿ12 5G, ಹೆಸರೇ ಸೂಚಿಸುವಂತೆ, ಈ ಬೆಲೆ ವಿಭಾಗದಲ್ಲಿ ಅಪರೂಪದ 5G ಸಂಪರ್ಕವನ್ನು ಬೆಂಬಲಿಸುತ್ತದೆ. ಇದು ಬಲಿಷ್ಠವಾದ ಮೊಟ್ಟ ಮೊದಲ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನ ಬಲಯವನ್ನು ಹೊಂದಿದೆ. ಇದು ನಿಮಗೆ ಮೃದುವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ.

7 / 8
ಕ್ಯಾಮೆರಾಕ್ಕೆ ಬರುವುದಾದರೆ, ರೆಡ್ಮಿ 12 5G 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಕ್ಯಾಮೆರಾ ಮತ್ತು LED ಫ್ಲ್ಯಾಷ್ ಹೊಂದಿದೆ. ಮುಂಭಾಗದ ಕ್ಯಾಮರಾ 8 ಮೆಗಾಪಿಕ್ಸೆಲ್ ಆಗಿದೆ. ಎರಡೂ ಫೋನ್‌ಗಳು 5000 mAh ಬ್ಯಾಟರಿಯನ್ನು ಹೊಂದಿದ್ದು ಅದು ಟೈಪ್ C USB ಪೋರ್ಟ್ ಮೂಲಕ 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

8 / 8
Follow us
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್