Twitter Evolution: ಟ್ವಿಟ್ಟರ್ ಹುಟ್ಟಿನಿಂದ ಇಂದಿನ ವರೆಗೆ ಲೋಗೋದಲ್ಲಿ ಏನೆಲ್ಲ ಬದಲಾವಣೆ ಆಗಿದೆ?: ಇಲ್ಲಿದೆ ನೋಡಿ ಮಾಹಿತಿ
ಟ್ವಿಟ್ಟರ್ನಲ್ಲಿ ಇನ್ನು ಮುಂದೆ ನೀಲಿ ಹಕ್ಕಿಯ ಲೋಗೋ ಇರುವುದಿಲ್ಲ. ಬದಲಾಗಿ ಕಪ್ಪು ಅಕ್ಷರದಲ್ಲಿ ಎಕ್ಸ್ (X) ಎಂದು ಬರೆದಿರುವ ಲೋಗೋ ಕಾಣಿಸುತ್ತಿದೆ. ಹಾಗಾದರೆ ಈ ಹಿಂದೆ ಟ್ವಿಟ್ಟರ್ ಲೋಗೋದಲ್ಲಿ ಏನೆಲ್ಲ ಬದಲಾವಣೆ ಆಗಿವೆ ಎಂಬುದನ್ನು ನೋಡೋಣ.
Updated on: Jul 25, 2023 | 12:54 PM

ಪ್ರಸಿದ್ಧ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್ ಇಂದು ಸಾಕಷ್ಟು ಬದಲಾಗಿದೆ. ಮುಖ್ಯವಾಗಿ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಪಡೆದುಕೊಂಡ ಬಳಿಕ ಒಂದೊಂದೆ ಬದಲಾವಣೆಯನ್ನ ತಂದು ಇದೀಗ ಟ್ವಟ್ಟರ್ನ ಪ್ರಮುಖ ಆಕರ್ಷಣೆಯಾಗಿದ್ದ ಇದರ ಪಕ್ಷಿಯ ಚಿತ್ರವೇ ಮಾಯವಾಗಿದೆ.

ಟ್ವಿಟ್ಟರ್ನಲ್ಲಿ ಇನ್ನು ಮುಂದೆ ನೀಲಿ ಹಕ್ಕಿಯ ಲೋಗೋ ಇರುವುದಿಲ್ಲ. ಬದಲಾಗಿ ಕಪ್ಪು ಅಕ್ಷರದಲ್ಲಿ ಎಕ್ಸ್ (X) ಎಂದು ಬರೆದಿರುವ ಲೋಗೋ ಕಾಣಿಸುತ್ತಿದೆ. ಹಾಗಾದರೆ ಈ ಹಿಂದೆ ಟ್ವಿಟ್ಟರ್ ಲೋಗೋದಲ್ಲಿ ಏನೆಲ್ಲ ಬದಲಾವಣೆ ಆಗಿವೆ ಎಂಬುದನ್ನು ನೋಡೋಣ.

ಇದು ವರಿಜಿನಲ್ ಟ್ವಿಟ್ಟರ್ ಲೋಗೋ ಆಗಿದೆ. ಟ್ವಿಟ್ಟರ್ ಹುಟ್ಟುಕೊಂಡಿದ್ದು ಈ ಲೋಗೋದಿಂದ. ಇದನ್ನು 2005 ರಿಂದ 2006 ವರೆಗೆ ಬಳಕೆ ಮಾಡಲಾಯಿತು. ಬಳಿಕ ನೂತನ ಲೋಗೋವನ್ನು ಪರಿಚಯಿಸಲಾಯಿತು.

2006 ರಿಂದ 2010ರ ವರೆಗೆ ಈ ಲೋಗೋ ಟ್ವಿಟ್ಟರ್ನಲ್ಲಿ ರಾರಾಜಿಸುತ್ತಿತ್ತು. ಆಕಾಶ ನೀಲಿ ಬಣ್ಣಕ್ಕೆ ಇಲ್ಲಿಂದ ಚಾಲನೆ ಸಿಕ್ಕಿತು.

ಮೊಟ್ಟ ಮೊದಲ ಬಾರಿಗೆ ಟ್ವಿಟ್ಟರ್ಗೆ ಹಕ್ಕಿ ಬಂದಿದ್ದು 2010 ರಲ್ಲಿ. ಈ ಐತಿಹಾಸಿಕ ಲೋಗೋ ಎಲ್ಲರ ಮನ ಗೆದ್ದಿತು.

ನೀಲಿ ಹಕ್ಕಿಗೆ ಎಲ್ಲರ ಮನಸೋತ ಪರಿಣಾಮ 2012 ರಿಂದ 2023 ರ ವರೆಗೆ ಕೇವಲ ಹಕ್ಕಿ ಇರುವ ಲೋಗೋವನ್ನು ಮಾತ್ರ ಇರಿಸಲಾಯಿತು. ಇದರಿಂದ ಹೆಚ್ಚಿನವರು ಆಕರ್ಷಿತರಾಗಿ ಖಾತೆ ತೆರೆದರು.

ಆದರೀಗ ಈ ಐತಿಹಾಸಿಕ ನೀಲಿ ಹಕ್ಕಿಯ ಲೋಗೋ ಹೋಗಿ ಎಕ್ಸ್ ಎಂಬ ಲೋಗೋ ಬಂದಿದೆ.



















