ಭಾರತಕ್ಕೆ ಬರುತ್ತಿದೆ ಟೆಕ್ನೋ ಪೋವಾ 5 ಸರಣಿ: ಈ ಫೋನಿನ ಬ್ಯಾಕ್ ಪ್ಯಾನಲ್ ಹೇಗಿದೆ ನೋಡಿ
Tecno Pova 5 Series: ಟೆಕ್ನೋ ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಭಾರತದಲ್ಲಿ ಆಗಸ್ಟ್ 11 ರಂದು ಕಂಪನಿಯ ವರ್ಲ್ಡ್ ಆಫ್ ಟೆಕ್ನಾಲಜಿ ಈವೆಂಟ್‌ನಲ್ಲಿ ಬಿಡುಗಡೆ ಆಗಲಿದೆ. ಮುಂಬರುವ ಸರಣಿಯ ಕುರಿತು ಟೀಸರ್ ವಿಡಿಯೋವನ್ನು ಟೆಕ್ನೋ ಇಂಡಿಯಾದ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಪ್ರಸಿದ್ಧ ಟೆಕ್ನೋ (Tecno) ಕಂಪನಿ ಮುಂದಿನ ವಾರ ಭಾರತದಲ್ಲಿ ತನ್ನ ಹೊಸ ಟೆಕ್ನೋ ಪೋವಾ 5 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸುತ್ತಿದೆ. ಕಂಪನಿಯು ಅಧಿಕೃತವಾಗಿ ಟೆಕ್ನೋ ಪೋವಾ 5 ಸರಣಿಯ (Tecno Pova 5 Series) ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದು ಟೆಕ್ನೋ ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಫೋನನ್ನು ಒಳಗೊಂಡಿದೆ. ಭಾರತದಲ್ಲಿ ಅಮೆಜಾನ್ (Amazon) ಮೂಲಕ ಸ್ಮಾರ್ಟ್‌ಫೋನ್‌ಗಳು ಲಭ್ಯವಾಗಲಿವೆ ಎಂದು ಕಂಪನಿ ಹೇಳಿದೆ. ಟೆಕ್ನೋ ಪೋವಾ 5 ಪ್ರೊ ಫೋನಿನ ಹಿಂಭಾಗದಲ್ಲಿ ಆರ್ಕ್ ಇಂಟರ್ಫೇಸ್ ಎಲ್ಇಡಿ ಇರುವ ನಿರೀಕ್ಷೆಯಿದೆ, ಇದು ನಥಿಂಗ್ ಫೋನ್ 2 ನಿಂದ ಪ್ರೇರಿತವಾಗಿದಂತೆ ಗೋಚರಿಸುತ್ತದೆ.
ಟೆಕ್ನೋ ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಭಾರತದಲ್ಲಿ ಆಗಸ್ಟ್ 11 ರಂದು ಕಂಪನಿಯ ವರ್ಲ್ಡ್ ಆಫ್ ಟೆಕ್ನಾಲಜಿ ಈವೆಂಟ್‌ನಲ್ಲಿ ಬಿಡುಗಡೆ ಆಗಲಿದೆ. ಮುಂಬರುವ ಸರಣಿಯ ಕುರಿತು ಟೀಸರ್ ವಿಡಿಯೋವನ್ನು ಟೆಕ್ನೋ ಇಂಡಿಯಾದ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಟೆಕ್ನೋ ಪೋವಾ 5 ಸರಣಿಗಾಗಿ Amazon ತನ್ನ ಪೇಜ್ನಲ್ಲಿ ಹೊಸ ಪುಟವನ್ನು ಲೈವ್ ಮಾಡಿದೆ.
ಭಾರತದಲ್ಲೀಗ ಅತಿ ಕಡಿಮೆ ಬೆಲೆಯ ರೆಡ್ಮಿ 12 4G ಮತ್ತು 5G ಸ್ಮಾರ್ಟ್ಫೋನ್ ಖರೀದಿಗೆ ಲಭ್ಯ
ಟೆಕ್ನೋದ ಈ ಹೊಸ ಫೋನಿನ ಹಿಂಭಾಗದಲ್ಲಿ ಆರ್ಕ್ ಇಂಟರ್ಫೇಸ್ LED ಅನ್ನು ಅಳವಡಿಸಲಾಗಿದೆ. ಆದಾಗ್ಯೂ, ಎರಡೂ ಸ್ಮಾರ್ಟ್‌ಫೋನ್‌ಗಳು ಈ ವೈಶಿಷ್ಟ್ಯವನ್ನು ಪಡೆದಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಎಲ್ಇಡಿ ಇಂಟರ್ಫೇಸ್ ಕರೆಗಳು, ನೋಟಿಫಿಕೇಷನ್, ಬ್ಯಾಟರಿ ಚಾರ್ಜಿಂಗ್ ಮತ್ತು ಮ್ಯೂಸಿಕ್ಗೆ ಸಿಂಕ್ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಲೈಟ್ ಒಟ್ಟು ಸಾಫ್ಟ್, ರೇಸಿಂಗ್, ಡ್ರೀಮಿ, ಬ್ರೀತ್ ಮತ್ತು ಪಾರ್ಟಿ ಎಂಬ ಐದು ಬಣ್ಣಗಳಿಂದ ಕೂಡಿದೆಯಂತೆ.
ಟೆಕ್ನೋ ಪೋವಾ 5 ಪ್ರೊ ಇತ್ತೀಚೆಗೆ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ 120Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ ಪೂರ್ಣ-HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ನಿಂದ ಕಾರ್ಯನಿರ್ವಹಿಸುತ್ತಿದ್ದು, Android 13-ಆಧಾರಿತ HiOS 13 ಔಟ್-ಆಫ್-ಬಾಕ್ಸ್ ಅನ್ನು ರನ್ ಮಾಡಲಾಗುತ್ತದೆ. ಕ್ಯಾಮೆರಾ ವಿಚಾರದಲ್ಲಿ, ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಹ್ಯಾಂಡ್‌ಸೆಟ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಮತ್ತು 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಇದಲ್ಲದೆ, ಟೆಕ್ನೋ ಪೋವಾ 5 ಪ್ರೊ 68W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಹ್ಯಾಂಡ್ಸೆಟ್ ಡಾರ್ಕ್ ಇಲ್ಯೂಷನ್ ಮತ್ತು ಸಿಲ್ವರ್ ಫ್ಯಾಂಟಸಿ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಸೇಲ್ ಆಗುತ್ತಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:13 pm, Sat, 5 August 23