- Kannada News Photo gallery New 108 mega pixel camera phone Realme C53 sale starting in India today check price
Realme C53: ಕೇವಲ 9,999 ರೂ.: ಖರೀದಿಗೆ ಸಿಗುತ್ತಿದೆ 108MP ಕ್ಯಾಮೆರಾದ ರಿಯಲ್ ಮಿ C53 ಸ್ಮಾರ್ಟ್ಫೋನ್
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿಯ ಅಧಿಕೃತ ವೆಬ್ಸೈಟ್ನಲ್ಲಿ ಇಂದಿನಿಂದ ರಿಯಲ್ ಮಿ C53 ಮಾರಾಟ ಕಾಣಲಿದೆ. ಇದು ಚಾಂಪಿಯನ್ ಗೋಲ್ಡನ್ ಮತ್ತು ಚಾಂಪಿಯನ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಸಿಗಲಿದೆ.
Updated on:Jul 25, 2023 | 4:28 PM

ಪ್ರಸಿದ್ಧ ರಿಯಲ್ ಮಿ ಕಂಪನಿ ಕಳೆದ ವಾರವಷ್ಟೆ ಭಾರತದಲ್ಲಿ ತನ್ನ C ಸರಣಿ ಅಡಿಯಲ್ಲಿ ಹೊಸ ರಿಯಲ್ ಮಿ C53 ಸ್ಮಾರ್ಟ್ಫೋನನ್ನು ಅನಾವರಣ ಮಾಡಿತ್ತು. ಇದರಲ್ಲಿ ಬರೋಬ್ಬರಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. ಈ ಫೋನ್ ನಾಳೆ (ಜು. 25) ಖರೀದಿಗೆ ಸಿಗಲಿದೆ.

ರಿಯಲ್ ಮಿ C53 ಫೋನ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ 9,999 ರೂ. ಇದೆ. ಅಂತೆಯೆ 6GB RAM + 64GB ಸ್ಟೋರೇಜ್ ಆಯ್ಕೆಗೆ 10,999 ರೂ. ನಿಗದಿ ಮಾಡಲಾಗಿದೆ.

ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿಯ ಅಧಿಕೃತ ವೆಬ್ಸೈಟ್ನಲ್ಲಿ ನಾಳೆಯಿಂದ ಮಾರಾಟ ಕಾಣಲಿದೆ. ಇದು ಚಾಂಪಿಯನ್ ಗೋಲ್ಡನ್ ಮತ್ತು ಚಾಂಪಿಯನ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಸಿಗಲಿದೆ.

ಇದು 90Hz ರಿಫ್ರೆಶ್ ದರ, 90.3 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 560 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ 6.74-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ.

ಆಕ್ಟಾ-ಕೋರ್ 12nm ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಜೊತೆಗೆ 6GB ಯ LPDDR4X RAM ಮತ್ತು ARM Mali-G57 GPU ಜೊತೆಗೆ ಸಂಯೋಜಿಸಲ್ಪಟ್ಟಿದೆ.

ಈ ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 108-ಮೆಗಾಪಿಕ್ಸೆಲ್ AI- ಬೆಂಬಲಿತ ಪ್ರಾಥಮಿಕ ಸಂವೇದಕವನ್ನು ಹೊಂದಿದೆ. ಮುಂಭಾಗ ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಡ್ಯುಯಲ್ ಸಿಮ್ ಆಯ್ಕೆ ಹೊಂದಿರುವ ರಿಯಲ್ ಮಿ C53 ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ UI T ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಮೈಕ್ರೋ SD ಕಾರ್ಡ್ ಮೂಲಕ (2TB ವರೆಗೆ) ವಿಸ್ತರಿಸಬಹುದಾದ. ಕ್ಯಾಮೆರಾದಲ್ಲಿ ಅನೇಕ ಮೋಡ್ ಆಯ್ಕೆಗಳನ್ನು ನೀಡಲಾಗಿದೆ.

ರಿಯಲ್ ಮಿ C53 ಸ್ಮಾರ್ಟ್ಫೋನ್ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. 18W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, GPS/AGPS, Wi-Fi, ಬ್ಲೂಟೂತ್ 5, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿವೆ.
Published On - 3:23 pm, Tue, 25 July 23



















